Advertisement
ಏನಿದು ವಿಶುವಲ್ ಆರ್ಟ್ಸ್ವಿಶುವಲ್ ಆರ್ಟ್ಸ್ ಡಿಗ್ರಿ ಎಂದರೆ ಅನೀಮೆಶನ್, ತ್ರೀಡಿ ಡಿಸೈನರ್ ಸಂಬಂಧಪಟ್ಟ ಕೋರ್ಸ್ ಆಗಿದ್ದು, ಟೆಕ್ನಾಲಜಿಯಲ್ಲಿ ಆಸಕ್ತಿಯಿರುವವರು ಇದನ್ನು ಆಯ್ದು ಕೊಳ್ಳಬಹುದು. ಇವರನ್ನು ವಿಶುವಲ್ ಆರ್ಟಿಸ್ಟ್ ಎಂದು ಕರೆಯುತ್ತಾರೆ. ಇದಕ್ಕೆ ಹಲವು ಕೌಶಲಗಳ ಅಗತ್ಯವಿದೆ.
ಟೆಕ್ನಾಲಜಿಗಳು ಅತಿ ವೇಗವಾಗಿ ಅಭಿವೃದ್ಧಿಯಾಗುತ್ತಿವೆ. ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ಅದಕ್ಕೆ ಪೂರಕವಾಗಿ ನಾವು ಅಭಿವೃದ್ಧಿಯಾದರೆ ಹೆಚ್ಚು ಉದ್ಯೋಗಾವಕಾಶಗಳು ಇಲ್ಲಿವೆ. ಹೊಸ ಹೊಸ ಆಲೋಚನೆಗಳು, ಕಲ್ಪನೆಗಳಿದ್ದರೆ ಇಲ್ಲಿ ಉತ್ತಮ ಅವಕಾಶವಿದೆ.
Related Articles
Advertisement
ಗೇಮ್ ಡೆವಲಪ್‌ಮೆಂಟ್: ಯುವಜನಾಂಗಕ್ಕೆ ಗೇಮ್ ಡೆವಲಪ್‌ಮೆಂಟ್‌ನಲ್ಲಿ ಉತ್ತಮ ಅವಕಾಶವಿದ್ದು, ಭಾರತದಲ್ಲಿ ಗೇಮ್ ಡಿಸೈನಿಂಗ್‌ಗೆ ಆದ್ಯತೆ ಹೆಚ್ಚಿದೆ. ಇದರಲ್ಲೂ ಹಲವು ಅವಕಾಶಗಳಿವೆ.
ಕಂಪ್ಯೂಟರ್: ಕಂಪ್ಯೂಟರ್‌ಗಳಲ್ಲಿ ಗೇಮ್ ಡಿಸೈನಿಂಗ್‌ಗಳಿಗೆ ಮಹತ್ವವಿದ್ದೂ ಇಲ್ಲೂ ಹೆಚ್ಚು ಅವಕಾಶವಿದೆ.
ವೆಬ್ ಡೆವಲಪರ್: ವೆಬ್ ಡೆವಲಪರ್ ವೆಬ್‌ಸೈಟ್‌ನ ಕಾರ್ಯಚಟುವಟಿಕೆಗಳನ್ನು ನೋಡಿಕೊಳ್ಳುತ್ತಾರೆ ಮತ್ತು ವೆಬ್‌ಸೈಟ್‌ನಲ್ಲಿನ ಕಂಟೆಂಟ್‌ಗಳನ್ನು ಇವರೇ ನೋಡಿಕೊಳ್ಳುತ್ತಾರೆ.
ಬೇಕಾದ ಕೌಶಲಗಳು: ಉತ್ತಮ ಕಲ್ಪನಾಶಕ್ತಿ ಮತ್ತು ಟೆಕ್ನಾಲಜಿಯಲ್ಲಿ ಆಸಕ್ತಿಯಿದ್ದರೆ ಈ ಡಿಗ್ರಿ ಪಡೆಯಬಹುದು.
ಕಂಪ್ಯೂಟರ್, ಟಿವಿ, ಮೊಬೈಲ್ಗಳ ಬಳಕೆ ಹೆಚ್ಚಾದಂತೆ ಈ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿದೆ. ಟೆಕ್ನಾಲಜಿಯಲ್ಲಿ ಆಸಕ್ತಿ ಮತ್ತು ಕೌಶಲಗಳಿದ್ದರೆ ಇದು ಉತ್ತಮ ಕೋರ್ಸಾಗಿದೆ.
ವಿಶ್ಯುವಲ್ ಆರ್ಟ್ಸ್ ಇರುವ ಕಾಲೇಜುಗಳು
•ಮಾನವ್ ರಚನಾ ಯುನಿವರ್ಸಿಟಿ ಫರಿದಾಬಾದ್
•ಮಾನವ್ ರಚನಾ ಯುನಿವರ್ಸಿಟಿ ಫರಿದಾಬಾದ್
•ಕಾಲೇಜ್ ಆಫ್ ಆರ್ಟ್ -ಯುನಿವರ್ಸಿಟಿ ಆಪ್ ದೆಹಲಿ
•ಪಾಕಲ್ಟಿ ಆಫ್ ವಿಶ್ಯುವಲ್ ಆರ್ಟ್ಸ್, ಬನಾರಸ್ ಹಿಂದೂ ಯುನಿವರ್ಸಿಟಿ
•ರವೀಂದ್ರ ಭಾರತಿ ಯುನಿವರ್ಸಿಟಿ ಕಲ್ಕತ್ತಾ
-ರಂಜಿನಿ ಮಿತ್ತಡ್ಕ