Advertisement

ಗಾಯಗೊಂಡಿದ್ದ ಜಿಂಕೆ ಸಾವು

10:02 AM Feb 01, 2022 | Team Udayavani |

ಬೆಳ್ತಂಗಡಿ: ಮುಂಡಾಜೆ ಗ್ರಾಮದ ಮುಂಡಾಜೆ- ಕಾಪು ರಕ್ಷಿತಾರಣ್ಯದ ರಸ್ತೆಯಲ್ಲಿ, ರವಿವಾರ ರಾತ್ರಿ ಅಪರಿಚಿತ ವಾಹನ ಢಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಜಿಂಕೆ ಸೋಮವಾರ ಮೃತಪಟ್ಟಿದೆ.

Advertisement

ವಾಹನ ಢಿಕ್ಕಿ ಹೊಡೆದು ರಸ್ತೆ ಬದಿ ಒದ್ದಾಡುತ್ತಿದ್ದ ಜಿಂಕೆಗೆ ಅರಣ್ಯ ಇಲಾಖೆ ಸಿಬಂದಿ, ಮುಂಡಾಜೆ ಗ್ರಾ.ಪಂ. ಸದಸ್ಯ ಜಗದೀಶ್‌ ನಾಯ್ಕ, ಶೇಖರ ಹಾಗೂ ಸ್ಥಳೀಯರ ಸಹಕಾರದಲ್ಲಿ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ಜಿಂಕೆ ಸಾವನ್ನಪ್ಪಿದೆ.

ಅಪಘಾತದಿಂದ ತಲೆ ಹಾಗೂ ಸೊಂಟದ ಭಾಗಕ್ಕೆ ತೀವ್ರವಾಗಿ ಗಾಯಗೊಂಡು ಮೃತಪಟ್ಟ ಸುಮಾರು ಒಂದೂವರೆ ವರ್ಷ ಪ್ರಾಯದ ಗಂಡು ಜಿಂಕೆಯ ಮರಣೋತ್ತರ ಪರೀಕ್ಷೆಯನ್ನು ಉಜಿರೆ ಪಶು ಚಿಕಿತ್ಸಾಲಯದ ಪಶುವೈದ್ಯಾಧಿಕಾರಿ ಡಾ| ಕಾರ್ತಿಕ್‌ ನಡೆಸಿದರು.

ಮುಂಡಾಜೆ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ಹಿರಿಯ ಪಶುವೈದ್ಯಕೀಯ ಪರೀಕ್ಷಕ ನಾಗಶಯನ ರಾವ್‌, ಉಪವಲಯ ಅರಣ್ಯಾಧಿಕಾರಿ ಯತಿಂದ್ರ ಹಾಗೂ ಅರಣ್ಯ ರಕ್ಷಕ ಶರತ್‌ ಶೆಟ್ಟಿ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next