Advertisement

ದೀಪಾ ಕರ್ಮಾಕರ್‌, ಸಾಕ್ಷಿ  ಫೋರ್ಬ್ಸ್ ಏಶ್ಯ ಸಾಧಕರು

10:03 AM Apr 18, 2017 | Team Udayavani |

ನ್ಯೂಯಾರ್ಕ್‌: ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲದಿದ್ದರೂ ಕೋಟ್ಯಂತರ ಭಾರತೀಯ ಅಭಿಮಾನಿಗಳ ಮನಗೆದ್ದ ಜಿಮ್ನಾಸ್ಟಿಕ್‌ ಸ್ಪರ್ಧಿ ದೀಪಾ ಕರ್ಮಾಕರ್‌, ಕಂಚಿನ ಪದಕ ಗೆದ್ದ ಕುಸ್ತಿಪಟು ಸಾಕ್ಷಿ ಮಲಿಕ್‌ ಸೇರಿದಂತೆ ಒಟ್ಟು 53 ಮಂದಿ ಭಾರತೀಯರು “ಫೋರ್ಬ್ಸ್ ಅಂಡರ್‌ 30 ಏಶ್ಯ ಸೂಪರ್‌ ಸಾಧಕರ ಪಟ್ಟಿ’ಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಕರ್ನಾಟಕದ ಅಂಗವಿಕಲ ಮಾಜಿ ಈಜು ಪಟು, ಹಾಲಿ ಕೋಚ್‌, ಶರತ್‌ ಗಾಯಕ್ವಾಡ್‌ ಸ್ಥಾನ ಪಡೆದಿದ್ದಾರೆ. ಇದು ರಾಜ್ಯಕ್ಕೆ ಸಿಕ್ಕಿದ ಬಹುದೊಡ್ಡ ಗೌರವ.

Advertisement

53 ಸಾಧಕರಿಗೆ ಗೌರವ, ಭಾರತದ 2ನೇ ಅತೀ ದೊಡ್ಡ ಸಾಧನೆ: ಮನೋರಂಜನೆ, ಹಣಕಾಸು ಮತ್ತು ಸಾಹಸೋದ್ಯಮ, ಕ್ರೀಡೆ, ಸಾಮಾಜಿಕ ಉದ್ಯಮ ಸೇರಿದಂತೆ ಒಟ್ಟಾರೆ 10 ವಿಭಾಗದಲ್ಲಿ ಯುವ ಸಾಧಕರನ್ನು ಗೌರವಿಸಲಾಗಿದೆ. 30 ವರ್ಷ ವಯೋಮಿತಿಯೊಳಗಿನ ಸಾಧಕರಿಗಾಗಿ ಈ ಗೌರವ ನೀಡಲಾಗುತ್ತಿದೆ. ಇದರಲ್ಲಿ ಭಾರತದ 53 ಮಂದಿ ಯುವಕರು ಸ್ಥಾನ ಪಡೆದಿದ್ದಾರೆ. ಏಶ್ಯದಲ್ಲಿ ಫೋರ್ಬ್ಸ್ ಪ್ರಕಟಿಸಿದ ಗೌರವವನ್ನು ಅತೀ ಹೆಚ್ಚು ಪಡೆದಿರುವವರ ಪೈಕಿ ಭಾರತ 2ನೇ ಸ್ಥಾನ ಪಡೆದಿದೆ.  ಚೀನದ 76 ಮಂದಿ ಪಟ್ಟಿಯಲ್ಲಿದ್ದಾರೆ. ಫೋರ್ಬ್ಸ್ ಪಟ್ಟಿಯಲ್ಲಿ ಏಶ್ಯದ ಅತೀ ಹೆಚ್ಚು ಗೌರವ ಪಡೆದ ಮೊದಲ ರಾಷ್ಟ್ರ ಚೀನ.

ಕ್ರೀಡೆ ಹೊರತುಪಡಿಸಿದಂತೆ ಬೇರೆ ಬೇರೆ ಕ್ಷೇತ್ರದಲ್ಲಿ ಬಹುಬೇಗ ಗುರುತಿಸಿ ಕೊಂಡ ಭಾರತೀಯ ಯುವ ಸಾಧಕರು ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅಂತ‌ಹವರ ಹೆಸರು ಇಲ್ಲಿದೆ.  ಖ್ಯಾತ ಬಾಲಿವುಡ್‌ ನಟಿ ಆಲಿಯಾ ಭಟ್‌, ಉದ್ಯಮಿ ಶ್ರೀಕಾಂತ್‌ ಬೋಲಾ, ಎನ್‌ಜಿಓ ಮೂಲಕ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡ ತ್ರಿಶಾ ಶೆಟ್ಟಿ, ಹಸಿವಿನ ಸಮಸ್ಯೆ ನೀಗಿಸಲು ಫೀಡಿಂಗ್‌ ಇಂಡಿಯಾ ಸಂಸ್ಥೆ ಹುಟ್ಟು ಹಾಕಿದ ಅಂಕಿತಾ ಕವಾತ್ರಾ ಮತ್ತಿತರರು ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next