Advertisement

ದೀಪಾವಳಿಯ ಖುಷಿಯಲ್ಲಿ ಈ ಸಂಗತಿ ಮರೆಯದಿರಿ

06:36 PM Oct 23, 2022 | Team Udayavani |

ದೀಪಾವಳಿ ಎಂದರೆ ಕತ್ತಲಿನಿಂದ ಬೆಳಕಿನೆಡೆಗೆ ಸಂತಸದಿ ನಾವಿರಿಸುವ ಹೆಜ್ಜೆಯದು. ಪುಟ್ಟ ಮಕ್ಕಳಿಂದ ಹಿರಿಯವರೂ ಕೂಡ ಆನಂದದಿಂದ ಆಚರಿಸುವ ಆಚರಣೆಯದು.

Advertisement

ಆ ಆಚರಣೆಯು ತಪ್ಪಲ್ಲ, ಅದರ ಹಿಂದಿನ ಉದ್ದೇಶವು ತಪ್ಪಲ್ಲ, ನಡೆಸುತ್ತಿರುವ ವಿಧಾನವೂ ತಪ್ಪಲ್ಲ. ಆದರೆ ಆಚರಣೆಯ ಖುಷಿಯಲ್ಲಿ ನಾವು ಏನನ್ನೋ ಮರೆಯುತ್ತಿದ್ದೇವೆ. ಏನದು? ಏನನ್ನು ಮರೆಯುತ್ತಿದ್ದೇವೆ ನಾವು? ನಮ್ಮಿಂದ ಆಗುತ್ತಿರುವ ತಪ್ಪಾದರೂ ಏನು? ಎಂಬ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿರಬಹುದು. ಸರಿಯಾಗಿ ಯೋಚಿಸಿದರೆ ನಿಮಗೆ ಅದರ ಉತ್ತರ ತಿಳಿಯುತ್ತದೆ.

ದೀಪಾವಳಿ ಎಂಬ ಹೆಸರಲ್ಲೇ ದೀಪವಿದೆ. ದೀಪಾವಳಿಗೆ ಚೀನದಿಂದ ಆಮದು ಮಾಡಿಕೊಂಡ ವಸ್ತುಗಳನ್ನು ಬಳಸುವ ಬದಲು ಸ್ವದೇಶಿ ವಸ್ತುಗಳನ್ನೇ ಬಳಸಬಹುದು. ಇವೆಲ್ಲಕ್ಕಿಂತ ಹೆಚ್ಚಾಗಿ ದೀಪಾವಳಿ ಎಂದರೆ ಕಾಣಸಿಗುವುದು ಪಟಾಕಿ. ಮಕ್ಕಳಿಗೂ ಕೂಡ ಪಟಾಕಿಯೆಂದ ತತ್‌ ಕ್ಷಣ ಕಿವಿ ಅರಳುತ್ತದೆ. ಅವರಿಗೆ ಇಷ್ಟವಾಗುವುದೆಂದು ಪಟಾಕಿಗಳನ್ನು ಖರೀದಿಸುವ ನೀವು, ಅದರಿಂದಾಗುವ ತೊಂದರೆಯ ಬಗ್ಗೆ ಸಹ ಗಮನವಿರಿಸುವ ಅಗತ್ಯವಿದೆ.

ಪಟಾಕಿ ಖರೀದಿಸುವುದು, ಸಿಡಿಸುವುದು ತಪ್ಪಲ್ಲ. ಖುಷಿಯಿಂದ ಪಟಾಕಿ ಸಿಡಿಸುವ ಮಕ್ಕಳಿಗೆ ಮುಂದೆ ಅದು ದುಃಖವನ್ನುಂಟು ಮಾಡಬಾರದು. ಅತಿಯಾದರೆ ಅಮೃತವೂ ವಿಷ ಎಂಬಂತೆ ಎಲ್ಲದಕ್ಕೂ ಒಂದು ಮಿತಿ ಎಂದು ಇರುತ್ತದೆ, ಆದರೆ ಅದೇ ಮಿತಿಯನ್ನು ನಾವು ಮೀರುತ್ತಿದ್ದೇವೆ. ಅದುವೇ ಮಾಲಿನ್ಯಕ್ಕೆ ಎಡೆ ಮಾಡಿಕೊಡುತ್ತಿದೆ. ಮಕ್ಕಳನ್ನು ಖುಷಿಪಡಿಸಲು ಪಟಾಕಿ ಕೊಡಿಸುವಾಗ ಭವಿಷ್ಯದಲ್ಲಿ ಅದರ ಪರಿಣಾಮವೇನೆಂಬುದನ್ನು ಒಮ್ಮೆ ಯೋಚಿಸಿ. ಎಲ್ಲ ಪ್ರಶ್ನೆಗಳಿಗೂ ಉತ್ತರ ನಿಮ್ಮಲ್ಲೇ ಇದೆ.

ನಿರ್ಧಾರವೂ ನಿಮ್ಮದೇ ಆಗಿದೆ. ನೀವು ತೆಗೆದುಕೊಳ್ಳುವ ನಿರ್ಧಾರವು ಕತ್ತಲನ್ನು ಹೊಡೆದೋಡಿಸುವ ಬೆಳಕಿನಂತೆ ಬೆಳಗಲಿ, ನಿಮ್ಮ ಜೀವನದಲ್ಲಿ ಸಂತೋಷವನ್ನು ತರಿಸಲಿ. ನಿಮಗೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

Advertisement

ರವೀಶ್‌ ಶೆಟ್ಟಿ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next