Advertisement

ನಾಗರಹೊಳೆ-ಹುಣಸೂರು ಮುಖ್ಯ ರಸ್ತೆಯಲ್ಲಿ ಗುಂಡಿಗೆ ಜಿಂಕೆ ಬಲಿ

09:21 PM Jun 17, 2022 | Team Udayavani |

ಹುಣಸೂರು : ನಾಗರಹೊಳೆ ಮುಖ್ಯರಸ್ತೆ ಬದಿಯಲ್ಲಿ ಜಿಂಕೆಯೊಂದು ಗುಂಡೇಟಿಗೆ ಬಲಿಯಾಗಿರುವುದು ಶುಕ್ರವಾರ ಮಧ್ಯಾಹ್ನ ಪತ್ತೆಯಾಗಿದೆ.

Advertisement

ಹುಣಸೂರು-ನಾಗರಹೊಳೆ ಮುಖ್ಯ ರಸ್ತೆಯ ಭಾರತವಾಡಿ ಗೇಟ್ ಬಳಿಯ ಹೊಲದಲ್ಲಿ ದನಗಾಹಿಗಳಿಗೆ ಜಿಂಕೆ ಸತ್ತಿರುವುದು ಕಂಡುಬಂತು. ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕಾಗಮಿಸಿದ ವೀರನಹೊಸಹಳ್ಳಿ ವನ್ಯಜೀವಿ ವಲಯದ ಆರ್ ಎಫ್ಒ ನಮನ್‌ ನಾರಾಯಣ್ ನಾಯ್ಕ, ಡಿಆರ್‌ಎಫ್‌ಒ ವೀರಭದ್ರಯ್ಯ ಮಹಜರು ನಡೆಸಿದರು. ಮರಣೋತ್ತರ ಪರೀಕ್ಷೆ ವೇಳೆ ಚರೆಗುಂಡುಗಳು ಸಿಕ್ಕಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ಜಿಂಕೆಯು ಉದ್ಯಾನದಿಂದ ಹೊರಬಂದಿರುವ ವೇಳೆ ಭೇಟೆಗಾಗಿ ಗುಂಡಿಕ್ಕಿರಬಹುದೆಂದು ಶಂಕಿಸಲಾಗಿದ್ದು, ಈಗಾಗಲೇ ಅರಣ್ಯ ಸಂಚಾರಿ ದಳ, ಎಸ್ ಟಿಪಿಎಫ್ ತಂಡವು ಸಹ ಭೇಟಿ ನೀಡಿದ್ದು, ಆರೋಪಿಗಳ ಪತ್ತೆಗೆ ಕ್ರಮವಹಿಸಲಾಗಿದೆ ಎಂದು ಎಸಿಎಫ್ ಸತೀಶ್‌ಕುಮಾರ್ ಉದಯವಾಣಿಗೆ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next