Advertisement

ಮಂಗಳೂರಿನಲ್ಲೂ 15 ತಿಂಗಳು ಸೇವೆ ಸಲ್ಲಿಸಿದ್ದ ಕ್ಯಾಪ್ಟನ್‌ ದೀಪಕ್‌ ವಸಂತ್‌ ಸಾಠೆ

03:27 PM Aug 09, 2020 | sudhir |

ಮಂಗಳೂರು: ಕಲ್ಲಿಕೋಟೆಯ ಕರಿಪುರ ನಿಲ್ದಾಣದಲ್ಲಿ ಸಂಭವಿಸಿದ ಏರ್‌ ಇಂಡಿಯಾ ಎಕ್ಸ್‌ ಪ್ರಸ್‌ ವಿಮಾನ ದುರಂತದಲ್ಲಿ ಮೃತಪಟ್ಟಿರುವ ಪೈಲಟ್‌ ಕ್ಯಾಪ್ಟನ್‌ ದೀಪಕ್‌ ವಸಂತ ಸಾಠೆ ಅವರು 2015-16ರಲ್ಲಿ ಮಂಗಳೂರು ಏರ್‌ ಇಂಡಿಯಾ ಬೇಸ್‌ನಲ್ಲಿಯೂ ಪೈಲಟ್‌ ಆಗಿ 15 ತಿಂಗಳು ಸೇವೆ ಸಲ್ಲಿಸಿದ್ದರು.

Advertisement

ಆ ಅವಧಿಯಲ್ಲಿ ಅವರು ಮಂಗಳೂರಿನಲ್ಲಿ ಕದ್ರಿ ಪಾರ್ಕ್‌ ಬಳಿಯ ಪ್ಲಾಟ್‌ನಲ್ಲಿ ಪತ್ನಿಯ ಜತೆ ವಾಸವಾಗಿದ್ದರು. ಅವರಿಗೆ ಮಂಗಳೂರಿನಲ್ಲಿಯೂ ಹಲವು ಮಂದಿ ಸ್ನೇಹಿತರು-ಪರಿಚಿತರು ಇದ್ದರು. ಸ್ನೇಹಮಯಿ ಹಾಗೂ ನಗುಮುಖದ ಸರಳ ವೃಕ್ತಿತ್ವದವರಾಗಿದ್ದು ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದಾಗಲೂ ಎಲ್ಲರೊಂದಿಗೆ ಸ್ನೇಹದಿಂದಿದ್ದರು ಎಂದು “ನಾಗಿ’ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಜ್ಞಾಪಿಸಿಕೊಳ್ಳುತ್ತಾರೆ.

ವಸಂತ ಸಾಠೆಯವರ ಜತೆಗಿನ ಒಡನಾಟವನ್ನು ಸ್ಮರಿಸಿಕೊಂಡಿರುವ ಮಂಗಳೂರಿನ ರಿಯಲ್‌ ಎಸ್ಟೇಟ್‌ ಉದ್ಯಮಿ ಲ್ಯಾನ್ಸ್‌ಲಾಟ್‌ ಸಲ್ದಾನ ಅವರು, “ಸಾಠೆಯವರು ದಕ್ಷ ಹಾಗೂ ಅನುಭವಿ ಪೈಲಟ್‌ ಆಗಿದ್ದರು. ವಾಯು ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಅವರು ಅತ್ಯಂತ ಶಿಸ್ತಿನ ವ್ಯಕ್ತಿಯಾಗಿದ್ದರು’ ಎಂದಿದ್ದಾರೆ.

ಸಾಠೆ ಅವರು ತಮ್ಮ ಜತೆ 1988-90ರ ಅವಧಿಯಲ್ಲಿ ವಾಯುಸೇನೆಯಲ್ಲಿ ಜತೆಯಾಗಿ ಕೆಲಸ ಮಾಡಿದ್ದರು ಎಂಬುದಾಗಿ ವಾಯುಸೇನೆಯ ನಿವೃತ್ತ ವಿಂಗ್‌ ಕಮಾಂಡರ್‌ ಆಗಿರುವ ಜಿ.ಬಿ. ಅತ್ರಿ ನೆನಪಿಸಿಕೊಳ್ಳುತ್ತಾರೆ. ಅವರ ಸಮಯ ಪ್ರಜ್ಞೆ ಹಾಗೂ ಕೊನೆಯ ಕ್ಷಣದ ತೀರ್ಮಾನಗಳು ವಿಮಾನ ಬೆಂಕಿಗಾಹುತಿಯಾಗುವಂತಹ ಬಹುದೊಡ್ಡ ದುರಂತದಿಂದ ಪಾರು ಮಾಡಿದೆ’ ಎಂದು ಅತ್ರಿ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next