Advertisement

Defence Ministry ಸಮರ ನೌಕೆ: 19,000 ಕೋಟಿ ಒಪ್ಪಂದ

12:00 AM Aug 26, 2023 | Team Udayavani |

ಹೊಸದಿಲ್ಲಿ: ಭಾರತೀಯ ನೌಕಾಪಡೆಯ ಬಲ ಹೆಚ್ಚಿಸುವ ನಿಟ್ಟಿನಲ್ಲಿ 19,000 ಕೋಟಿ ರೂ.ಮೌಲ್ಯದ 5 ಸಮರ ಸಹಾಯಕ ನೌಕೆಗಳನ್ನು (ಎಫ್ಎಸ್‌ಎಸ್‌) ಪಡೆದುಕೊಳ್ಳಲು ರಕ್ಷಣ ಸಚಿವಾಲಯವು ಶುಕ್ರವಾರ ಸಮ್ಮತಿ ನೀಡಿದೆ. ವಿಶಾಖ ಪಟ್ಟಣದ ಹಿಂದೂಸ್ಥಾನ್‌ ಶಿಪ್‌ಯಾರ್ಡ್‌ ಲಿಮಿಡೆಟ್‌ (ಎಚ್‌ಎಸ್‌ಎಲ್‌) ನೊಂದಿಗೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ.

Advertisement

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟವು ಈ ನೌಕೆಗಳನ್ನು ಹೊಂದಲು ಅನುಮೋದನೆ ನೀಡಿತ್ತು. ಸಮುದ್ರದಲ್ಲಿ ನಿಯೋಜನೆಗೊಂಡಿರುವ ನೌಕಾಪಡೆಯ ಯುದ್ಧ ನೌಕೆಗಳಿಗೆ ಇಂಧನ ಮರುಪೂರಣಗೊಳಿಸಲು, ನೀರು, ಯುದ್ಧ ಸಾಮಾಗ್ರಿ, ಆಹಾರ ಸೇರಿದಂತೆ ಅಗತ್ಯ ವಸ್ತುಗಳನ್ನು ರವಾನಿಸಲು ಎಫ್ಎಸ್‌ಎಸ್‌ ನೌಕೆಗಳನ್ನು ಬಳಸಲಾಗುತ್ತದೆ. ಇದರಿಂದಾಗಿ ಯುದ್ಧನೌಕೆಗಳು ನೌಕಾ ಬಂದರಿಗೆ ಹಿಂದಿರು ಗದೆಯೇ ದೀರ್ಘ‌ಕಾಲದವರೆಗೆ ಗಸ್ತು ಅಥವಾ ಇನ್ನಿತರ ಕಾರ್ಯಾಚರಣೆಗಳಲ್ಲಿ ಮುಂದುವರಿಯಲು ಅನುವು ಮಾಡಿಕೊಡಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next