Advertisement
ಮುಂದಿನ 12 ವರ್ಷಗಳಲ್ಲಿ ಈ ಜಲಾಂತರ್ಗಾಮಿಗಳು ಹಂತಹಂತವಾಗಿ ತಯಾರಾಗಲಿವೆ. ಸದ್ಯ ಈ ಯೋಜನೆಯ ಅಂದಾಜು ವೆಚ್ಚವನ್ನು 43 ಸಾವಿರ ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದೆ. ಯೋಜನೆಯ ಅನುಷ್ಠಾನದ ಹೊಣೆಯನ್ನು ಎಲ್ ಆ್ಯಂಡ್ ಟಿ ಮತ್ತು ಕೇಂದ್ರ ಸರಕಾರಿ ಸ್ವಾಮ್ಯದ ಮಝಗಾಂವ್ ಡಾಕ್ಸ್ ಲಿ.ಗೆ (ಎಂಡಿಎಲ್) ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಈ ಕಂಪೆನಿಗಳು ಭಾರತೀಯ ರಕ್ಷಣ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ವಿಶ್ವದ ದೈತ್ಯ ಕಂಪೆನಿಗಳ ಜತೆ ಸೇರಿ ಯೋಜನೆಯನ್ನು ಅನುಷ್ಠಾನಕ್ಕೆ ತರಲಿವೆ.
Related Articles
ಚೀನವು ಇತ್ತೀಚೆಗೆ ತನ್ನ ನೌಕಾದಳದ ಬಲವರ್ಧನೆಗಾಗಿ ಹಲವಾರು ಅತ್ಯಾಧುನಿಕ ಜಲಾಂತರ್ಗಾಮಿಗಳನ್ನು ನಿರ್ಮಿಸಲು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಭಾರತವೂ ತನ್ನ ನೌಕಾಪಡೆಯನ್ನು ಶಕ್ತಿಶಾಲಿಯಾಗಿಸಲು ಹೊಸ ಹೆಜ್ಜೆಗಳನ್ನು ಇರಿಸುತ್ತಿದ್ದು, ಅದರ ಭಾಗವಾಗಿ ಆರು ಹೊಸ ಜಲಾಂತರ್ಗಾಮಿಗಳ ನಿರ್ಮಾಣಕ್ಕೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
Advertisement