ಗುಜರಾತ್: ಜನ ಹಣ ವಿಡ್ ಡ್ರಾ ಮಾಡಲು ಎಟಿಎಂ ಕೇಂದ್ರದ ಒಳಗೆ ಹೋಗುತ್ತಾರೆ, ಅದು ಬಿಟ್ಟರೆ ಬ್ಯಾಂಕ್ ಅಧಿಕಾರಿಗಳು ಎಟಿಎಂ ಮೆಷಿನ್ ಗೆ ಹಣ ತುಂಬಲು ಹೋಗುತ್ತಾರೆ ಆದರೆ ಗುಜರಾತ್ ನ ಎಟಿಎಂ ಕೇಂದ್ರದ ಒಳಗೆ ಜಿಂಕೆಯೊಂದನ್ನು ಕಂಡು ಜನ ಆಶ್ಚರ್ಯಗೊಂಡಿದ್ದಾರೆ.
ಹೌದು ಗುಜರಾತ್ ನಲ್ಲಿರುವ ಎಟಿಎಂ ಕೇಂದ್ರದ ಒಳಗೆ ಜಿಂಕೆಯೊಂದು ಕಂಡು ಬಂದಿದೆ, ಇದನ್ನು ಕಂಡ ಜನ ಆಶ್ಚರ್ಯದಿಂದ ತಮ್ಮ ಮೊಬೈಲ್ ನಲ್ಲಿ ಜಿಂಕೆಯ ವಿಡಿಯೋ ಚಿತ್ರೀಕರಿಸಿದ್ದಾರೆ ಆದರೆ ಅಲ್ಲಿದ್ದವರಿಗೆ ಜಿಂಕೆ ಬಾಗಿಲು ಹಾಕಿದ್ದ ಎಟಿಎಂ ಒಳಗೆ ಹೇಗೆ ಹೋಯಿತು ಎಂದು… ಆದರೆ ಕೊನೆಗೆ ಅಲ್ಲಿನ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ನಿಜಾಂಶ ಗೊತ್ತಾಗಿದೆ.
ಗುಜರಾತ್‌ನ ಧರಿಯ ಅಮ್ರೇಲಿಯಲ್ಲಿರುವ ಎಟಿಎಂ ಕೇಂದ್ರದೊಳಗೆ ಜಿಂಕೆಯೊಂದು ಕಾಣಿಸಿಕೊಂಡಿದೆ ಆದರೆ ಎಟಿಎಂ ನ ಬಾಗಿಲು ಮಾತ್ರ ಮುಚ್ಚಿದ ರೀತಿಯಲ್ಲಿ ಇತ್ತು ಒಳಗೆ ಹೋದ ಜಿಂಕೆಗೆ ಹೊರ ಬರಲು ಒದ್ದಾಡುತ್ತಿತ್ತು ಬಳಿಕ ಎಟಿಎಂ ಕೇಂದ್ರದ ಸಿಸಿಟಿವಿ ಪರಿಶೀಲಿಸಿದಾಗ ನಾಯಿಗಳ ಹಿಂಡೊಂದು ಜಿಂಕೆಯ ಮೇಲೆ ದಾಳಿ ನಡೆಸಲು ಬಂದಿವೆ ಈ ವೇಳೆ ಜೀವ ಉಳಿಸಿಕೊಳ್ಳಲು ಜಿಂಕೆ ಎಟಿಎಂ ಬಳಿ ಬಂದಿದೆ ಓಡುವ ಭರದಲ್ಲಿ ಎಟಿಎಂ ಒಳಗೆ ನುಗ್ಗಿ ನಾಯಿಗಳ ದಾಳಿಯಿಂದ ತನ್ನನ್ನು ತಾನು ರಕ್ಷಣೆ ಮಾಡಿಕೊಂಡಿದೆ ಆದರೆ ಅಲ್ಲಿಂದ ಹೊರ ಬರಲು ಹರಸಾಹಸ ಪಡುತ್ತಿತ್ತು ಇದನ್ನು ಗಮನಿಸಿದ ಸಾರ್ವಜನಿಕರು ಕೇಂದ್ರದ ಬಾಗಿಲನ್ನು ತೆರೆದು ಜಿಂಕೆ ಹೋಗಲು ಅನುವು ಮಾಡಿಕೊಟ್ಟಿದ್ದಾರೆ ಬಾಗಿಲು ಓಪನ್ ಆಗುತ್ತಿದ್ದಂತೆ ಒಂದೇ ಸಮನೆ ಸ್ಥಳದಿಂದ ಕಾಲ್ಕಿತ್ತಿದೆ.