Advertisement

ಪಕ್ಷಾಂತರ ಹೆಚ್ಚು ನಲುಗಿದ್ದೇ ಕಾಂಗ್ರೆಸ್‌!

12:52 AM Mar 12, 2021 | Team Udayavani |

“ಪಕ್ಷಾಂತರ’…! ರಾಜಕೀಯ ರಂಗದಲ್ಲಿ ಸಂಚಲನ ಸೃಷ್ಟಿಸಲು, ಆಡಳಿತ ಚಿತ್ರಣವನ್ನೇ ಬದಲಿಸಲು ಬಳಕೆ ಆಗುತ್ತಿರುವ ಈ ಅಸ್ತ್ರ ಇಂದು ಸರ್ವೇಸಾಮಾನ್ಯ. 4 ವರ್ಷಗಳಲ್ಲಿ ಪಕ್ಷಾಂತರದಿಂದಾಗಿ ಹೆಚ್ಚು ನಲುಗಿದ ಪಕ್ಷ ಕಾಂಗ್ರೆಸ್‌! ಈ ಅವಧಿಯಲ್ಲಿ ಒಟ್ಟು 170 ಶಾಸಕರು “ಕೈ’ಗೆ ಗುಡ್‌ಬೈ ಹೇಳಿದ್ದಾರೆ ಎನ್ನುತ್ತಿದೆ ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆ (ಎಡಿಆರ್‌) ವರದಿ.

Advertisement

ಬಿಜೆಪಿಗೆ ಅಧಿಕ ಸೇರ್ಪಡೆ :

2016-20ರ ಅವಧಿಯಲ್ಲಿ ಶಾಸಕರ ಪಕ್ಷಾಂತರದಿಂದಾಗಿ ಒಟ್ಟು 405 ಮರುಚುನಾವಣೆಗಳು ನಡೆದಿವೆ. ವಿವಿಧ ಪಕ್ಷಗಳ 182 ಶಾಸಕರು ಬಿಜೆಪಿಗೆ, 38 ಮಂದಿ ಕಾಂಗ್ರೆಸ್‌ಗೆ, 25 ಶಾಸಕರು ಟಿಆರ್‌ಎಸ್‌ಗೆ ಸೇರಿದ್ದಾರೆ.

ಕಾಂಗ್ರೆಸ್‌ಗೆ ಕೈ ಕೊಟ್ಟವರೇ ಹೆಚ್ಚು! :

4 ವರ್ಷಗಳಲ್ಲಿ ಕಾಂಗ್ರೆಸ್‌ 170 ಶಾಸಕ  ರನ್ನು ಕೇವಲ ಪಕ್ಷಾಂತರದಿಂದಲೇ ಕಳೆದು ಕೊಂಡಿದೆ. 18 ಶಾಸಕರು ಮಾತ್ರ ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಉರುಳಿದ ಕರ್ನಾಟಕ, ಮಧ್ಯಪ್ರದೇಶ, ಮಣಿಪುರ, ಗೋವಾ, ಅರುಣಾಚಲ ಪ್ರದೇಶ ಸರಕಾರಗಳಿಂದಾಗಿ ಕಾಂಗ್ರೆಸ್‌ ತೀವ್ರ ಪಕ್ಷಾಂತರ ನಷ್ಟ ಅನುಭವಿಸಿದೆ.

Advertisement

ರಾಜ್ಯದಲ್ಲೂ ಕೈಗೆ ಹೊಡೆತ  :

ರಾಜ್ಯದಲ್ಲೂ ಕಾಂಗ್ರೆಸ್‌ ಪಕ್ಷಾಂತರದ ಹೊಡೆತ ತಿಂದಿದೆ. 2019ರಲ್ಲಿ ರಾಜ್ಯದ 15 ಮಂದಿ ಶಾಸಕರು ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಸೇರಿದ್ದರು. ವಿಶೇಷವೆಂದರೆ ಅಂದಿನ ಸರಕಾರದಲ್ಲಿ ಸಚಿವರಾಗಿದ್ದ ಕೆಲವರೂ ಪಕ್ಷಾಂತರ ಮಾಡಿಬಿಟ್ಟಿದ್ದರು. ಇವರ ಪಕ್ಷಾಂತರ ಕಾರಣದಿಂದಾಗಿ ರಾಜ್ಯದಲ್ಲಿದ್ದ ಜೆಡಿಎಸ್‌ – ಕಾಂಗ್ರೆಸ್‌ ಸರಕಾರ ಪತನ ಹೊಂದಿತ್ತು.

ಕಾಂಗ್ರೆಸ್‌ ತೊರೆದ ಪ್ರಮುಖರು :

ಮಾಜಿ ಸಿಎಂಗಳು: ವಿಜಯ ಬಹುಗುಣ (ಉತ್ತರಾಖಂಡ), ಅಜಿತ್‌ ಜೋಗಿ (ಛತ್ತೀಸ್‌ಗಢ).

ಮಾಜಿ ಕೇಂದ್ರ ಸಚಿವರು:

ಎಸ್‌.ಎಂ. ಕೃಷ್ಣ (ಕರ್ನಾಟಕ), ಜ್ಯೋತಿರಾದಿತ್ಯ ಸಿಂಧಿಯಾ (ಮ.ಪ್ರದೇಶ), ಜಿ.ಕೆ. ವಾಸನ್‌ (ತ.ನಾ), ಕಿಶೋರ್‌ ಚಂದ್ರ ಡಿಯೊ (ಆಂಧ್ರ), ಜಯಂತಿ ನಟರಾಜನ್‌  (ತ.ನಾ.), ಶ್ರೀಕಾಂತ್‌ ಜೆನಾ (ಒಡಿಶಾ), ಶಂಕರ್‌ ಸಿನ್ಹ ವಘೇಲಾ (ಗುಜರಾತ್‌)

ಸಂಸದರೂ ಕಮ್ಮಿಯಿಲ್ಲ ! :

2019ರ ಸಂಸತ್‌ ಚುನಾವಣೆ ವೇಳೆ  ಬಿಜೆಪಿಯ ಐವರು ಸಂಸದರು ಪಕ್ಷ ತೊರೆದಿದ್ದರು. 4 ವರ್ಷದಲ್ಲಿ ಕಾಂಗ್ರೆಸ್‌ನ 7 ರಾ. ಸಭಾ ಸದಸ್ಯರು ವಿವಿಧ ಪಕ್ಷ ಸೇರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next