Advertisement

ಸೇನೆಗೆ 7.40 ಲಕ್ಷ ಅಸಾಲ್ಟ್ ರೈಫ‌ಲ್‌, 5,719 ಸ್ನೆ„ಪರ್‌ ರೈಫ‌ಲ್‌

07:18 PM Feb 13, 2018 | udayavani editorial |

ಹೊಸದಿಲ್ಲಿ : ಭಾರತೀಯ ಸೇನೆಯ ಮೂರೂ ಸೇವೆಗಳಿಗೆ ಒಟ್ಟು  7.40 ಲಕ್ಷ ಅಸಾಲ್ಟ್ ರೈಫ‌ಲ್‌ಗ‌ಳನ್ನು  ಮತ್ತು 1,819 ಕೋಟಿ ರೂ. ಮೌಲ್ಯದ ಲೈಟ್‌ ಮಶೀನ್‌ ಗನ್‌ಗಳನ್ನು ಖರೀದಿಸುವ ಪ್ರಸ್ತಾವಕ್ಕೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ.

Advertisement

ಇದೇ ವೇಳೆ ನರೇಂದ್ರ ಮೋದಿ ಸರಕಾರ ಇದೇ ವೇಳೆ 982 ಕೋಟಿ ರೂ ಬೆಲೆಯ 5,719 ಸ್ನೆ„ಪರ್‌ ರೈಫ‌ಲ್‌ಗ‌ಳನ್ನು ಖರೀದಿಸುವ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ. 

ಪಾಕ್‌ ಮತ್ತು ಚೀನ ಗಡಿಯಲ್ಲಿ ಭಾರತಕ್ಕೆ ಎದುರಾಗಿರುವ ಬೆದರಿಕೆಗಳನ್ನು ಅನುಲಕ್ಷಿಸಿ ಆದಷ್ಟು ಬೇಗನೆ ಶಸ್ತ್ರಾಸ್ತ್ರಗಳನ್ನು ಖರೀದೀಸಬೇಕೆಂದು ಭಾರತೀಯ ಸೇನಾ ಪಡೆ ಸರಕಾರದ ಮೇಲೆ ಒತ್ತಡ ಹೇರಿತ್ತು.

2018ರ ಜನವರಿಯಲ್ಲಿ ಡಿಫೆನ್ಸ್‌ ಅಕ್ವಿಸಿಶನ್‌ ಕೌನ್ಸಿಲ್‌ 72,400 ಅಸಾಲ್ಟ್  ರೈಫ‌ಲ್‌ಗ‌ಳು ಮತ್ತು 3,547 ಕೋಟಿ ರೂ. ಮೌಲ್ಯದ 93,895 ಕಾರ್ಬೈನ್‌ಗಳನ್ನು ಖರೀದಿಸುವ ಪ್ರಸ್ತಾವಕ್ಕೆ ಅನುಮೋದನೆ ನೀಡಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next