Advertisement
ಪಲಿಮಾರು ಮಠದ ಟ್ರಸ್ಟಿ ಸಚ್ಚಿದಾನಂದ ರಾವ್ ಅವರು ಗೋ ಮಾತೆಯನ್ನು ಹೂವಿನ ಹಾರಗಳಿಂದ ಶೃಂಗರಿಸಿ ಮಂದಿರದೊಳಗೆ ಬರಮಾಡಿ ಪ್ರದಕ್ಷಿಣೆಗೈದರು. ಅನಂತರ ತುಳುನಾಡಿನ ಸಂಪ್ರದಾಯದಂತೆ ಪೂಜಿಸಿ ಸನ್ನಿಧಿಯ ಪ್ರಸಾದ ನೀಡಿ ಗೋಮಾತೆಯನ್ನು ಗೌರವಿಸಿದರು. ಸಂಜೆ ಶ್ರೀ ಬಾಲಾಜಿ ಸನ್ನಿಧಿ ಯ ಮಹಿಳಾ ಸದಸ್ಯೆಯರಿಂದ ಭಜನೆ, ರಾಮರಾಜ್ ಅವರಿಂದ ಮಹಾಭಾರತ ಪ್ರವಚನ, ಪಲಿಮಾರು ಮಠದ ಟ್ರಸ್ಟಿ ವಾಸು ದೇವ ಎಸ್. ಉಪಾಧ್ಯಾಯ ಅವರ ಪೌರೋ ಹಿತ್ಯದಲ್ಲಿ ಸಾಮೂಹಿಕ ಶ್ರೀ ಶನಿಮಹಾ ಪೂಜೆಯನ್ನು ಆಯೋಜಿಸಲಾಗಿತ್ತು.
Related Articles
Advertisement
ಮೀರಾರೋಡ್ ಪಲಿಮಾರು ಮಠದಲ್ಲಿ ಪ್ರತಿದಿನ ಸಂಜೆ ಭಜನೆ, ಪ್ರತಿ ಶನಿವಾರ ರಂಗಪೂಜೆ, ಪ್ರತಿ ತಿಂಗಳ ಏಕಾದಶಿ ದಿನದಲ್ಲಿ ವಿಷ್ಣು ಸಹಸ್ರನಾಮ, ತುಳಸಿ ಅರ್ಚನೆ, ಹುಣ್ಣಿಮೆ ದಿನ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಪ್ರತಿ ತಿಂಗಳ ಅಮಾವಾಸ್ಯೆ ದಿನ ಸಾರ್ವಜನಿಕ ಶನಿಪೂಜೆ, ಪಂಚಾಂಗಕ್ಕೆ ಅನುಗುಣವಾಗಿ ಗೋಕುಲಾಷ್ಠಮಿ, ಶ್ರೀ ಗಣೇಶ ಚತುರ್ಥಿ, ನವರಾತ್ರಿ, ಕಾರ್ತಿಕ ದೀಪೋತ್ಸವ, ಸುಬ್ರಹ್ಮಣ್ಯ ಷಷ್ಠಿ, ನಾಗರ ಪಂಚಮಿ, ಹನುಮಾನ್ ಜಯಂತಿ, ನವಗೃಹ ಪೂಜೆ, ಶಾಂತಿ, ಉಪನಯನ, ವಿವಾಹ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜೋತಿಷ, ಜಾತಕ ಮಾಡಿಸಲಾಗುವುದು. ನಾಡು – ನುಡಿಯ ವಿಭಿನ್ನ ಕಲಾಪ್ರಕಾರಗಳಿಗೆ ವೇದಿಕೆ ಸಿದ್ಧವಾಗಿದ್ದು, ನಿರ್ದಿಷ್ಟ ಸ್ಥಳದಲ್ಲಿ ಉತ್ತರಕ್ರಿಯೆ, ವೈಕುಂಠ ಸಮಾರಾಧನೆಗೆ ಅವಕಾಶಗಳನ್ನು ಕಲ್ಪಿಸಲಾಗಿದೆ. ತುಳು, ಕನ್ನಡಿಗ ಭಕ್ತರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. –ವಾಸುದೇವ ಎಸ್. ಉಪಾಧ್ಯಾಯ ಟ್ರಸ್ಟಿ , ಪಲಿಮಾರು ಮಠ
ಚಿತ್ರ-ವರದಿ: ರಮೇಶ ಅಮೀನ್