Advertisement

Rafale-M jets;ನೇವಿಗೆ ಸಿಗಲಿದೆ 26 ರಫೇಲ್‌: ಯುದ್ಧವಿಮಾನ ಖರೀದಿ ಬಗ್ಗೆ ಘೋಷಣೆ

09:30 PM Jul 15, 2023 | Team Udayavani |

ನವದೆಹಲಿ/ಪ್ಯಾರಿಸ್‌:ನಿರೀಕ್ಷೆಯಂತೆಯೇ ಕೇಂದ್ರ ಸರ್ಕಾರ ಫ್ರಾನ್ಸ್‌ನಿಂದ ನೌಕಾ ಪಡೆಯ ಆವೃತ್ತಿಗಾಗಿ ಇರುವ ರಫೇಲ್‌ ಯುದ್ಧ ವಿಮಾನ ಖರೀದಿ ಮಾಡಲಿದೆ. ಈ ಖರೀದಿ ಮಾಡುವ ಬಗ್ಗೆ ರಕ್ಷಣಾ ಸಚಿವಾಲಯ ಶನಿವಾರ ನವದೆಹಲಿಯಲ್ಲಿ ಅನುಮೋದನೆ ನೀಡಿದೆ.

Advertisement

ಅದಕ್ಕೆ ಪೂರಕವಾಗಿ ಪ್ಯಾರಿಸ್‌ನಲ್ಲಿ ವಿಮಾನ ತಯಾರಕ ಕಂಪನಿ ಡಸೊÕà ಏವಿಯೇಷನ್‌ ಕೂಡ ಈ ಬಗ್ಗೆ ಘೋಷಣೆ ಮಾಡಿದೆ.

ದೇಶದ ಸೇನಾಪಡೆಯ ವ್ಯಾಪ್ತಿಯಲ್ಲಿ ಈಗಾಗಲೇ 36 ರಫೇಲ್‌ ಯುದ್ಧ ವಿಮಾನಗಳು ಇದ್ದು, ಅವುಗಳನ್ನು ದೇಶದ ವಿವಿಧ ವಾಯುನೆಲೆಗಳಲ್ಲಿ ನಿಯೋಜನೆ ಮಾಡಲಾಗಿದೆ. ಹೊಸತಾಗಿ ಖರೀದಿಸಲು ಉದ್ದೇಶಿಸಿದ 26 ವಿಮಾನಗಳೂ ಅಧಿಕೃತವಾಗಿ ಸೇರ್ಪಡೆಯಾದ ಬಳಿಕ ದೇಶದ ಸೇನಾಪಡೆಗಳ ಬಳಿ ಒಟ್ಟು 62 ರಫೇಲ್‌ ಯುದ್ಧ ವಿಮಾನಗಳು ಹೊಂದುವಂತಾಗಲಿದೆ.

ಶುಕ್ರವಾರ ಪ್ಯಾರಿಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್‌ ಅಧ್ಯಕ್ಷ ಇಮಾನ್ಯುವಲ್‌ ಮ್ಯಾಕ್ರನ್‌ ನಡುವಿನ ದ್ವಿಪಕ್ಷೀಯ ಮಾತುಕತೆಯ ಬಳಿಕ ನೌಕಾಪಡೆಯ ಆವೃತ್ತಿಯ ರಫೇಲ್‌ ಖರೀದಿಯ ಬಗ್ಗೆ ಉಲ್ಲೇಖ ಇರಲಿಲ್ಲ.

ಸತತ ಪರೀಕ್ಷೆ:
ಭಾರತೀಯ ನೌಕಾಪಡೆಯ ಹಿರಿಯ ಅಧಿಕಾರಿಗಳೇ ಇತ್ತೀಚೆಗೆ ರಫೇಲ್‌ನ ಕಾರ್ಯವಿಧಾನವನ್ನು ಸತತವಾಗಿ ಪರೀಕ್ಷೆ ನಡೆಸಿದ್ದರು. ಅದು ಭಾರತ ನೌಕಾಪಡೆಯ ಅಗತ್ಯಗಳನ್ನು ಪೂರೈಸಲಿದೆ ಎಂದು. ಬಳಿಕವೇ ಖರೀದಿಯ ತೀರ್ಮಾನವನ್ನು ನವದೆಹಲಿಯಲ್ಲಿ ಭಾರತ ಸರ್ಕಾರ ಮಾಡಿದೆ ಎಂದು ಡಸೊÕà ಏವಿಯಷನ್‌ ಪ್ರಕಟಿಸಿದೆ.

Advertisement

ಫ್ರಾನ್ಸ್‌ ಬಳಿಕದ ದೇಶ:
ರಫೇಲ್‌ ಯುದ್ಧ ವಿಮಾನ ಮತ್ತು ನೌಕಾಪಡೆಯ ಆವೃತ್ತಿಯನ್ನು ಸದ್ಯ ಹೊಂದಿರುವುದು ಫ್ರಾನ್ಸ್‌ ಮಾತ್ರ. ಹೊಸ ಒಪ್ಪಂದದ ಬಳಿಕ ಶೀಘ್ರದಲ್ಲಿಯೇ ಭಾರತಕ್ಕೂ ನೌಕಾಪಡೆ ಆವೃತ್ತಿಯ ರಫೇಲ್‌ ಅನ್ನು ಹೊಂದಲಿರುವುದರಿಂದ ಅಂಥ ವ್ಯವಸ್ಥೆ ಹೊಂದಿದ 2ನೇ ದೇಶವಾಗಲಿದೆ. ಅದನ್ನು ಸ್ವದೇಶಿಯವಾಗಿಯೇ ನಿರ್ಮಿಸಲಾಗಿರುವ ಯುದ್ಧ ನೌಕೆ ಐಎನ್‌ಎಸ್‌ ವಿಕ್ರಾಂತ್‌ನಲ್ಲಿ ನಿಯೋಜನೆ ಮಾಡಲಾಗುತ್ತದೆ.

ಒಪ್ಪಂದ:
ಫ್ರಾನ್ಸ್‌ ಜತೆಗಿನ ರಕ್ಷಣಾ ಒಪ್ಪಂದದಲ್ಲಿ 3 ಸ್ಕಾಪೇìನ್‌ ಸಬ್‌ಮರೀನ್‌ ನಿರ್ಮಾಣ, ಯುದ್ಧ ವಿಮಾನಗಳನ್ನು ಜಂಟಿಯಾಗಿ ನಿರ್ಮಾಣ ಮಾಡುವ ಬಗ್ಗೆ ಶುಕ್ರವಾರ ನಿರ್ಧರಿಸಲಾಗಿತ್ತು.

ಬನ್ನಿ ನಮ್ಮಲ್ಲಿ ಹೂಡಿಕೆ ಮಾಡಿ:
ಪ್ಯಾರಿಸ್‌ನಲ್ಲಿ ಫ್ರಾನ್ಸ್‌ನ 16 ಪ್ರಮುಖ ಕಂಪನಿಗಳ ಸಿಇಒಗಳ ಜತೆಗೆ ಪ್ರಧಾನಿ ಸಭೆ ನಡೆಸಿದ್ದರು. ಅದರಲ್ಲಿ ಭಾರತದ 24 ಕಂಪನಿಗಳ ಪ್ರತಿನಿಧಿಗಳು ಇದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು “ಭಾರತಕ್ಕೆ ಬಂದು ಹೂಡಿಕೆ ಮಾಡಿ. ನಮ್ಮ ದೇಶದಲ್ಲಿ ಆರ್ಥಿಕ ಸುಧಾರಣೆಗಳು ತೃಪ್ತಿಕರವಾಗಿ ನಡೆಯುತ್ತಿವೆ. ಅದರ ಸದುಪಯೋಗವನ್ನು ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಇಮಾನ್ಯುವೆಲ್‌ ಮ್ಯಾಕ್ರನ್‌ ಇದ್ದರು. ವಿಮಾನಯಾನ, ಔಷಧೋದ್ಯಮ, ರಕ್ಷಣೆ, ತಂತ್ರಜ್ಞಾನ, ಇಂಧನ ಸೇರಿಂತೆ ಪ್ರಮುಖ ಕ್ಷೇತ್ರಗಳ ಕಂಪನಿಗಳ ಮುಖ್ಯಸ್ಖರು, ಸಿಇಒಗಳು ಇದ್ದರು.

ಸಂತಸವಾಗಿದೆ:
ಫ್ರಾನ್ಸ್‌ ಪ್ರವಾಸ ಯಶಸ್ವಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ ಮತ್ತು ಬಾಸ್ಟಿಲ್‌ ದಿನದ ಪರೇಡ್‌ನ‌ಲ್ಲಿ ಭಾಗವಹಿಸಿದ್ದಕ್ಕೂ ತೃಪ್ತಿ ವ್ಯಕ್ತಪಡಿಸಿದ್ದಾರೆ. ಇದೊಂದು ಯಾವತ್ತೂ ನೆನಪಿನಲ್ಲಿ ಉಳಿಯುವ ಪ್ರವಾಸ ಇದಾಗಿದೆ. ಅದರಲ್ಲಿ ಭಾರತೀಯ ಸೇನೆಯ ಮೂರು ವಿಭಾಗಗಳ ಯೋಧರು ಭಾಗವಹಿಸಿದ್ದು ಹರ್ಷ ತಂದಿದೆ. ಅದಕ್ಕಾಗಿ ಫ್ರಾನ್ಸ್‌ ಅಧ್ಯಕ್ಷ ಇಮಾನ್ಯುವಲ್‌ ಮ್ಯಾಕ್ರನ್‌ ಅವರಿಗೆ ಕೃತಜ್ಞತೆ ವ್ಯಕ್ತಪಡಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಮೋದಿ-ಮ್ಯಾಕ್ರಾನ್‌ ಸೆಲ್ಫಿ
ಎರಡು ದಿನಗಳ ಫ್ರಾನ್ಸ್‌ ಪ್ರವಾಸದ ಮುಕ್ತಾಯದ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಅಲ್ಲಿ ಅಧ್ಯಕ್ಷ ಇಮಾನ್ಯುವೆಲ್‌ ಮ್ಯಾಕ್ರನ್‌ ಅವರು ಸೆಲ್ಫಿ ತೆಗೆಸಿಕೊಂಡಿದ್ದಾರೆ. ಫ್ರಾನ್ಸ್‌ ಅಧ್ಯಕ್ಷರು ಅದನ್ನು ಟ್ವೀಟ್‌ ಮಾಡಿ “ಭಾರತ ಮತ್ತು ಫ್ರಾನ್ಸ್‌ ನಡುವಿನ ಸ್ನೇಹ, ಬಾಂಧ್ಯವ್ಯ ದೀರ್ಘ‌ ಕಾಲದ ವರೆಗೆ ಇರಲಿ’ ಹಿಂದಿ, ಇಂಗ್ಲಿಷ್‌ ಮತ್ತು ಫ್ರೆಂಚ್‌ ಭಾಷೆಯಲ್ಲಿ ಬರೆದುಕೊಂಡಿದ್ದಾರೆ. ಅದಕ್ಕೆ ಉತ್ತರವಾಗಿ ಟ್ವೀಟ್‌ ಮಾಡಿದ ಪ್ರಧಾನಿ ನರೇಂದ್ರ ಮೋದಿ “ಶಾಶ್ವತ ಸ್ನೇಹಿತರು’ (ಫ್ರೆಂಡ್ಸ್‌ ಫಾರ್‌ ಎವರ್‌) ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.