Advertisement

ಖುದ್ದು ಹಾಜರಾತಿಗೆ ಶಾಶ್ವತ ವಿನಾಯ್ತಿ ನೀಡಿ; ನ್ಯಾಯಾಲಯಕ್ಕೆ ರಾಹುಲ್‌ ಗಾಂಧಿ ಮನವಿ

08:24 PM May 11, 2022 | Team Udayavani |

ಥಾಣೆ: ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ತನಗೆ ಶಾಶ್ವತವಾಗಿ ಬಿಡುಗಡೆ ನೀಡಬೇಕು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ; ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿಯ ಜೆಎಂಎಫ್ಸಿ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.

Advertisement

ಮಹಾತ್ಮ ಗಾಂಧಿ ಹತ್ಯೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘವೇ ಕಾರಣ ಎಂದು ರಾಹುಲ್‌; 2014ರಲ್ಲಿ ಭಿವಂಡಿ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರೋಪಿಸಿದ್ದರು. ಇದನ್ನು ವಿರೋಧಿಸಿದ ಆರ್‌ಎಸ್‌ಎಸ್‌ ಕಾರ್ಯಕರ್ತ ರಾಜೇಶ್‌ ಕುಂಟೆ ಮಾನಹಾನಿ ಪ್ರಕರಣ ದಾಖಲಿಸಿದ್ದರು. ಅಂದಿನಿಂದಲೂ ಈ ಪ್ರಕರಣ ನಡೆಯುತ್ತಲೇ ಇದೆ.

2018ರಲ್ಲಿ ನ್ಯಾಯಾಲಯ ರಾಹುಲ್‌ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಸೂಚಿಸಿತ್ತು. ಆಗಲೂ ರಾಹುಲ್‌ ತಾವು ನಿರಪರಾಧಿ ಎಂದೇ ಹೇಳಿಕೊಂಡಿದ್ದರು. ಈ ಪ್ರಕರಣದಲ್ಲಿ ಆಗಾಗ ರಾಹುಲ್‌ ತಾವೇ ನೇರವಾಗಿ ನ್ಯಾಯಾಲಯಕ್ಕೆ ಆಗಮಿಸಬೇಕಾದ ಪರಿಸ್ಥಿತಿಯಿದೆ.

ಆದರೆ ತಾನು ಸತತವಾಗಿ ಪ್ರವಾಸದಲ್ಲಿರುತ್ತೇನೆ, ಹಾಗಾಗಿ ನ್ಯಾಯಾಲಯಕ್ಕೆ ನೇರವಾಗಿ ಬರಲು ಅಸಾಧ್ಯ. ತನ್ನ ಪರವಾಗಿ ವಕೀಲರು ಬರುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕೇಳಿಕೊಂಡಿದ್ದಾರೆ. ಈ ಬಗ್ಗೆ ನ್ಯಾಯಾಲಯ ಅರ್ಜಿದಾರ ರಾಜೇಶ್‌ಗೆ ಅಭಿಪ್ರಾಯ ತಿಳಿಸಲು ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next