Advertisement

ಕಾಶ್ಮೀರದಲ್ಲಿ ದ್ವೇಷ ಹರಡುವವರಿಗೆ ಸೋಲು

05:43 PM Jul 30, 2019 | sudhir |

ಹೊಸದಿಲ್ಲಿ: ಕಾಶ್ಮೀರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸಿ ದ್ವೇಷವನ್ನು ಹರಡುವ ಯಾವುದೇ ಪ್ರಯತ್ನಕ್ಕೆ ಯಶಸ್ಸು ಸಿಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮನ್‌ ಕಿ ಬಾತ್‌ನಲ್ಲಿ ಹೇಳಿದ್ದಾರೆ.

Advertisement

ಮಾಸಿಕ ರೇಡಿಯೋ ಕಾರ್ಯಕ್ರಮದಲ್ಲಿ ಹಲವು ವಿಷಯಗಳನ್ನು ಪ್ರಸ್ತಾವಿಸಿದ ಪ್ರಧಾನಿ, ಬುಲೆಟ್‌ ಹಾಗೂ ಬಾಂಬ್‌ಗಳ ಶಕ್ತಿಗಿಂತ ಅಭಿವೃದ್ಧಿ ಕಾರ್ಯಗಳ ಶಕ್ತಿಯೇ ಹೆಚ್ಚಿದೆ. ಕಳೆದ ಜೂನ್‌ನಲ್ಲಿ ಜಮ್ಮು ಕಾಶ್ಮೀರದ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿದಾಗ, ಅಲ್ಲಿನ ಗ್ರಾಮೀಣ ಜನರು ಅಭಿವೃದ್ಧಿ ಕೆಲಸಗಳ ಬಗ್ಗೆ ಉತ್ಸಾಹದಿಂದ ಚರ್ಚೆ ನಡೆಸಿದ್ದನ್ನು ನೋಡಿದ್ದೇನೆ. ಅದರಲ್ಲೂ ಅತ್ಯಂತ ಸೂಕ್ಷ್ಮ ಹಾಗೂ ಕುಗ್ರಾಮಗಳಲ್ಲೂ ಜನ ಅಭಿವೃದ್ಧಿಯ ಪರವಾಗಿದ್ದಾರೆ. ಇದು ಮುಖ್ಯವಾಹಿನಿಯಲ್ಲಿ ಕಾಶ್ಮೀರಿ ಗರು ಗುರುತಿಸಿಕೊಳ್ಳಲು ಬಯಸಿರುವುದನ್ನು ತೋರಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

ಇದೇ ಮೊದಲ ಬಾರಿಗೆ 4500 ಪಂಚಾ ಯತ್‌ಗಳ ಗ್ರಾಮಗಳ ಮನೆಗೆ ಅಧಿಕಾರಿಗಳು ತೆರಳಿದ್ದರು. ಅದರಲ್ಲೂ ವಿಶೇಷವಾಗಿ ಶೋಪಿಯಾನ್‌, ಪುಲ್ವಾಮಾ, ಕುಲ್ಗಾಂ ಮತ್ತು ಅನಂತನಾಗ್‌ ಗಡಿ ಭಾಗದ ಗ್ರಾಮಗಳಿಗೆ ಅಧಿಕಾರಿಗಳು ತೆರಳಿದ್ದರು. ಈ ಗ್ರಾಮಗಳು ಗಡಿಯಾಚೆಗಿನ ಗುಂಡಿನ ದಾಳಿಯಿಂದ ನಲುಗಿವೆ ಎಂದು ಮೋದಿ ಹೇಳಿದ್ದಾರೆ.

ಈ ಬಾರಿ ಸುಮಾರು 3 ಲಕ್ಷ ಯಾತ್ರಿಕರು ಅಮರನಾಥ ಯಾತ್ರೆ ಪೂರೈಸಿದ್ದಾರೆ. 2015ಕ್ಕೆ ಹೋಲಿಸಿದರೆ ಈ ಸಂಖ್ಯೆ ಭಾರಿ ಹೆಚ್ಚಳ ಕಂಡಿದೆ ಎಂದು ಮೋದಿ ಹೇಳಿದ್ದಾರೆ. ಸ್ವಾತಂತ್ರೊéàತ್ಸವ ವನ್ನು ಅತ್ಯಂತ ಉತ್ಸಾಹ ದಿಂದ ಆಚರಣೆ ಮಾಡುವಂತೆಯೂ ಮೋದಿ ಕರೆ ನೀಡಿದ್ದಾರೆ. ಇದು ಜಾನಪದ ಹಾಗೂ ಜನರ ಹಬ್ಬವನ್ನಾಗಿ ಆಚರಣೆ ಮಾಡಬೇಕು ಎಂದಿದ್ದಾರೆ.

ಪ್ರವಾಹದ ಪ್ರಸ್ತಾಪ: ದೇಶದ ವಿವಿಧ ಭಾಗಗಳಲ್ಲಿ ಕಾಣಿಸಿಕೊಂಡಿರುವ ಪ್ರವಾಹ ಪರಿಸ್ಥಿತಿಯ ಬಗ್ಗೆಯೂ ಮಾತನಾಡಿದ ಅವರು, ಪ್ರವಾಹದಲ್ಲಿ ಸಿಲುಕಿರುವ ಜನರಿಗೆ ರಕ್ಷಣೆ ಮತ್ತು ಅಗತ್ಯ ನೆರವು ನೀಡುವ ನಿಟ್ಟಿನಲ್ಲಿ ರಾಜ್ಯಗಳೊಂದಿಗೆ ಕೇಂದ್ರ ಸರಕಾರ ಮಿಂಚಿನ ವೇಗದಲ್ಲಿ ಕೆಲಸ ಮಾಡುತ್ತಿದೆ.

Advertisement

ಇದೇ ವೇಳೆ ಜಲ ಸಂರಕ್ಷಣೆ ವಿಚಾರವೂ ಮುನ್ನೆಲೆಗೆ ಬಂದಿದೆ. ಮೇಘಾಲಯ ಸರಕಾರವು ಜಲ ನೀತಿ ಜಾರಿಗೆ ತಂದಿರು ವುದನ್ನು ಹಾಗೂ ಕಡಿಮೆ ನೀರು ಬೇಡುವ ಬೆಳೆಗಳನ್ನು ಬೆಳೆಯುವಂತೆ ಹರ್ಯಾಣ ಸರಕಾರವು ರೈತರನ್ನು ಪ್ರೋತ್ಸಾಹಿಸುತ್ತಿರುವು ದನ್ನೂ ಅವರು ಮೆಚ್ಚಿಕೊಂಡಿದ್ದಾರೆ.

ಚಂದ್ರಯಾನ ರಸಪ್ರಶ್ನೆ
ಚಂದ್ರಯಾನದ ಯಶಸ್ಸಿನಿಂದ ನಾನು ಕಲಿತ ದೊಡ್ಡ ಪಾಠ ವೆಂದರೆ ನಂಬಿಕೆ ಮತ್ತು ಧೈರ್ಯ ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲ, ಚಂದ್ರಯಾನ ಕುರಿತ ರಸಪ್ರಶ್ನೆ ನಡೆಸಲೂ ಘೋಷಿಸಿದ್ದು, ಇದರಲ್ಲಿ ವಿಜೇತರು ಶ್ರೀಹರಿಕೋಟಕ್ಕೆ ಭೇಟಿ ನೀಡಿ ಚಂದ್ರಯಾನ ನೌಕೆಯು ಚಂದ್ರನ ಮೇಲೆ ಲ್ಯಾಂಡ್‌ ಆಗುವ ಸನ್ನಿವೇಶವನ್ನು ನೇರವಾಗಿ ವೀಕ್ಷಿಸಲು ಅವಕಾಶವನ್ನು ಪಡೆಯುತ್ತಾರೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next