Advertisement

ಕೋವಿಡ್‌ 19 ವಾರಿಯರ್ಸ್‌ಗೆ ರಕ್ಷಣೆ ನೀಡಿ

07:36 AM May 15, 2020 | Lakshmi GovindaRaj |

ಅರಸೀಕೆರೆ: ಕೋವಿಡ್‌ 19 ಸೋಂಕು ನಿಯಂತ್ರಣ ಕ್ಕಾಗಿ ಶ್ರಮಿಸುತ್ತಿರುವ ವಿವಿಧ ಇಲಾಖೆಗಳ ಕಾಯಂ ಹಾಗೂ ದಿನಗೂಲಿ ನೌಕರರರಿಗೆ (ಕೋವಿಡ್‌ 19 ವಾರಿಯರ್ಸ್‌ ) ಸೂಕ್ತ ರಕ್ಷಣೆ ಹಾಗೂ ವಿವಿಧ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಸಿಐಟಿಯು ಕಾರ್ಮಿಕ ಸಂಘಟನೆ  ಅಧ್ಯಕ್ಷರು ತಹಶೀಲ್ದಾರ್‌ ಸಂತೋಷ್‌ ಕುಮಾರ್‌ ಅವರಿಗೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ಸಂಘಟನೆ ಅಧ್ಯಕ್ಷೆ ಜ್ಯೋತಿ, ಸೆಂಟರ್‌ ಆಫ್ ಇಂಡಿಯನ್‌ ಟ್ರೇಡ್‌  ಯೂನಿಯನ್‌ ಕಾರ್ಮಿಕ ಸಂಘಟನೆ ಕೆರೆಯ ಮೇರೆಗೆ ಮೇ 14 ರಂದು ಬೇಡಿಕೆ ದಿನವನ್ನಾಗಿ ಆಚರಿಸುತ್ತಿದ್ದು, ಕೋವಿಡ್‌ 19 ನಿಯಂತ್ರಣಕ್ಕಾಗಿ ವಿವಿಧ ಇಲಾಖೆಗಳ ಕಾಯಂ ನೌಕರರು ಮತ್ತು ದಿನಗೂಲಿ ನೌಕರರು ಗುತ್ತಿಗೆ ಆಧಾರಿತ ನೌಕರರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ.

ಅವರಿಗೆ ಸೂಕ್ತ ಪಿಪಿಐ ಕಿಟ್‌ ರಕ್ಷಣೆಗಾಗಿ ನೀಡಬೇಕು. ಕುಟುಂಬದ ಸದಸ್ಯರನ್ನು ಒಳಗೊಂಡಂತೆ 50 ಲಕ್ಷದ ಮಿಮೆ ಸೌಲಭ್ಯ ಕಲ್ಪಿಸಬೇಕು. ಸೋಂಕಿತ ನೌಕರರಿಗೆ 5 ಲಕ್ಷ ರೂ. ಪರಿಹಾರ ನೀಡಬೇಕು ಅಲ್ಲದೇ  ಪ್ರತಿ ತಿಂಗಳು ಹೆಚ್ಚುವರಿ ವೇತನವನ್ನು ಸರ್ಕಾರ ಪಾವತಿಸಬೇಕು. ಬಿಸಿಯೂಟದ ನೌಕರರಿಗೆ ನಿಲ್ಲಿಸಿರುವ 3 ತಿಂಗಳ ವೇತನವನ್ನು ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ತಾವುಗಳು ಮುಖ್ಯಮಂತ್ರಿಗಳಿಗೆ ಮನವಿ  ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಬಿಸಿಯೂಟ ನೌಕರರು ಸೇರಿದಂತೆ ಸಿಐಟಿಯು ಕಾರ್ಮಿಕ ಸಂಘಟನೆಯ ನೌಕರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next