Advertisement

ಸೇನಾ ಬಲಕ್ಕೆ ಆಡಳಿತವೇ ಅಡ್ಡಿ

12:42 PM Feb 27, 2018 | Sharanya Alva |

ನವದೆಹಲಿ: ಭಾರತೀಯ ಸೇನೆಗೆ ಶಸ್ತ್ರಾಸ್ತ್ರ ಖರೀದಿಸುವ ಪ್ರಕ್ರಿಯೆಗೆ ಪದೇ ಪದೆ ಹಿನ್ನಡೆಯಾಗುತ್ತಿರುವುದರ ಹಿಂದಿನ ಕಾರಣಗಳನ್ನು ಪತ್ತೆ ಹಚ್ಚಿ, ಆಡಳಿತಾತ್ಮಕ ಸುಧಾರಣೆಗಳನ್ನು ಜಾರಿಗೆ ತರುವ ಉದ್ದೇಶದಿಂದ ರಕ್ಷಣಾ ಸಚಿವಾಲಯದ ಸಹಾಯಕ ಸಚಿವ ಸುಭಾಷ್‌ ಭಾಮ್ರೆ, ಕಳೆದ ವರ್ಷಾಂತ್ಯದಲ್ಲಿ ತಯಾರಿಸಿದ್ದ ವರದಿಯನ್ನು ಖಾಸಗಿ ಮಾಧ್ಯಮವೊಂದು ಬಹಿರಂಗಗೊಳಿಸಿದೆ.

Advertisement

ಸೇನಾ ವಲಯದ ಆಡಳಿತದಲ್ಲಿನ ಸುಮಾರು 27 ಲೋಪ ದೋಷಗಳನ್ನು ಸಚಿವಾಲಯದ ವರದಿಯಲ್ಲಿ ಉಲ್ಲೇಖೀಸಲಾಗಿದ್ದು, ಇದು ಭಾರತೀಯ ಸೇನೆಯ ಬಲವರ್ಧನೆಗೆ ಹೇಗೆ ಮಾರಕವಾಗಿದೆ ಹಾಗೂ ರಕ್ಷಣಾ ಇಲಾಖೆಗೆ “ಮೇಕ್‌ ಇನ್‌ ಇಂಡಿಯಾ’ದಿಂದ ಸಿಗಬೇಕಿದ್ದ
ನೆರವು ಹೇಗೆ ಹಳ್ಳ ಹಿಡಿದಿದೆ ಎಂಬುದರ ಮೇಲೆ ಬೆಳಕು ಚೆಲ್ಲಿದೆ ಎಂದು ಆಂಗ್ಲ ಸುದ್ದಿವಾಹಿನಿಯೊಂದು ವರದಿ ಮಾಡಿದೆ. 

ಎಲ್ಲ ಹಂತದಲ್ಲೂ ವಿಳಂಬ: ವರದಿಯಲ್ಲಿ ಉಲ್ಲೇಖೀಸಲಾಗಿ ರುವ ಹಲವು ಕಾರಣಗಳಿಂದಾಗಿ ಸೇನೆಗೆ ಅಗತ್ಯವಾಗಿ ಬೇಕಿರುವ ಶಸ್ತ್ರಾಸ್ತ್ರಗಳ ಸರಬರಾಜು ವಿಳಂಬವಾಗಿದೆ. 2016ರಲ್ಲಿ ಶಸ್ತ್ರಾಸ್ತ್ರ ಖರೀದಿ ವಿಚಾರದಲ್ಲಿ ಮನವಿ ಬಂದಾಗಿನಿಂದ ಖರೀದಿವರೆಗೆ ಸರ್ಕಾರ ವಿಧಿಸಿರುವ ಗಡುವಿನ ಅವಧಿಗೆ ಹೋಲಿಸಿದರೆ, 2.6ರಿಂದ 15.4 ಪಟ್ಟು ತಡ ಆಗುತ್ತಿದೆ. ಇನ್ನು, ಶಸ್ತ್ರಾಸ್ತ್ರ ಖರೀದಿಗೆ ಆರ್‌ಎಫ್ಪಿ ಹಂತಕ್ಕೆ ಅರ್ಜಿ ಬಂದರೆ, ಅದು ಸಚಿವಾಲಯ ಮಟ್ಟ ತಲುಪಲು 120 ದಿನ ಬೇಕಾಗಿದ್ದು, ಇದು 2016ರ ಗಡುವಿನ ಅವಧಿಯ ಆರು ಪಟ್ಟು ಸಮಯವನ್ನು ವ್ಯರ್ಥಗೊಳಿಸುತ್ತದೆ ಎಂದು ಹೇಳಲಾಗಿದೆ. 

ಶಸ್ತ್ರಾಸ್ತ್ರ ಖರೀದಿ “ಪ್ರಸ್ತಾವನೆಗೆ ಮನವಿ’ (ಆರ್‌ಎಫ್ಪಿ) ಹಂತಕ್ಕೆ ಬಂದ ಮೇಲೆ, ಆ ಕಡತಕ್ಕೆ ಹಸಿರು ನಿಶಾನೆ ತೋರಲು ಸರಾಸರಿ 120 ವಾರಗಳನ್ನು ತೆಗೆದುಕೊಳ್ಳಲಾಗಿದೆ. ಅಂದರೆ 2016ರಲ್ಲಿ ಸಚಿವಾಲಯವೇ ಹಾಕಿಕೊಂಡ ಗಡುವಿಗಿಂತ 6 ಪಟ್ಟು ಹೆಚ್ಚು ಸಮಯ ತೆಗೆದುಕೊಳ್ಳಲಾಗಿದೆ.

ವರದಿಯ ಪ್ರಮುಖಾಂಶಗಳು
*ಒಂದು ಸಾಮಾನ್ಯ ಸೌಲಭ್ಯ ಪಡೆಯಲೂ ಹಲವಾರು ಸ್ತರಗಳಲ್ಲಿನ ಅಧಿಕಾರಿಗಳಿಂದ ಒಪ್ಪಿಗೆ ಬೇಕಿರುವುದು.
* ಶಸ್ತ್ರಾಸ್ತ್ರ ಖರೀದಿಗೆ “ಪ್ರಸ್ತಾವನೆಗೆ ಮನವಿ’ (ಆರ್‌ಎಫ್ಪಿ) ದಿಂದ, ರಕ್ಷಣಾ ಇಲಾ ಖೆವರೆಗೆ 9 ಹಂತ ದಾಟಿ ಬರಬೇಕು.
* ಆರ್‌ಎಫ್ಪಿ ಹಂತದಿಂದ ಹಿಡಿದು ಶಸ್ತ್ರ ಖರೀದಿಯವರೆಗೆ 120 ವಾರಗಳ ಕಾಲ ವಿಳಂಬವಾಗುವುದು.
*ನಿರ್ಧಾರ ಕೈಗೊಳ್ಳಲು ಹಲವರಿಗೆ ಅಧಿಕಾರ ಕೊಟ್ಟಿರುವುದ ರಿಂದ ಸರ್ವಸಮ್ಮತ ಅಭಿಪ್ರಾಯ ರೂಪುಗೊಳ್ಳದಿರುವುದು.
*ಯೋಧರ ಅಗತ್ಯಗಳಿಗೆ ಅಧಿಕಾರಿ ವರ್ಗದಿಂದ ಮಂದಗತಿಯ ಸ್ಪಂದನೆ ಸಿಗುತ್ತಿರುವುದು.
* ಯಾವುದೇ ಸಮಸ್ಯೆ ನಿವಾರಣೆಗೆ ಅಧಿಕಾರಿಗಳು ನಿಧಾನವಾಗಿ ಕಾರ್ಯಪ್ರವೃತ್ತರಾಗುವುದು.
*ಹಲವಾರು ವಿಚಾರಗಳಲ್ಲಿ, ಅವೈಜ್ಞಾನಿಕ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿರುವುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next