Advertisement

ಕೇನ್ಸ್‌ ಚಲನಚಿತ್ರೋತ್ಸವದಲ್ಲಿ ಭಾರತೀಯರ ದಂಡು

08:00 PM May 11, 2022 | Team Udayavani |

ವಿಶ್ವದ ಅತ್ಯಂತ ಪ್ರಸಿದ್ಧ ಚಲನಚಿತ್ರ ವೇದಿಕೆಯಾದ ಕೇನ್ಸ್‌ ಚಲನಚಿತ್ರೋತ್ಸವ ಮೇ 17ರಂದು ಆರಂಭವಾಗಲಿದ್ದು, ಭಾರತೀಯ ಚಿತ್ರರಂಗದ ದೊಡ್ಡ ದಂಡು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ.

Advertisement

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌, ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌, ನಟಿ ಪೂಜಾ ಹೆಗ್ಡೆ, ನಿರ್ದೇಶಕ ಶೇಖರ್‌ ಕಪೂರ್‌ ಸೇರಿ ಅನೇಕರು 75ನೇ ಚಲನಚಿತ್ರೋತ್ಸವದ ಮೊದಲನೇ ದಿನವೇ ರೆಡ್ ಕಾರ್ಪೆಟ್ ಮೇಲೆ ನಡೆದು ಸಾಗಲಿದ್ದಾರೆ.

ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಭಾರತದ ಸಿನಿ ಗಣ್ಯರ ನೇತೃತ್ವ ವಹಿಸಿಕೊಳ್ಳಲಿದ್ದಾರೆ.

ಈ ಚಲನಚಿತ್ರೋತ್ಸವ ದಲ್ಲಿ ದೀಪಿಕಾ ಪಡುಕೋಣೆ ತೀರ್ಪುಗಾರರಾಗಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next