ನವದೆಹೆಲಿ: ಕಾಂಗ್ರೆಸ್ ನ ಮಾಜಿ ಮಂತ್ರಿಯೊಬ್ಬರು ಪ್ರಧಾನಿ ಮೋದಿ ಅವರ ಬಗ್ಗೆ ವಿವಾದಾತ್ಮಕ ಹೇಳಿ ನೀಡಿರುವುದು ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
ಮಧ್ಯ ಪ್ರದೇಶದ ಕಾಂಗ್ರೆಸ್ ನಾಯಕ ರಾಜಾ ಪಟೇರಿಯಾ ಭಾನುವಾರ (ಡಿ.11 ರಂದು) ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುವ ವೇಳೆ, ನರೇಂದ್ರ ಮೋದಿ ಅವರ ಕುರಿತು ಹೇಳಿದ ಮಾತು ಆಕ್ರೋಶ ಭುಗಿಲೇಳುವಂತೆ ಮಾಡಿದೆ.
ತನ್ನ ಬೆಂಬಲಿಗರ ಜೊತೆಗೆ ಮಾತನಾಡುತ್ತಾ “ಮೋದಿ ಅವರು ಚುನಾವಣೆಗಳನ್ನು ಕೊನೆಗೊಳಿಸುತ್ತಾರೆ, ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುತ್ತಿದ್ದಾರೆ ಮತ್ತು ಅವರ ಆಡಳಿತದಲ್ಲಿ ದಲಿತರು ದೊಡ್ಡ ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ಸಂವಿಧಾನವನ್ನು ರಕ್ಷಿಸಲು ನೀವು ಮೋದಿ ಅವರ ಜೀವ ತೆಗೆಯಲು ಸಿದ್ದರಾಗಿ ಎಂದು ಹೇಳಿಕೆ ನೀಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ರಾಜಾ ಪಟೇರಿಯಾ ಅವರು ತಮ್ಮ ಹೇಳಿಕೆಗೆ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.
ಇದನ್ನೂ ಓದಿ: ಮನೆಯಲ್ಲೇ ಕುಳಿತು ಬೋರಾಗುತ್ತದೆಂದು ಪೊಲೀಸ್ ಟೋಪಿ ತೊಟ್ಟು ಕಳ್ಳತನಕ್ಕಿಳಿದ ವ್ಯಕ್ತಿ.!
ನಾನು ಗಾಂಧಿಯ ತತ್ವವನ್ನು ನಂಬುವ ವ್ಯಕ್ತಿ. ನಾನು ಈ ರೀತಿ ಮಾತನಾಡುವುದಿಲ್ಲ. ಸಂವಿಧಾನವನ್ನು ಉಳಿಸಲು ಮೋದಿ ಅವರನ್ನು ಸೋಲಿಸಿ ಎನ್ನುವ ಅರ್ಥದಲ್ಲಿ ನಾನು ನನ್ನ ಹೇಳಿಕೆಯನ್ನು ನೀಡಿದ್ದೇನೆ ಎಂದು ರಾಜಾ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.
ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ರಾಜಾ ಹೇಳಿಕೆಯನ್ನು ಖಂಡಿಸಿದ್ದು, ಇದು ಗಾಂಧಿಯ ಕಾಂಗ್ರೆಸ್ ಅಲ್ಲ. ಇದು ಇಟಲಿಯ ಕಾಂಗ್ರೆಸ್. ಮುಸೊಲಿನಿ ಮನಸ್ಥಿತಿಯ ಕಾಂಗ್ರೆಸ್ ಅವರ ವಿರುದ್ಧ ಕೂಡಲೇ ಎಫ್ ಐ ಆರ್ ದಾಖಲಸಿಬೇಕೆಂದು ಆಗ್ರಹಿಸಿದ್ದಾರೆ.