Advertisement

ಮಂಗಳೂರು ವಿ.ವಿ.: ಇಂದಿನಿಂದ ಪದವಿ ಪರೀಕ್ಷೆ

12:31 AM Aug 02, 2021 | Team Udayavani |

ಮಂಗಳೂರು: ಕೊರೊನಾ ಕಾರಣ ಎಪ್ರಿಲ್‌ನಲ್ಲಿ ಮುಂದೂಡಿಕೆಯಾಗಿರುವ ಮಂಗಳೂರು ವಿಶ್ವವಿದ್ಯಾನಿಲಯದ 1, 3, 5 ಹಾಗೂ 7ನೇ ಸೆಮಿಸ್ಟರ್‌ ಪದವಿ ಪರೀಕ್ಷೆಗಳು ಆ. 2ರಿಂದ ನಡೆಯಲಿವೆ. 1 ಹಾಗೂ 3ನೇ ಸೆಮಿಸ್ಟರ್‌ ಸ್ನಾತಕೋತ್ತರ ಪದವಿ ಪರೀಕ್ಷೆಗಳು ಆ. 5ರಂದು ಆರಂಭವಾಗಲಿವೆ.

Advertisement

ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣದಲ್ಲಿ ಏರಿಕೆ ಆಗುತ್ತಿದ್ದರೂ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಬಸ್‌ ಸಮಸ್ಯೆ ಸೇರಿದಂತೆ ಪರೀಕ್ಷೆಗೆ ಹಾಜರಾಗದವರಿಗೆ ಮುಂದಿನ ದಿನದಲ್ಲಿ ವಿಶೇಷ ಪರೀಕ್ಷೆ ನಡೆಸಲು ವಿ.ವಿ ನಿರ್ಧರಿಸಿದೆ.

ಬರಲಾಗದವರಿಗೆ ವಿಶೇಷ ಪರೀಕ್ಷೆ:

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಪಿ.ಎಸ್‌. ಯಡಪಡಿತ್ತಾಯ ಅವರು “ಉದಯವಾಣಿ’ ಜತೆಗೆ ಮಾತನಾಡಿ, “ಆ. 2ರಿಂದ ಪರೀಕ್ಷೆ ನಡೆಯಲಿದೆ. ಕೊರೊನಾ ಮುನ್ನೆಚ್ಚರಿಕೆ ವಹಿಸಿಕೊಂಡು ಕಾಲೇಜುಗಳಲ್ಲಿ ಪರೀಕ್ಷೆ ನಡೆಸ ಲಾಗುವುದು. ಕಾಸರಗೋಡು ಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದಿದ್ದರೆ ಅವರಿಗೆ ಮುಂದಿನ ದಿನದಲ್ಲಿ ವಿಶೇಷ ಪರೀಕ್ಷೆ ನಡೆಸಲಾಗುವುದು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next