Advertisement

Defense; 39,125 ಕೋಟಿ ರೂ. ವೆಚ್ಚದ 5 ಮಿಲಿಟರಿ ಒಪ್ಪಂದಗಳಿಗೆ ಸಹಿ

12:09 AM Mar 02, 2024 | Team Udayavani |

ನವದೆಹಲಿ: ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ರೂಸ್‌ ಕ್ಷಿಪಣಿಗಳು, ರೇಡಾರ್‌ಗಳು, ಮಿಗ್‌-29 ಯುದ್ಧ ವಿಮಾನಗಳಿಗೆ ಏರೋ ಎಂಜಿನ್‌ಗಳು ಸೇರಿ ಒಟ್ಟು 39,125 ಕೋಟಿ ರೂ. ವೆಚ್ಚದ 5 ಮಿಲಿಟರಿ ಒಪ್ಪಂದಗಳಿಗೆ ಶುಕ್ರವಾರ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ. ಪೂರ್ವ ಲಡಾಖ್‌ನಲ್ಲಿ ಚೀನಾ ಕ್ಯಾತೆಯ ನಡುವೆ ಭಾರತದಿಂದ ಈ ಬೃಹತ್‌ ಮಿಲಿಟರಿ ಯೋಜನೆಗಳು ಹೆಚ್ಚು ಮಹತ್ವ ಪಡೆದಿವೆ.

Advertisement

ಬ್ರಹ್ಮೋಸ್‌ ಕ್ಷಿಪಣಿಗಳಿಗಾಗಿ 2 ಪ್ರತ್ಯೇಕ ಒಪ್ಪಂದಗಳು ಏರ್ಪಟ್ಟಿವೆ. 19,518 ಕೋಟಿ ರೂ. ವೆಚ್ಚದಲ್ಲಿ ಬ್ರಹ್ಮೋಸ್‌ ಕ್ಷಿಪಣಿ ಖರೀದಿಗಾಗಿ ಬ್ರಹ್ಮೋಸ್‌ ಏರೋಸ್ಪೇಸ್‌ ಪ್ರೈ. ಲಿ. ಜತೆಗೆ ಒಪ್ಪಂದವಾಗಿದೆ. 5,5249.72 ಕೋಟಿ ರೂ. ವೆಚ್ಚದಲ್ಲಿ ಮಿಗ್‌-29 ಯುದ್ಧ ವಿಮಾನಗಳಿಗಾಗಿ ಎಚ್‌ಎಎಲ್‌ ನಿಂದ ಆರ್‌ಡಿ-33 ಏರೋ ಎಂಜಿನ್‌ಗಳನ್ನು ಖರೀದಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.