ಶಿರಸಿ: ಹುಲಿ, ಚಿರತೆ ಕಾಟ ಹೆಚ್ಚುತ್ತಿರುವ ಬೆನ್ನಲ್ಲೇ ಈ ಗ್ರಾಮಸ್ಥರು ಹುಲಿ ಬನದಲ್ಲಿ ಪೂಜೆ ಸಲ್ಲಿಸಿದರು.
ಯಾವುದೇ ಆತಂಕ, ದುಗುಡಗಳಿಲ್ಲದೇ ಭಕ್ತಿ ಭಾವದಿಂದ ಹುಲಿಯಪ್ಪನಿಗೆ ಪೂಜೆ ಸಲ್ಲಿಸಿದರು.
ತಾಲೂಕಿನ ಮೇಲಿನ ಓಣಿಕೇರೆ ಹತ್ತಿರದ ಪರಮಕೇರಿಯಲ್ಲಿನ ಹುಲಿ ದೇವರ ಕಟ್ಟೆಗೆ ದೀಪಾವಳಿ ಹಬ್ಬದ ನಿಮಿತ್ತ ವಿಶೇಷ ಪೂಜೆ ಸಲ್ಲಿಸಲಾಯಿತು.
ಮನೆಯಲ್ಲಿ ತಿಂಡಿ ತಿನ್ನದೇ ಸುತ್ತಲಿನ ಪೂಜೆ ನಡೆಸಿ, ಹುಲಿದೇವರ ಬನದಲ್ಲೂ ಸಾಮೂಹಿಕವಾಗಿ ಪೂಜೆ ಸಲ್ಲಿಸುವುದು ವಾಡಿಕೆ. ವಾರ್ಷಿಕ ಸಂಪ್ರದಾಯದಂತೆ ದೇವತೆಮನೆ, ಓಣಿಕೇರಿ ಸುತ್ತಲಿನ ಗ್ರಾಮಸ್ಥರು ಹಣ್ಣು ಕಾಯಿ ಸೇವೆ ಸಲ್ಲಿಸಿದರು.
ಶಿರಸಿ ಸೀಮೆಯಲ್ಲಿ, ಮಲೆನಾಡಿನಲ್ಲಿ ಹುಲಿಕಾಟ ಹಿಂದೆ ಹೆಚ್ಚಿದ್ದ ಕಾಲದಲ್ಲಿ ಹುಲಿಯಿಂದ ಜನ ಜಾನುವಾರುಗಳ ರಕ್ಷಣೆ ಪಡೆದುಕೊಳ್ಳಲು ಪೂಜಾ ಪದ್ಧತಿ ನಡೆದಿದೆ ಎಂಬುದು ಪ್ರತೀತಿ. ಹುಲಿಯಪ್ಪನ ಮೂರ್ತಿ ಅನೇಕ ಹುಲಿ ಬನಗಳಲ್ಲಿ ಇದೆ. ದೀಪಾವಳಿಗೆ ಗ್ರಾಮಸ್ಥರು ಎಲ್ಲ ಸೇರಿ ಪೂಜಿಸುವ ಪದ್ಧತಿ ಇದೆ.
– ರಾಘವೇಂದ್ರ ಬೆಟ್ಟಕೊಪ್ಪ
ಇದನ್ನೂ ಓದಿ: Moodigere: ತರಕಾರಿ ತುಂಬಿದ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತ್ಯು…