Advertisement

ಡಬ್ಲ್ಯುಟಿಎ ಆಕ್ಲೆಂಡ್‌ ಕ್ಲಾಸಿಕ್‌: ವೀನಸ್‌ ವಿಲಿಯಮ್ಸ್‌ಗೆ ಸೋಲು

12:30 AM Jan 05, 2019 | |

ಆಕ್ಲೆಂಡ್‌: ಅಮೆರಿಕದ ವೀನಸ್‌ ವಿಲಿಯಮ್ಸ್‌ “ಡಬ್ಲ್ಯುಟಿಎ ಆಕ್ಲೆಡ್‌ ಕ್ಲಾಸಿಕ್‌’ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಅಘಾತಕಾರಿ ಸೋಲನುಭವಿಸಿದ್ದಾರೆ. ಶುಕ್ರವಾರ ನಡೆದ ಪಂದ್ಯದಲ್ಲಿ ವಿಲಿಯಮ್ಸ್‌ ಕೆನಡಾದ ಯುವ ಟೆನಿಸ್‌ ಆಟಗಾರ್ತಿ ಬಿಯಾಂಕಾ ಆ್ಯಂಡ್ರಿಸ್ಕಾ ವಿರುದ್ಧ 7-6 (7-1), 1-6, 3-6 ಸೆಟ್‌ಗಳಿಂದ ಎಡವಿದರು.

Advertisement

18 ವರ್ಷದ ಬಿಯಾಂಕಾ ವಿಶ್ವ ರ್‍ಯಾಂಕಿಂಗ್‌ನಲ್ಲಿ 152ನೇ ಸ್ಥಾನದಲ್ಲಿದ್ದಾರೆ. ಅವರು ತನಗಿಂತ 20 ವರ್ಷ ಹಿರಿಯ ಆಟಗಾರ್ತಿ ಹಾಗೂ 7 ಬಾರಿಯ ಗ್ರ್ಯಾನ್‌ಸ್ಲಾಮ್‌ ವಿಜೇತ ವಿಲಿಯಮ್ಸ್‌ಗೆ ಅಘಾತವಿಕ್ಕಿ ಅಚ್ಚರಿಯ ಫ‌ಲಿತಾಂಶ ದಾಖಲಿಸಿದರು.

ಇದು ಬಿಯಾಂಕಾ ಅವರ 2ನೇ ದೊಡ್ಡ ಬೇಟೆ. ಕ್ವಾರ್ಟರ್‌ ಫೈನಲ್‌ ಹಾದಿಯಲ್ಲಿ ಬಿಯಾಂಕಾ ಅಗ್ರ ಶ್ರೇಯಾಂಕಿತೆ ಹಾಗೂ ವಿಶ್ವ ರ್‍ಯಾಂಕಿಂಗ್‌ನಲ್ಲಿ 3ನೇ ಸ್ಥಾನದಲ್ಲಿರುವ ಕ್ಯಾರೊಲಿನ್‌ ವೋಜ್ನಿಯಾಕಿ ವಿರುದ್ಧ ಗೆದ್ದಿದ್ದರು. ಬಿಯಾಂಕ ಸೆಮಿಫೈನಲ್‌ನಲ್ಲಿ ತೈವಾನ್‌ನ ಶಿಶ್‌ ಶು ವೀ ಅವರನ್ನು ಎದುರಿಸಲಿದ್ದಾರೆ.

ಇನ್ನೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಜೂಲಿಯಾ ಜಾರ್ಜಸ್‌ ಕೆನಡಾದ ಯುಗೇನಿ ಬೌಶಾರ್ಡ್‌ ಅವರನ್ನು 3-6, 6-3, 7-6 (8-6)ರಿಂದ ಸೋಲಿಸಿದರು. ಸೆಮಿಫೈನಲ್‌ನಲ್ಲಿ ಅವರು ಸ್ಲೋವಾಕಿಯದ ವಿಕ್ಟೋರಿಯಾ ಕುಜೊ¾àವಾ ವಿರುದ್ಧ ಆಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next