Advertisement

ಬೀದಿ ನಾಯಿಗಳ ದಾಳಿಗೆ ನೀರನ್ನರಿಸಿ ಬಂದ ಜಿಂಕೆ ಬಲಿ

04:47 PM Apr 12, 2018 | Team Udayavani |

ತರೀಕೆರೆ: ಬೀದಿನಾಯಿಗಳ ದಾಳಿಗೆ ಸಿಲುಕಿ ಜಿಂಕೆಯೊಂದು ಮೃತಪಟ್ಟ ಘಟನೆ ಘಟನೆ ಎ.ರಾಮನಹಳ್ಳಿಯಲ್ಲಿ ಮಂಗಳವಾರ ಸಂಭವಿಸಿದೆ. ಸುಮಾರು ನಾಲ್ಕು ವರ್ಷದ ಜಿಂಕೆ ನೀರನ್ನು ಅರಸುತ್ತ ಕಾಡಿನಿಂದ ಊರಿನ ಕೆರೆಯತ್ತ ಆಗಮಿಸಿದೆ. ಈ ಸಂದರ್ಭದಲ್ಲಿ ಜಿಂಕೆ ಮೇಲೆ ಎರಗಿದ ಬೀದಿನಾಯಿಗಳು ಕಚ್ಚಿ ತೀವ್ರ ಗಾಯಗೊಳಿಸಿದವು. ಇದನ್ನು ಕಂಡ ಗ್ರಾಮಸ್ಥರು ನಾಯಿಗಳನ್ನು ಓಡಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

Advertisement

ತಕ್ಷಣವೇ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಜಿಂಕೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಉಪಚರಿಸಿದರೂ ಫಲಕಾರಿಯಾಗದೆ ಗಾಯಗೊಂಡಿದ್ದ ಜಿಂಕೆ ಮೃತಪಟ್ಟಿದೆ. ಮೃತ ಜಿಂಕೆಯ ಕಳೆಬರವನ್ನು ಪಟ್ಟಣದ ವಲಯಾರಣ್ಯಾಧಿಕಾರಿಗಳ ಕಚೇರಿಗೆ ತಂದು, ಸಹಾಯಕ ಉಪ ಅರಣ್ಯಸಂರಕ್ಷಣಾಧಿಕಾರಿ ಬಿ.ಎಂ. ರವೀಂದ್ರಕುಮಾರ್‌ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಸುಟ್ಟುಹಾಕಲಾಯಿತು. ವನಪಾಲಕ ಕೆ.ಕೆ. ಕೃಷ್ಣಮೂರ್ತಿ, ಅರಣ್ಯ ರಕ್ಷಕರಾದ ರಾಬರ್ಟ್‌, ಎ.ಆರ್‌. ಕೃಷ್ಣಮೂರ್ತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next