Advertisement

ನೌಕೆ ತಯಾರಿಕ ಹಬ್‌ ಆಗಲಿದೆ ಭಾರತ : ICGS ಕಾರ್ಯಕ್ರಮದಲ್ಲಿ ರಕ್ಷಣ ಸಚಿವ ರಾಜನಾಥ್‌ ಸಿಂಗ್‌

11:28 PM Aug 28, 2021 | Team Udayavani |

ಚೆನ್ನೈ: ಇಡೀ ವಿಶ್ವದಲ್ಲೇ ಒಂದು ಅತ್ಯು ತ್ತಮ ಸಮರ ನೌಕೆ ನಿರ್ಮಾಣ ಕೇಂದ್ರ ವಾಗುವ ಅದ್ಭುತ ಅವಕಾಶಗಳನ್ನು ಭಾರತ ಹೊಂದಿದೆ. ಅದಕ್ಕೆ ಬೇಕಾದ ಎಲ್ಲ ಸೌಕರ್ಯಗಳನ್ನು ನಮ್ಮ ಸರಕಾರ ಈಗಾಗಲೇ ಕಲ್ಪಿಸಿದೆ ಎಂದು ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ತಿಳಿಸಿದ್ದಾರೆ.

Advertisement

ದೇಶೀಯವಾಗಿ ತಯಾರಿಸಲಾಗಿರುವ “ವಿಗ್ರಹ’ ಗಸ್ತು ನೌಕೆಯನ್ನು ಭಾರತೀಯ ಕರಾವಳಿ ರಕ್ಷಕ ಪಡೆಯ (ಐಸಿಜಿಎಸ್‌) ಸೇವೆಗೆ ನಿಯೋಜಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತ ನಾಡಿದ ಅವರು ಈ ವಿಷಯ ತಿಳಿಸಿದರು. “ಇಡೀ ವಿಶ್ವದಲ್ಲಿ ಎಲ್ಲ ದೇಶಗಳೂ ತಮ್ಮ ರಕ್ಷಣ ವೆಚ್ಚವನ್ನು ಅಗಾಧವಾಗಿ ಹೆಚ್ಚಿಸಿಕೊಂಡಿವೆ. ಮುಂದಿನ ಎರಡು ವರ್ಷಗಳಲ್ಲಿ ವಿಶ್ವದ ಒಟ್ಟಾರೆ ರಕ್ಷಣ ವೆಚ್ಚ 15 ಸಾವಿರ ಕೋಟಿ ರೂ.ಗಳನ್ನು ಮೀರುತ್ತದೆ. ಇದನ್ನು ಮನಗಂಡು ನಮ್ಮ ಸರಕಾರ, ಭಾರತವನ್ನು ವಿಶ್ವದ ದೊಡ್ಡ ಸಮರ ನೌಕೆಗಳ ನಿರ್ಮಾಣ ತಾಣವನ್ನಾಗಿಸಲು ಅಗತ್ಯವಾದ ಎಲ್ಲ ನಿಯಮಗಳನ್ನು ಜಾರಿಗೊಳಿಸಿದೆ’ ಎಂದಿದ್ದಾರೆ.

ಕರಾವಳಿ ರಕ್ಷಕ ಪಡೆಗೆ ಸೇರಿಸಲಾದ “ವಿಗ್ರಹ’ ಗಸ್ತು ನೌಕೆಯನ್ನು ಲಾರ್ಸೆನ್‌ ಆ್ಯಂಡ್‌ ಟರ್ಬೊ ಕಂಪೆನಿಯು ಪೂರೈಸಿದೆ. ಐಸಿಜಿಎಸ್‌ಗೆ ಸೇರ್ಪಡೆಯಾದ ಒಟ್ಟು 7 ನೌಕೆಗಳ ಪೈಕಿ ಕೊನೆಯ ನೌಕೆ ಇದಾಗಿದೆ. ಸುಧಾರಿತ ಟೆಕ್ನಾಲಜಿ ರೇಡಾರ್‌ ಗಳು, ನೇವಿಗೇಶನ್‌ ಮತ್ತು ಸಂವಹನ ಉಪಕರಣಗಳು, ಯಾವುದೇ ರೀತಿಯ ಪ್ರತಿಕೂಲ ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಿಸಬಲ್ಲ ಸೆನ್ಸರ್‌ ಗಳು ಮತ್ತು ಯಂತ್ರಗಳು ಇದರಲ್ಲಿವೆ. ಸಮುದ್ರದಲ್ಲಿ ತೈಲ ಸೋರಿಕೆಯನ್ನು ನಿಯಂತ್ರಣಕ್ಕೆ ತರುವ ಸಾಧನವನ್ನೂ ಅಳವಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next