Advertisement

ಇಂದು ಗೋಪೂಜೆ, ವಾಹನ ಪೂಜೆ

08:31 PM Nov 04, 2021 | Team Udayavani |

ಉಡುಪಿ: ನಾಡಿನಾದ್ಯಂತ ದೀಪಾವಳಿ ಹಬ್ಬದ ಖರೀದಿ ಭರಾಟೆ ಮುಂದುವರಿದಿದೆ. ಗುರುವಾರ ತೈಲ ಅಭ್ಯಂಗ, ಎಣ್ಣೆ ಶಾಸ್ತ್ರ, ಗದ್ದೆಗಳಿಗೆ ದೀಪ ಹಚ್ಚುವ ಕಾರ್ಯಕ್ರಮ  ನಡೆಯಿತು.

Advertisement

ಮೂಲ್ಕಿ ಶಾಂಭವಿ ನದಿಯಿಂದ ಉತ್ತರ ಭಾಗದವರು ಬಲೀಂದ್ರನನ್ನು ಕರೆದು ಪೂಜೆ ಸಲ್ಲಿಸಿದರು. ಶ್ರೀಕೃಷ್ಣಮಠವೂ ಸಹಿತ ಕರಾವಳಿ ಭಾಗದ ದೇವಸ್ಥಾನಗಳಲ್ಲಿ ಗುರುವಾರ ರಾತ್ರಿ ಬಲೀಂದ್ರ ಪೂಜೆ ನಡೆಯಿತು. ಗ್ರಾಮೀಣ ಭಾಗದಲ್ಲಿ ಭತ್ತದ ಫ‌ಸಲಿಗೆ ಧಾನ್ಯ ಲಕ್ಷ್ಮೀ ಪೂಜೆ ನಡೆಯಿತು. ಶುಕ್ರವಾರ ಗೋಪೂಜೆ, ವಾಹನಪೂಜೆ ನಡೆಯಲಿದೆ.

ದರ ಏರಿಕೆಯ ನಡುವೆ ಹೊಸ ಬಟ್ಟೆ, ಪಟಾಕಿಗಳನ್ನು ಖರೀದಿಸಿ ಜನರು ಸಂಭ್ರಮಿಸಿದರು.

ನಗರಾದ್ಯಂತ ಟ್ರಾಫಿಕ್‌ ಜಾಂ:

ನಗರದ ವಿವಿಧ ಅಂಗಡಿ- ಮಳಿಗೆಗಳಲ್ಲಿ ವಿವಿಧ ಆಫ‌ರ್‌ಗಳು ಜನರನ್ನು ಕೈಬೀಸಿ ಕರೆಯುತ್ತಿರುವ ಹಿನ್ನೆಲೆಯಲ್ಲಿ ಜನರ ವಾಹನ ಎಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂತು. ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಹಾಗೂ ಜನರ ದಟ್ಟಣೆ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂತು.

Advertisement

ಶ್ರೀಕೃಷ್ಣ ಮಠದಲ್ಲಿ ಎಣ್ಣೆಶಾಸ್ತ್ರ:

ಶ್ರೀಕೃಷ್ಣಮಠದಲ್ಲಿ ದೀಪಾವಳಿ ಪ್ರಯುಕ್ತ ತೈಲಾಭ್ಯಂಗ ಹಾಗೂ ಎಣ್ಣೆಶಾಸ್ತ್ರ ನಡೆಯಿತು. ಪ್ರಾತಃ ಕಾಲದ 5.39 ಚಂದ್ರೋದಯ ಕಾಲದಲ್ಲಿ ಚಂದ್ರಶಾಲೆಯಲ್ಲಿ ಪಲಿಮಾರು ಮಠಾ ಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರಿಗೆ ಪರ್ಯಾಯ ಮಠದ ಪಾರುಪತ್ಯಗಾರರಾದ ವಿದ್ವಾನ್‌ ಮುದರಂಗಡಿ ಲಕ್ಷ್ಮೀಶಾಚಾರ್ಯರು ಎಣ್ಣೆಶಾಸ್ತ್ರ ಮಾಡಿದರು. ಅನಂತರ ಪಲಿಮಾರು ಮಠಾಧೀಶರು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಗೆ, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರಿಗೆ, ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರಿಗೆ ಎಣ್ಣೆಶಾಸ್ತ್ರ ಮಾಡಿದರು. ಪಾರುಪತ್ಯಗಾರರು ಶ್ರೀಪಾದರಿಗೆ ಗೌರವದೊಂದಿಗೆ ಹೊಸ ವಸ್ತ್ರ ಸಮರ್ಪಿಸಿದರು.

ದೀಪಾವಳಿಗೆ ಮಳೆ ತೊಡಕು:

ಅಪರಾಹ್ನದ ಬಳಿಕ ಸಿಡಿಲು ಸಹಿತ ವಿಪರೀತ ಮಳೆ ಸುರಿದ ಕಾರಣ ವಾಹನ ಸವಾರರು ತೊಂದರೆ ಅನುಭವಿಸಿದರು. ರಸ್ತೆ ಬದಿ ವ್ಯಾಪಾರಿಗಳು ಕೂಡ ಮಳೆ ಯಿಂದಾಗಿ ಕಂಗಾಲಾದರು. ಮಳೆ ತುಸು ಬಿಡುವು ನೀಡಿದ ಬಳಿಕ ಜನದಟ್ಟಣೆ ಮತ್ತೆ ಹೆಚ್ಚಾಯಿತು. ಬಳಿಕ ಹೂಗಳನ್ನು ಮಿತದರದಲ್ಲಿ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next