ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಫೆ. 10ರಂದು ರಾಜ್ಯ ಮಟ್ಟದ ವಿವಿಧ ವಿಶ್ವವಿದ್ಯಾನಿಲಯಗಳ ಭಾರತೀಯ ಶೌರ್ಯಪರಂಪರೆ ವಿಚಾರ ಸಂಕಿರಣವನ್ನು ಬೆಳಗ್ಗೆ 9.45ಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸುವರು ಎಂದು ಪ್ರಕಟನೆ ತಿಳಿಸಿದೆ.
ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ಅಧ್ಯಕ್ಷತೆ ವಹಿಸುವರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಡಾ| ಪ್ರಭಾಕರ ಭಟ್ ಪ್ರಸ್ತಾವನೆಗೈಯುವರು.
ವಿಚಾರ ಸಂಕಿರಣದ ಮೊದಲ ಅವಧಿಯಲ್ಲಿ ಕರ್ನಾಟಕ ಉತ್ತರ ರಾ.ಸ್ವ. ಸಂಘದ ಪ್ರಾಂತ ಸಹ ಬೌದ್ಧಿಕ್ ಪ್ರಮುಖ್
ಡಾ| ರವೀಂದ್ರ ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಶೌರ್ಯ ಪರಂಪರೆ ವಕ್ತಾರರಾಗಿ ಮಾತನಾಡುವರು. ಎರಡನೇ ಅವಧಿ ಯಲ್ಲಿ ಯೋಧರೊಂದಿಗೆ ಸಂವಾದ ನಡೆಯುವುದು.
ಮೂರನೇ ಅವಧಿಯಲ್ಲಿ ಸಂಸ್ಕಾರ ಭಾರತಿ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಆದರ್ಶ ಗೋಖಲೆ ವಕ್ತಾರನಾಗಿ ಪಾಲ್ಗೊಳ್ಳುವರು. ನಾಲ್ಕನೇ ಅವಧಿಯಲ್ಲಿ ಜಿಜ್ಞಾಸಾ ಮುಕ್ತ ಚಿಂತನ ಪ್ರಶ್ನೋತ್ತರ ಅನಿಸಿಕೆ ನಡೆಯುವುದು.
ಸಮಾರೋಪ
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಸಂಚಾಲಕ ವಸಂತ ಮಾಧವ ಅಧ್ಯಕ್ಷತೆಯಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೇಷ್ಠ ಪ್ರಕಟನೆ ವಿವರ ತಿಳಿಸಿದೆ.