Advertisement

ಸಿಗರೇಟ್ ಬಳಸಿ ವಿಭಿನ್ನವಾಗಿ ಪಟಾಕಿ ರಾಕೆಟ್‌ಗಳನ್ನು ಸಿಡಿಸಿದ ವ್ಯಕ್ತಿ! ವಿಡಿಯೋ ವೈರಲ್

01:17 PM Oct 24, 2022 | Team Udayavani |

ದೀಪಾವಳಿ 2022: ಬಾಯಿಯಲ್ಲಿ ಸಿಗರೇಟ್ ಬಳಸಿ ರಾಕೆಟ್‌ಗಳನ್ನು ಬೆಳಗಿಸುವ ವಿಭಿನ್ನ ವಿಧಾನದ ತಮಾಷೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗಿದೆ. ದೀಪಾವಳಿಗೆ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಶಾಂತ ನಂದಾ ಅವರು ಟ್ವಿಟರ್‌ನಲ್ಲಿ ವೈರಲ್ ಆಗಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

Advertisement

“ನಾಸಾದ ಸಂಸ್ಥಾಪಕರು ಖಂಡಿತವಾಗಿಯೂ ಭಾರತದವರು” ಎಂಬ ಶೀರ್ಷಿಕೆಯೊಂದಿಗೆ ನಂದಾ ಅವರ ವೀಡಿಯೊ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. 20 ಸೆಕೆಂಡ್‌ಗಳ ವೀಡಿಯೊದಲ್ಲಿ, ವ್ಯಕ್ತಿ ತನ್ನ ಬಾಯಿಯ ನಡುವೆ ಸುಡುವ ಸಿಗರೇಟನ್ನು ಹಿಡಿದುಕೊಂಡು ರಾಕೆಟ್‌ಗಳನ್ನು ಸಿಡಿಸುವುದು ರೀತಿ ಅಚ್ಚರಿ ಮೂಡಿಸಿದೆ.

ವ್ಯಕ್ತಿ ರಸ್ತೆಯ ಮಧ್ಯದಲ್ಲಿ ನಿಂತು 20 ಸೆಕೆಂಡುಗಳ ಅವಧಿಯಲ್ಲಿ 11 ರಾಕೆಟ್‌ಗಳನ್ನು ಸಿಡಿಸುವುದನ್ನು ಕಾಣಬಹುದು. ಈ ಕೃತ್ಯವು ಅತ್ಯಂತ ಅಪಾಯಕಾರಿಯಾಗಿದ್ದರೂ, ಗಾಯ ಅಥವಾ ಸುಡುವ ಭಯವಿಲ್ಲದೆ ಆ ವ್ಯಕ್ತಿ ಮಾಡಿದ ಸಾಹಸ ವಿಭಿನ್ನವಾಗಿತ್ತು.

 

Advertisement

ವೀಡಿಯೊ ಸುಮಾರು 984K ಗೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಮತ್ತು ರಾಕೆಟ್‌ಗಳನ್ನು ಸಿಡಿಸಿದ  ಅವರ ವಿಶಿಷ್ಟ ವಿಧಾನದಿಂದ ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ. ವೀಡಿಯೊವನ್ನು ವೀಕ್ಷಿಸಿದ ನಂತರ, ಕೆಲವು ಇಂಟರ್ನೆಟ್ ಬಳಕೆದಾರರು ಅವರನ್ನು ಸರಳವಾಗಿ ರಜನಿಕಾಂತ್ ಎಂದು ಕರೆದ್ದಾರೆ, ಇನ್ನು ಕೆಲವರು ಅವರನ್ನು “ರಾಕೆಟ್‌ಮ್ಯಾನ್” ಎಂದು ಕರೆದರೆ, ಇತರರು ಅವರನ್ನು ಸ್ಪೇಸ್‌ಎಕ್ಸ್ ಸಿಇಒ ಎಲಾನ್ ಮಸ್ಕ್‌ಗೆ ಪರಿಚಯಿಸಬೇಕೆಂದು ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next