Advertisement
ಕೆಲವೊಂದು ಸರಕಾರಿ ಕಾರುಗಳ ನಂಬರ್ ಪ್ಲೇಟ್‌ಗಳಲ್ಲಿ ನಿಗಮ ಅಥವಾ ತಮ್ಮ ಸಂಸ್ಥೆಗಳ ಹೆಸರು ಇದ್ದು, ಮತ್ತೂಂದೆಡೆ ಕೆಲವೊಂದು ರಾಜಕಾರಣಿಗಳು ಕೂಡ ತಮ್ಮ ಪಕ್ಷ, ಹುದ್ದೆಯ ಹೆಸರನ್ನು ನಂಬರ್ ಪ್ಲೇಟ್‌ನಲ್ಲಿ ನಮೂದಿಸಿಕೊಂಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ನಗರದಲ್ಲಿ ಓಡಾಡುವ ಕೆಲವೊಂದು ವಾಹನಗಳು ನಂಬರ್ ಪ್ಲೇಟ್ ಮೇಲೆ ಆಯಾ ಸಂಘಟನೆಯ ಫಲಕಗಳನ್ನು ನಮೂದು ಮಾಡಿರುವುದು ಕಾಣುತ್ತಿದೆ.
ನೂತನ ಸಾರಿಗೆ ಕಾಯ್ದೆಯ ಅನ್ವಯ ಈ ರೀತಿಯಾಗಿ ನಂಬರ್ ಪ್ಲೇಟ್‌ಗಳ ಮೇಲೆ ಇತರೆ ಚಿಹ್ನೆ ಅಥವಾ ಬರಹವಿದ್ದರೆ ಕಟ್ಟು ನಿಟ್ಟಾಗಿ ಕ್ರಮ ಜರುಗಿಸಲಾಗುತ್ತದೆ. ಕರ್ನಾಟಕದಲ್ಲಿ ನೋಂದಣಿಯಾದಂತಹ ಕೆಲವೊಂದು ವಾಹನಗಳಲ್ಲಿ ಕನ್ನಡ ಅಕ್ಷರದಲ್ಲಿ ನೋಂದಣಿ ಸಂಖ್ಯೆಯನ್ನು ಬರೆದಿರುತ್ತಾರೆ. ಕನ್ನಡ ಭಾಷೆ ಬಳಕೆಗೆ ಸಾರಿಗೆ ಇಲಾಖೆ ಈಗಾಗಲೇ ಅನುಮತಿ ನೀಡಿದೆ. ಆದರೆ ನಂಬರ್ ಪ್ಲೇಟ್‌ನಲ್ಲಿ ಕನ್ನಡ ಭಾಷೆಯ ಬಳಕೆ ಜತೆ ಆಂಗ್ಲ ಭಾಷೆಯನ್ನೂ ನಮೂದು ಮಾಡಬೇಕು. ಇದರ ಬದಲಾಗಿ ಕೇವಲ ಕನ್ನಡ ಭಾಷೆಯನ್ನು ಮಾತ್ರ ನಮೂದಿಸಿದರೆ ನಿಯಮ ಉಲ್ಲಂಘಿಸಿದಂತಾಗುತ್ತದೆ ಎಂದು ಸಾರಿಗೆ ಅಧಿಕಾರಿಯೊಬ್ಬರು “ಉದಯವಾಣಿ ಸುದಿನ’ಕ್ಕೆ ತಿಳಿಸಿದ್ದಾರೆ. ಸೂಕ್ತ ಕ್ರಮಕೈಗೊಳ್ಳಲಾಗುವುದು
ಟ್ರಾಫಿಕ್ ನಿಯಮಗಳನ್ನು ಪಾಲನೆ ಮಾಡಬೇಕು. ಈ ನಿಟ್ಟಿನಲ್ಲಿ ನಗರದಲ್ಲಿ ಯಾವೆಲ್ಲಾ ವಾಹನಗಳಲ್ಲಿ ದೋಷಯುಕ್ತ ನಂಬರ್ ಪ್ಲೇಟ್‌ಗಳು ಹೊಂದಿವೆ ಎಂಬುವುದನ್ನು ಎಂಬ ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
-ಮಂಜುನಾಥ ಶೆಟ್ಟಿ, ಟ್ರಾಫಿಕ್ ಎಸಿಪಿ