ಹೊಸದಿಲ್ಲಿ: ರಕ್ಷಣಾ ಕ್ಷೇತ್ರದ ಉತ್ಪನ್ನಗಳನ್ನು ರಫ್ತು ಮಾಡುವಲ್ಲಿ ದೇಶ ವಿಶೇಷ ಸಾಧನೆ ಮಾಡಿದೆ. 2021-22ನೇ ಸಾಲಿಗೆ ಸಂಬಂಧಿಸಿದಂತೆ ಒಟ್ಟು 13 ಸಾವಿರ ಕೋಟಿ ರೂ. ಮೌಲ್ಯದ ತಂತ್ರಜ್ಞಾನ ಮತ್ತು ಶಸ್ತ್ರಾಸ್ತ್ರಗಳನ್ನು ಸರಕಾರ ರಫ್ತು ಮಾಡಿದೆ.
ಈ ಪೈಕಿ ಸರಕಾರಿ ಸ್ವಾಮ್ಯಕ್ಕೆ ಒಳಪಟ್ಟ ಸಂಸ್ಥೆಗಳಿಂದ ಶೇ.30 ಮತ್ತು ಖಾಸಗಿ ಸಂಸ್ಥೆಗಳಿಂದ ಶೇ.70 ಕೊಡುಗೆ ಇದೆ. ಅಮೆರಿಕ, ಆಗ್ನೇಯ ಏಷ್ಯಾ, ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾ ಖಂಡದ ದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ದೇಶದ ರಕ್ಷಣಾ ಉತ್ಪನ್ನಗಳು ರಫ್ತಾಗಿವೆ ಎಂದು ರಕ್ಷಣಾ ಸಚಿವಾಲಯದ ಉತ್ಪಾ ದನ ವಿಭಾಗದ ಹೆಚ್ಚುವರಿ ಕಾರ್ಯ ದರ್ಶಿ ಸಂಜಯ ಜೌಜು ತಿಳಿಸಿದ್ದಾರೆ.
13 ಸಾವಿರ ಕೋಟಿ ರೂ. ಮೌಲ್ಯದ ರಫ್ತು ಇದುವರೆಗಿನ ಸಾಧನೆಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ. 2020- 21ರಲ್ಲಿ 8,434 ಕೋಟಿ ರೂ., 2019-20ನೇ ಸಾಲಿ ನಲ್ಲಿ 9,115 ಕೋಟಿ ರೂ., 2015-16ನೇ ಸಾಲಿನಲ್ಲಿ 2,059 ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರ ಮತ್ತು ತಂತ್ರಜ್ಞಾನವನ್ನು ರಫ್ತು ಮಾಡ ಲಾಗಿತ್ತು. ಹೀಗಾಗಿ, 2020-21ನೇ ಸಾಲಿನ ರಫ್ತು ಹಿಂದಿನ ಐದು ವರ್ಷಗಳಿಗೆ ಹೋಲಿಕೆ ಮಾಡಿದರೆ ಎಂಟು ಪಟ್ಟು ಹೆಚ್ಚಾಗಿದೆ.
ವರ್ಷದ ಜನವರಿಯ ಲ್ಲಿ ಕೇಂದ್ರ ಸರಕಾರ ಬ್ರಹ್ಮೋಸ್ ಕ್ಷಿಪಣಿಯನ್ನು ಫಿಲಿಪ್ಪೀನ್ಸ್‌ಗೆ ರಫ್ತು ಮಾಡುವ ನಿಟ್ಟಿನಲ್ಲಿ 2,770 ಕೋಟಿ ರೂ. ಮೊತ್ತದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಶಸ್ತ್ರಾಸ್ತ್ರ ರಫ್ತಿಗೆ ಪ್ರೋತ್ಸಾಹ ನೀಡುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.