Advertisement

ಗ್ಯಾರಂಟಿ ಯೋಜನೆ ಭರವಸೆ ನೀಡಿ ಬಿಜೆಪಿಯನ್ನು ಸೋಲಿಸಿದ್ದೇವೆ: ಮಾಜಿ ಸಚಿವ ಆರ್.ವಿ.ದೇಶಪಾಂಡೆ

07:41 PM Jul 15, 2023 | Team Udayavani |

ಕಾರವಾರ: ಶಕ್ತಿ, ಗೃಹ ಲಕ್ಷ್ಮಿ ಸೇರಿದಂತೆ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದೆ. ವಿರೋಧ ಪಕ್ಷದವರು ಇದನ್ನೆಲ್ಲ ಮೆಚ್ಚಬೇಕು ಎಂದು ಹಾಲಿ ಶಾಸಕ, ಮಾಜಿ ಸಚಿವ  ಆರ್.ವಿ.ದೇಶಪಾಂಡೆ ಅಭಿಪ್ರಾಯಪಟ್ಟರು.

Advertisement

ಕಾರವಾರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಈವರೆಗೂ ಪೂರ್ಣಗೊಂಡಿಲ್ಲ. ಸುರಂಗ ಮಾರ್ಗ ಸಂಚಾರ ಆರಂಭಿಸಿ ಪುನಃ ಸ್ಥಗಿತಗೊಳಿಸುವ ಸ್ಥಿತಿ ಬಂದಿದೆ. ಕೆಲಸವೂ ಸರಿಯಾಗಿಲ್ಲ ಎಂದರು.

ಕೇಂದ್ರ ಸರ್ಕಾರ ಕೈಗೊಂಡ ಯೋಜನೆ ಇದು. ಗುಣಮಟ್ಟದ ರಸ್ತೆ ಆಗಿಲ್ಲ. ಟೋಲ್ ಸಂಗ್ರಹಕ್ಕೆ ಕೆಲಸ ಮುಗಿಯುವ ಮೊದಲೇ ಆರಂಭಿಸಿದ್ದು ಸರಿಯಾದ ಕ್ರಮವಲ್ಲ. ಇದು ಕಾನೂನುಬಾಹೀರ ಕ್ರಮ ಎಂದು ಪರಿಗಣಿಸಬೇಕಾಗುತ್ತದೆ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವೇನೂ ಇಲ್ಲ ಎಂದರು.

ಇದನ್ನೂ ಓದಿ:ಪ್ರತಿಯೊಬ್ಬ ಭಾರತೀಯನು ನಿಮ್ಮನ್ನು ಸ್ನೇಹಿತನಂತೆ ಕಾಣುತ್ತಾನೆ: ಯುಎಇ ಅಧ್ಯಕ್ಷರಿಗೆ ಮೋದಿ

ಟೆಂಡರ್ ಒಡಂಬಡಿಕೆ ಪ್ರಕಾರ ಕೆಲಸ ಮುಗಿಸಬೇಕಿತ್ತು. ಆದರೆ ಒಡಂಬಡಿಕೆ ನಿಯಮ ಮುರಿದ ಕಾರಣ ಟೋಲ್ ಸಂಗ್ರಹ ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ದೇಶಪಾಂಡೆ ಆಗ್ರಹಿಸಿದರು.

Advertisement

ಈ ಬಗ್ಗೆ ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರವನ್ನೂ ಬರೆಯುತ್ತೇನೆ ಎಂದರು.

ಯಲ್ಲಾಪುರ, ಶಿರಸಿ, ಹಳಿಯಾಳ, ಮುಂಡಗೋಡ, ದಾಂಡೇಲಿ, ಜೊಯಿಡಾದಲ್ಲಿ ಮಳೆ ಕಡಿಮೆ ಇದೆ. ಮಳೆಯಿಂದ ಸಾರ್ವಜನಿಕ ಆಸ್ತಿಪಾಸ್ತಿಗೆ ಆದ ಹಾನಿಗೆ ಪರಿಹಾರ ತ್ವರಿತವಾಗಿ ನೀಡಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದರು.

ಜೊಯಿಡಾ ಅಣಶಿ ಭಾಗದಲ್ಲಿ ಅಡಿಕೆ ತೋಟ ನಾಶ ಪಡಿಸಲಾಗಿದೆ. ಜಮೀನಿಗೆ ಪರಿಹಾರ ನೀಡದೆ ಹಾಳು ಮಾಡಿದ್ದಾರೆ. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ. ಮರಗಳನ್ನು ಹಾಳು ಮಾಡಬಾರದು ಎಂದರು

ಕಾರವಾರದ ಮುಡಗೇರಿ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಮ‌ೂರು ಬಾರಿ ಅಭಿವೃದ್ಧಿಗೆ ಟೆಂಡರ್ ಕರೆದರೂ ಕೆಲಸ ಆರಂಭವಾಗಿಲ್ಲ. ಭೂಸ್ವಾಧೀನಕ್ಕೆ ಸೂಕ್ತ ಪರಿಹಾರ ನೀಡಿರಲಿಲ್ಲ. ಚುನಾವಣೆ ಹೊತ್ತಲ್ಲಿ ಪ್ರಚಾರಕ್ಕೆ ಚೆಕ್ ನೀಡಿದ್ದರು. ಆದರೆ ಈವರೆಗೆ ಪರಿಹಾರ ನೀಡಿಲ್ಲ ಎಂದರು‌.

ನಿಮ್ಮನ್ನು ಯಾಕೆ ಸಚಿವರನ್ನಾಗಿ ಮಾಡಲಿಲ್ಲ ಎಂಬ ಪ್ರಶ್ನೆಗೆ ಹಾಸ್ಯ ಚಟಾಕಿ ಹಾರಿಸಿದ ಅವರು ನನ್ನ ಮುಂದೆ ಮುಖ್ಯಮಂತ್ರಿ ಮಾಡುವ ಉದ್ದೇಶದಿಂದ ಸಚಿವ ಸ್ಥಾನ ಕೊಟ್ಟಿಲ್ಲ ಎಂದು ನಗುತ್ತಲೇ ಹೇಳಿದರು .

ಕಾಂಗ್ರೆಸ್ ಪ್ರಮುಖರಾದ ರಮಾನಂದ ನಾಯಕ, ಕೆ.ಎಚ್.ಗೌಡ, ಸಮೀರ ನಾಯ್ಕ, ಕೆ.ಶಂಭು ಶೆಟ್ಟಿ, ಪಾಂಡುರಂಗ ಗೌಡ , ಜಿಲ್ಲಾ ಘಟಕದ ಅಧ್ಯಕ್ಷ ಸಾಯಿ ಗಾಂವಕರ್  ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next