Advertisement
ಹಾಗಾದರೆ ಗೆದ್ದವರ ಪ್ರಾಣ ಉಳಿಯಿತೇ, ಸೋತವರ ಪ್ರಾಣ ಚಿಗುರಿತೇ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಶ್ರೀರಾಮನು ತನ್ನ ಪತ್ನಿ ಸೀತಾಮಾತೆಯ ಮೇಲೆ ಅನುಮಾನಪಟ್ಟು ಅವರನ್ನು ಅಗ್ನಿಗೆ ಆಹುತಿಯಾಗುವಂತೆ ಮಾಡಿದನು. ಆ ಸೀತಾಮಾತೆಗಾಗಿಯೇ ರಾಮಾಯಣ ನಡೆಯಿತು ಎಂಬುದು ನಮಗೆ ಗೊತ್ತಿರುವ ಸಂಗತಿ.
Related Articles
ಯಾವುದೇ ಸ್ಪರ್ಧೆಯಲ್ಲಿ ಸೋತಾಗ ನಾವು ಜಿಗುಪ್ಸೆ ಹೊಂದುತ್ತೇವೆ. ಮಾನಸಿಕವಾಗಿ ಕೊರಗುತ್ತೇವೆ. ಸೋಲು ಎಂಬುದು ಸಾಮರ್ಥ್ಯಗಳ ಕೊರತೆ. ಆ ಸಾಮರ್ಥ್ಯ ಗಳಿಸಿದಾಗ ನಾವೂ ಗೆಲ್ಲಬಹುದು. ಸೋಲನ್ನು ಬೇರೆಯದೇ ರೀತಿಯಲ್ಲಿ ಅಥೈ ìಸಿಕೊಳ್ಳಬಾರದು. ಆ ಸ್ಪರ್ಧೆಯಲ್ಲಿನ ಸಾಮರ್ಥ್ಯಗಳು ನನಗೆ ಇನ್ನೂ ಕರಗತವಾಗಬೇಕಿದೆ ಎಂದು ತಿಳಿದರಾಯಿತು. ಆಗ ನಮಗೆ ಸೋಲು ಎಂಬ ಭಾವನೆ ಬರುವುದಿಲ್ಲ. ಸೋಲು ಅನುಭವಿಸಿದಷ್ಟು ನಾವು ಮಾಡಿಕೊಳ್ಳಬೇಕಾದ ಸಾಮರ್ಥ್ಯಗಳ ಅರಿವಾಗುತ್ತದೆ. ಆಗ ನಮಗರಿವಿಲ್ಲದ ಹಾಗೆ ನಾವು ಗೆಲ್ಲುತ್ತಾ ಹೋಗುತ್ತೇವೆ. ಸೋಲನ್ನು ಕೊನೆ ಎಂದು ಪರಿಗಣಿಸದೆ ಕಲಿಕೆಯ ಮೆಟ್ಟಿಲು ಎಂದು ಪರಿಗಣಿಸಬೇಕು. ಆಗ ಸೋಲನ್ನು ಮೆಟ್ಟಿ ನಿಲ್ಲಲು ಸಾಧ್ಯ.
Advertisement
ಕಲ್ಪನೆ ಮತ್ತು ವಾಸ್ತವ ಒಂದೊಂದು ವಯಸ್ಸಿನಲ್ಲಿ ನಮ್ಮ ಕಲ್ಪನೆಗಳು ಬೇರೆಯದೇ ರೀತಿಯಾಗಿರುತ್ತದೆ. ಅದು ಸಮಯಕ್ಕೆ ತಕ್ಕಂತೆ ತನ್ನತನ ಬದಲಾಯಿಸಿರುತ್ತದೆ. ಮೂರ್‍ನಾಲ್ಕು ವರ್ಷದ ಮಗುವಿಗೆ ತನ್ನದೇ ಆದ ಹೊಸ ಕಲ್ಪನೆಗಳಿರುತ್ತವೆ. ಪಕ್ಕದ ಮನೆಯ ಮಗು ಓಡಿಸುವ ಸೈಕಲ್ ತನ್ನದೆಂಬಂತೆ ತಾನು ಅದರ ಮೇಲೆ ಸವಾರಿ ಮಾಡುವಂತೆ ಕನಸು ಕಟ್ಟುತ್ತದೆ. ಅದಕ್ಕೆ ಅಮ್ಮನೊಂದಿಗೆ ಸೈಕಲನ್ನು ತನಗೂ ಕೊಡಿಸುವಂತೆ ಹಠ ಹಿಡಿಯುತ್ತದೆ. ಹಲವರು ಈಗಾಗಲೇ ಮಗುಚಿಬಿದ್ದಿರುವ ತಮ್ಮ ಯಶಸ್ಸಿನ ಕಟ್ಟಡದ ಬಗ್ಗೆ ಕನಸು ಕಾಣುತ್ತಾರೆ. ಅದು ಈಗಾಗಲೇ ಮಗುಚಿಬಿದ್ದಾಗಿದೆ ಎಂಬ ಕಟು ವಾಸ್ತವ ಅವರಿಗಿರುವುದಿಲ್ಲ. ನಮಗೆ ಕೆಲವೊಂದು ಸೋಲನ್ನೂ ಅಷ್ಟು ಸುಲಭವಾಗಿ ಅರಗಿಸಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಹಾಗಾಗಿ ಅದೇ ವಿಷಯದ ಸುತ್ತಲೇ ನಮ್ಮ ಕಲ್ಪನೆಯ ಹುತ್ತ ಬೆಳೆಯತೊಡಗುತ್ತದೆ. – ಜಯಾನಂದ ಅಮೀನ್ ಬನ್ನಂಜೆ