Advertisement

ಪ್ರಜಾಪ್ರಭುತ್ವ ಉತ್ಸವಕ್ಕಿಷ್ಟು ವ್ಯಾಖ್ಯಾನ..

02:22 AM Apr 12, 2019 | sudhir |

ಮಂಗಳೂರು: ಭಾರತದ ಮಹಾ ಚುನಾವಣೆಗಳನ್ನು ಜಗತ್ತು ಗಂಭೀರವಾಗಿ ಗಮನಿಸು ತ್ತಿರುತ್ತದೆ. ಜಗತ್ತಿನ ಅತೀ ದೊಡ್ಡ ಪ್ರಜಾತಾಂತ್ರಿಕ ದೇಶ ಭಾರತ. ಇಲ್ಲಿ ಚುನಾವಣೆ ಅಂದರೆ ನಿಜ ಅರ್ಥದ ಪ್ರಜಾತಾಂತ್ರಿಕ ಹಬ್ಬ.

Advertisement

ಮಂಗಳೂರು- ಉಡುಪಿ ಸಹಿತ ಕರಾವಳಿಯ ಪ್ರದೇಶ ಆ ಕಾಲಕ್ಕೆ ಬ್ರಿಟಿಷರ ಪ್ರಮುಖ ಕೇಂದ್ರ ಗಳಲ್ಲೊಂದಾಗಿತ್ತು. ಮಂಗಳೂರು ಕೇಂದ್ರವಾಗಿ ಆಗಿನ ಕೆನರಾ ಜಿಲ್ಲೆಯಿಂದ ಬ್ರಿಟಿಷರು ಆಳುತ್ತಿದ್ದರು. ಕರಾವಳಿಯ ಜಿಲ್ಲೆಗಳು ಆ ಕಾಲಕ್ಕೆ, ಅಂದರೆ 1956ರಲ್ಲಿ ಕರ್ನಾಟಕದ (ಮೈಸೂರು) ಏಕೀಕರಣವಾಗುವವರೆಗೆ ಮದ್ರಾಸ್‌ ಪ್ರಾಂತದಲ್ಲಿದ್ದವು. ಅದು 1947ರವರೆಗೆ ಮದ್ರಾಸ್‌ ಪ್ರಸಿಡೆನ್ಸಿ ಆಗಿತ್ತು. ಹೀಗೆ, ಇಲ್ಲಿನ ಆಡಳಿತ ವ್ಯವಸ್ಥೆಯ ಮೇಲೆ ಸ್ವಾತಂತ್ರÂಪೂರ್ವದ ಬ್ರಿಟಿಷರ (ಮತ್ತು ಪೋರ್ಚುಗೀಸರ);

ಸ್ವಾತಂತ್ರಾÂನಂತರದ ಆಡಳಿತದ ಪ್ರಭಾವವಿದೆ ಎಂದು ಗುರುತಿಸಬಹುದು.
ಭಾರತದ 17ನೇ ಲೋಕಸಭೆಗೆ ಎ.18ರಂದು ಚುನಾವಣೆ ನಡೆಯಲಿರುವುದಕ್ಕೆ ದಿನಗಣನೆ ಆರಂಭ ವಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ವಿಚಾರಗಳಿಗೆ ಸಂಬಂಧಿಸಿದ ವಿಶ್ಲೇಷಣೆ ಗಳು ಪ್ರಸ್ತುತವಾಗಬಹುದು.

ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳೇ ಆಧಾರ ಸ್ತಂಭಗಳು. ಇತ್ತೀಚೆಗಿನ ದಶಕಗಳಲ್ಲಿ ಅವು ಕೆಲವೆಡೆ ಹಳಿ ತಪ್ಪಿ ದಾಗ ಎಚ್ಚರಿಸಿದ್ದು ಮಾಧ್ಯಮ ರಂಗ. ವಿಪಕ್ಷ ಗಳು ಮಾಡಬೇಕಾಗಿದ್ದ ಕಾರ್ಯವನ್ನು ಈ ರಂಗ ಮಾಡುತ್ತಿದೆ. ಆದರೆ, ಒಟ್ಟು ಅರ್ಥದಲ್ಲಿ ಸಾಮೂಹಿಕ ಹೊಣೆಗಾರಿಕೆಯ ಪಾಲನೆಯಾಗಬೇಕು. ಶಾಸಕಾಂಗ ಕಾಯಿದೆ ಕಾನೂನುಗಳನ್ನು ರೂಪಿಸುತ್ತದೆ. ಅಗತ್ಯ ವಿದ್ದಲ್ಲಿ ಸಾಂವಿಧಾನಿಕ- ಶಾಸನಾತ್ಮಕ ತಿದ್ದುಪಡಿ ಗಳನ್ನು ನಡೆಸುತ್ತದೆ. ದೇಶ- ರಾಜ್ಯ ವ್ಯಾಪ್ತಿಯಲ್ಲಿ ಪ್ರತ್ಯೇಕ ಕಾಯಿದೆಗಳು ಕೂಡ ಅಂಗೀಕಾರವಾಗುತ್ತದೆ.

ಸ್ಥಳೀಯಾಡಳಿತಗಳಿಗೆ ಸಂಬಂಧಿಸಿ ಪ್ರತ್ಯೇಕವಾದ ಕೆಲವು ನಿಯಮಗಳಿರುತ್ತವೆ. ಇನ್ನು ವಿಕೇಂದ್ರೀಕೃತ ಗ್ರಾಮೀಣ ಆಡಳಿತದಲ್ಲಿ ಜಿ. ಪಂ., ತಾ. ಪಂ., ಗ್ರಾ. ಪಂಚ.ಗಳೆಂಬ ಸ್ತರಗಳಿರುತ್ತವೆ.

Advertisement

ಅಂಗೀಕೃತ ಕಾಯಿದೆಗಳು ಕಾರ್ಯಾಂಗದ ಮೂಲಕ ಅನುಷ್ಠಾನವಾಗಬೇಕು. ಸಾಮಾನ್ಯ ಕಡತ ಗಳು ಕೂಡ ವರ್ಷಗಟ್ಟಲೆ, ತಲೆಮಾರುಗಳಲ್ಲಿ ಕೂಡ “ಕೆಂಪು ಪಟ್ಟಿ’ಯ ಹಿಡಿತದಲ್ಲಿ ನಲುಗುತ್ತಿರುವ ನಿದರ್ಶನಗಳಿವೆ. ಇದರ ನಿವಾರಣೆಗೆ ಶಾಸಕಾಂಗ ಮಹತ್ವದ ಹೊಣೆ ವಹಿಸಬೇಕು. ಕಾರ್ಯಾಂಗದ ಮೇಲೆ ಹಿಡಿತವಿಲ್ಲದಿದ್ದರೆ ಶಾಸಕಾಂಗಕ್ಕೆ ಈ ಕಾರ್ಯ ನಡೆಸಲು ಸಾಧ್ಯವಿಲ್ಲ. ಆಗ, ನ್ಯಾಯಾಂಗ ಮಧ್ಯ ಪ್ರದೇಶಿಸಬೇಕಾಗುತ್ತದೆ. ಈಗ ಅಂಥ ಅನೇಕಾನೇಕ ಪ್ರಕರಣಗಳು ನಡೆಯುತ್ತಿವೆ.

ಅಂದಹಾಗೆ…
ಯಾವುದು ಶಾಶ್ವತ!? ದಶಕದ ಹಿಂದೆ ಮಂಗಳೂರು ತಾಲೂಕಿನಲ್ಲಿ ನಡೆದ ಘಟನೆ ಇದು. ನೇರ ನಡೆನುಡಿಯ ವಿಪಕ್ಷೀಯ ಶಾಸಕರೋರ್ವರು, ತಮ್ಮ ಪಕ್ಷದ ಕಾರ್ಯಕರ್ತನ ಬಂಧನ ವಿರೋಧಿಸಿ ಠಾಣೆಯಲ್ಲಿ ಪ್ರತಿಭಟಿ ಸಿದರು. ಆಗ ಠಾಣಾಧಿಕಾರಿ- “ನೀವು 5 ವರ್ಷ ಅಧಿಕಾರದಲ್ಲಿ ಇರುತ್ತೀರಿ. ಆದರೆ, ನಿವೃತ್ತಿಯಾಗುವವರೆಗೂ ನಮ್ಮ ಅಧಿಕಾರ ಶಾಶ್ವತ ಎಂದರು. ಮುಂದೆ ಕೆಲವೇ ದಿನಗಳಲ್ಲಿ ಒಂದು ಘಟನೆಯಲ್ಲಿ ಆ ಅಧಿಕಾರಿ ಮಾಡಿದ ತಪ್ಪಿಗೆ, ಜನರು ಪ್ರತಿಭಟನೆಗೆ ಸಿದ್ಧರಾದರು; ಈ ಪ್ರತಿಭಟನೆ ನಡೆಯದಂತೆ ಆ ಅಧಿಕಾರಿಯವರು ಈ ಶಾಸಕರ ಮನೆಗೆ ಬಂದು ಗೋಗರೆಯುವಂತಾಯಿತು!

- ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next