Advertisement

ಸೌರಭ್‌ಗೆ ಸೋಲು; ಜು ವೀ ಚಾಂಪಿಯನ್‌

09:57 AM Dec 02, 2019 | sudhir |

ಲಕ್ನೋ: ಭಾರತದ ಸೌರಭ್‌ ವರ್ಮ “ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌ ಬ್ಯಾಡ್ಮಿಂಟನ್‌’ ಪಂದ್ಯಾವಳಿಯ ಫೈನಲ್‌ನಲ್ಲಿ ಸೋತು ರನ್ನರ್ ಅಪ್‌ಗೆ ಸಮಾಧಾನಪಟ್ಟಿದ್ದಾರೆ. ರವಿವಾರದ ಪ್ರಶಸ್ತಿ ಕಾಳಗದಲ್ಲಿ ಅವರು ಚೈನೀಸ್‌ ತೈಪೆಯ ವಾಂಗ್‌ ಜು ವೀ ವಿರುದ್ಧ 15-21, 17-21 ಅಂತರದಿಂದ ಪರಾಭವಗೊಂಡರು.

Advertisement

ಸೌರಭ್‌ ವರ್ಮ ಈ ವರ್ಷ ಹೈದರಾ ಬಾದ್‌ ಮತ್ತು ವಿಯೆಟ್ನಾಂ ಕೂಟಗಳಲ್ಲಿ 2 ಬಿಡಬ್ಲ್ಯು ಎಫ್ ಪ್ರಶಸ್ತಿಗಳನ್ನು ಗೆದ್ದು ಭರವಸೆ ಮೂಡಿಸಿದ್ದರು. ತವರಿನ ಮತ್ತೂಂದು ಪಂದ್ಯಾವಳಿಯಲ್ಲೂ ಕನಸಿನ ಓಟ ಬೆಳೆಸಿದ್ದರು. ಆದರೆ ಅವರಿಗೆ ಮೊದಲ “ಸೂಪರ್‌ 300′ ಪ್ರಶಸ್ತಿ ಮರೀಚಿಕೆಯೇ ಆಗುಳಿಯಿತು. ವಿಶ್ವದ 22ನೇ ರ್‍ಯಾಂಕಿಂಗ್‌ ಆಟಗಾರನಾಗಿರುವ ವಾಂಗ್‌ ಜು ವೀ 48 ನಿಮಿಷಗಳ ಹೋರಾಟದ ಬಳಿಕ ಆತಿಥೇಯ ನಾಡಿನ ಆಟಗಾರನ ಕನಸನ್ನು ಛಿದ್ರ ಗೊಳಿಸಿದರು.

ಇದು ವಾಂಗ್‌ ಜು ವೀ ವಿರುದ್ಧ ಆಡಿದ 3 ಪಂದ್ಯಗಳಲ್ಲಿ ಸೌರಭ್‌ ವರ್ಮ ಅನುಭಸಿದ 2ನೇ ಸೋಲು. ಕಳೆದ ಮಾರ್ಚ್‌ನಲ್ಲಿ ನಡೆದ “ಟಾಂಗ್‌ ಯುನ್‌ ಕೈ ಕಪ್‌’ ಕೂಟದಲ್ಲೂ ಜು ವೀಗೆ ಸೌರಭ್‌ ಶರಣಾಗಿದ್ದರು.

ಕೊರಿಯಾದ ಹೆವೊ ಕ್ವಾಂಗ್‌ ಹೀ ವಿರುದ್ಧದ ಸೆಮಿಫೈನಲ್‌ನಲ್ಲಿ 75 ನಿಮಿಷಗಳ ಕಾಲ ದಿಟ್ಟ ಹೋರಾಟ ನೀಡಿದ್ದ ಸೌರಭ್‌ ವರ್ಮ ಫೈನಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫ‌ಲರಾದರು.

Advertisement

Udayavani is now on Telegram. Click here to join our channel and stay updated with the latest news.

Next