Advertisement
ಜಗತ್ತಿಗೆ ಬೆಳಕು ಶ್ರೇಷ್ಠ ಪ್ರಧಾನವಾದದ್ದು, ಬೆಳಕಿಲ್ಲದೆ ಜಗತ್ತು ಇಲ್ಲ. ಸಕಲ ಜೀವರಾಶಿಗಳಿಗೂ ಬೆಳಕು ಬೇಕೇ ಬೇಕು. ಪ್ರಾಚೀನ ಕಾಲದಲ್ಲಿ ದೀಪವನ್ನು ಕಲ್ಲು ಅಥವಾ ಚಿಪ್ಪಿನಿಂದ ಮಾಡುತ್ತಿದ್ದರು. ಕಾಲ ಬದಲಾದಂತೆ ವಿಧ ವಿಧ ಮಣ್ಣಿನ, ಲೋಹದ ಹಾಗೂ ಬೆಳ್ಳಿ ದೀಪಗಳು ಬೆಳಕಿಗೆ ಬಂದವು. ಮಣ್ಣಿನ ದೀಪ ಹಚ್ಚುವುದು ಸರ್ವ ಶ್ರೇಷ್ಠ.
Related Articles
Advertisement
ಯಾವ ಸಮಯದಲ್ಲಿ ದೀಪವನ್ನು ಬೆಳಗಿಸುವುದರಿಂದ ಮನೆಗೆ ಶ್ರೇಷ್ಠ, ಯಾವ ದಿಕ್ಕಿನಲ್ಲಿ ದೀಪ ಬೆಳಗಿಸಬೇಕು ಎಂಬುದನ್ನು ತಿಳಿದುಕೊಳ್ಳಬೇಕು.
ಬೆಳಕು ದೀಪದಲ್ಲಿ ನೆಲೆಸಿದೆ. ಯಾವುದೇ ಶುಭ ಕಾರ್ಯಕ್ರಮಗಳನ್ನು ಆರಂಭ ಮಾಡುವ ಮೊದಲು ದೀಪ ಬೆಳಗುವುದರ ಮೂಲಕವೇ ಶುರುವಾಗುವುದು. ದೀಪ ಜ್ಞಾನಾಭಿವೃದ್ಧಿಯನ್ನು ಹೆಚ್ಚಿಸುತ್ತದೆ ಮನಸ್ಸಿನ ಅಂಧಕಾರವನ್ನು ತೊಲಗಿಸುತ್ತದೆ.
ದೀಪವನ್ನು ಜ್ಞಾನದ ಸಂಕೇತವೆಂದು ಕರೆಯುತ್ತಾರೆ. ದೀಪ ಕತ್ತಲೆಯ ತೊಲಗಿಸಿ ಬೆಳಕಿನೆಡೆಗೆ ಕೊಂಡೊಯ್ಯುತ್ತದೆ. ದೀಪವನ್ನು ಬೆಳಗ್ಗೆ 5 ರಿಂದ 10 ರವರೆಗೆ ಸಂಜೆ 5 ರಿಂದ 7 ರವರೆಗೆ ಬೆಳಗಿಸುವುದು ಶ್ರೇಷ್ಠ ಕಾಲ.
ಮಣ್ಣಿನ ದೀಪವಾದರೆ ದೀಪದ ತುದಿಯು ಎಲ್ಲೂ ಮುರಿದಿರಬಾರದು. ಮುರಿದ ದೀಪವನ್ನು ಹಚ್ಚುವುದರಿಂದ ಲಕ್ಷ್ಮಿದೇವಿಯ ತನುಮನ ತೃಪ್ತಿಯಾಗುವುದಿಲ್ಲ.
ಬೆಳಗಿಸುವ ಮೊದಲು ದೀಪ ಸ್ವಚ್ಛಗೊಳಿಸಿ ಉಪಯೋಗಿಸಬೇಕು. ದೇವರ ಮುಂದೆ ಬೆಳಗಿದ ದೀಪ ಗಾಳಿಗೆ ಅಥವಾ ಮತ್ತ್ಯಾವುದೋ ಕಾರಣದಿಂದ ನಂದಿ ಹೋದರೆ ಮತ್ತೆ ದೀಪ ಹಚ್ಚಿ ದೇವರಿಗೆ ಭಕ್ತಿಯಲ್ಲಿ ಭಾವಪರವಶವಾಗಿ ಪೂಜೆ ಸಲ್ಲಿಸಬೇಕು.
ದೀಪಗಳನ್ನು ಮೂಲೆಯಲ್ಲಿ ಮತ್ತು ಪಶ್ಚಿಮ ದಿಕ್ಕಿನಲ್ಲಿ ಇಡಬಾರದು. ಇದರಿಂದ ಹಣಕಾಸಿನ ತೊಂದರೆ ಹೆಚ್ಚಾಗುತ್ತದೆ. ಸಂಜೆ ಸಮಯ ಮನೆಯ ಮುಖ್ಯಬಾಗಿಲಲ್ಲಿ ರಂಗೋಲಿ ಬಿಡಿಸಿ ದೀಪ ಬೆಳಗಿಸುವುದು ಶುಭಕರ.
-ವಾಣಿ, ಮೈಸೂರು