ಚಿಕ್ಕಮಗಳೂರು: ಕಾಡುಪ್ರಾಣಿಗಳ ಮುಗ್ದತೆ ನೋಡುಗರ ಮನಸೆಳೆಯುತ್ತದೆ. ಅವುಗಳ ಆಟ ನೋಡುವುದಕ್ಕೆ ಚೆಂದ, ಅದರಲ್ಲೂ ಜಿಂಕೆಗಳ ಆಟ ನೋಡಲು ಎರಡು ಕಣ್ಣುಗಳು ಸಾಲದು.ಅದೇ ಜಿಂಕೆ ನಿಮ್ಮನೆಯೊಳಗೆ ಬಂದು ಬಿಟ್ಟರೇ….!
ಕಾಡಿಗೆ ಮೇಯಲು ಹೋಗಿದ್ದ ಹಸುಗಳ ಜೊತೆಗೆ ಜಿಂಕೆ ಮರಿಯೊಂದು ಮನೆಗೆ ಬಂದು ಬಿಟ್ಟಿದೆ. ಅಷ್ಟೇ ಅಲ್ಲದೇ ನೆರವಾಗಿ ಮನೆಯೊಳಗೆ ಬಂದು ಬಿಟ್ಟದೆ!
ಇದು ನಡೆದದ್ಧು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕಿರುಗುಂದ ಗ್ರಾಮದ ಉದುಸೆ ರಾಜೇಗೌಡರ ಮನೆಯಲ್ಲಿ.
ಇದನ್ನೂ ಓದಿ:ಪುಲ್ವಾಮಾ ದಾಳಿಯಲ್ಲಿ ಹುತಾತ್ಮ ಯೋಧನ ಪತ್ನಿ ನಿತಿಕಾ ಕೌಲ್ ಭಾರತೀಯ ಸೇನೆಗೆ ಸೇರ್ಪಡೆ
ಶುಕ್ರವಾರ ಎಂದಿನಂತೆ ಹಸುಗಳನ್ನು ಮೇಯಲು ಕಾಡಿಗೆ ಹೊಡೆದಿದ್ದಾರೆ. ಹಸುಗಳು ಸಂಜೆ ಮನೆಗೆ ಬರುವಾಗ ಹಸುಗಳ ಜೊತೆ ಪುಟ್ಟ ಜಿಂಕೆ ಮರಿಯೂ ಬಂದಿದೆ. ಬಂದಿದ್ದೇ ಯಾರ ಭಯವು ಇಲ್ಲದೇ ಮನೆಯೊಳಗೆಲ್ಲ ಓಡಾಡಿದೆ. ಇದನ್ನು ಕಂಡ ಮನೆ ಮಂದಿಗೆಲ್ಲ ಸಂತೋಷವೋ ಸಂತೋಷ. ಜಿಂಕೆ ಮರಿಯನ್ನು ಮುದ್ದಾಡಿ ರಾತ್ರಿಯೆಲ್ಲ ಮನೆಯಲ್ಲೇ ಜೋಪಾನ ಮಾಡಿ ಬೆಳಿಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಶನಿವಾರ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಒಪ್ಪಿಸಿದ್ದಾರೆ.