Advertisement

Defamation case; ಸುಪ್ರೀಂ ಕೋರ್ಟ್‌ನಲ್ಲಿ ಕ್ಷಮೆಯಾಚಿಸಿದ ಕೇಜ್ರಿ

12:01 AM Feb 27, 2024 | Team Udayavani |

ಹೊಸದಿಲ್ಲಿ: ಬಿಜೆಪಿ ಐಟಿ ಸೆಲ್‌ ವಿಚಾರವಾಗಿ ಯೂಟ್ಯೂಬರ್‌ ಧ್ರುವ್‌ ರಥೀ ಅವರು ಮಾಡಿದ್ದ ವೀಡಿಯೋವನ್ನು ರೀ ಟ್ವೀಟ್‌ ಮಾಡಿದ್ದು ನನ್ನ ತಪ್ಪು ಎಂದು ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ತಪ್ಪೊಪ್ಪಿಕೊಂಡಿದ್ದಾರೆ.

Advertisement

2018ರಲ್ಲಿ ಯೂಟ್ಯೂಬರ್‌ ಧ್ರುವ್‌, ಬಿಜೆಪಿ ಐಟಿ ಸೆಲ್‌ ಪಾರ್ಟ್‌ 2 ಎಂಬ ವೀಡಿಯೋ ಮಾಡಿದ್ದು, ಅದನ್ನು ಕೇಜ್ರಿವಾಲ್‌ ರೀ ಟ್ವೀಟ್‌ ಮಾಡಿದ್ದರು. ಆದರೆ ಆ ವೀಡಿ ಯೋದಲ್ಲಿ ಬಿಜೆಪಿ ವಿರುದ್ಧ ಸುಳ್ಳು ಮತ್ತು ಮಾನಹಾನಿಕಾರಕ ವಿಚಾರಗಳೇ ತುಂಬಿವೆ ಎಂದು ಆರೋಪಿಸಿ, ಅದನ್ನು ಪ್ರಚಾರ ಮಾಡಿ ದ್ದಕ್ಕಾಗಿ ಕೇಜ್ರಿವಾಲ್‌ ವಿರುದ್ಧ ವಿಕಾಸ್‌ ಸಾಂಕೃತ್ಯ ಯಾನ್‌ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದೀಗ ಪ್ರಕರಣದಲ್ಲಿ ಕೇಜ್ರಿ ವಾಲ್‌ ತಪ್ಪೊಪ್ಪಿಕೊಂಡಿದ್ದಾರೆ. ಈ ಕಾರಣ ಮಾ. 11ರ ವರೆಗೆ ಅವರ ವಿರುದ್ಧ ಕ್ರಮ ಜರಗಿ ಸದಂತೆ ಸುಪ್ರೀಂ ಸೂಚಿಸಿದೆ. ದೂರನ್ನು ವಾಪಸ್‌ ಪಡೆಯಲು ಸಾಧ್ಯವೇ ಎಂದು ತಿಳಿಸಲು ದೂರುದಾರರನ್ನು ಕೇಳಿದೆ.

7ನೇ ಸಮನ್ಸ್‌ಗೂ ಗೈರು: ಕೋರ್ಟ್‌ ಹೇಳಿದರೆ ಹಾಜರಾಗುವೆ
ಅಬಕಾರಿ ಹಗರಣ ಸಂಬಂಧ ವಿಚಾರಣೆಗೆ ಹಾಜರಾಗಬೇಕೆಂದು ಜಾರಿ ನಿರ್ದೇಶನಾಲಯ ನೀಡಿದ್ದ 7ನೇ ಸಮನ್ಸ್‌ಗೂ ಕ್ಯಾರೇ ಎನ್ನದ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಈ ಬಾರಿಯೂ ವಿಚಾರಣೆಗೆ ಗೈರಾಗಿದ್ದಾರೆ. ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗ ಇ.ಡಿ. ಪದೇ ಪದೆ ಸಮನ್ಸ್‌ ನೀಡದೆ, ನ್ಯಾಯಾಲಯದ ಆದೇಶಕ್ಕೆ ಕಾಯಬೇಕು. ಕೋರ್ಟ್‌ ಏನಾದರೂ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದರೆ, ನಾನು ಹಾಜರಾಗುತ್ತೇನೆ ಎಂದೂ ಅವರು ಹೇಳಿದ್ದಾರೆ. ನ್ಯಾಯಾಲಯವು ಈ ಹಿಂದೆ ವಿಚಾರಣೆಯನ್ನು ಮಾ.16ಕ್ಕೆ ಮುಂದೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next