Advertisement
ಮತ್ತೂಂದೆಡೆ, ಈಗಾಗಲೇ ಸಾವಿರಾರು ಮಂದಿ ಮಧ್ಯವರ್ತಿಗಳ ಮೂಲಕ ಆಧಾರ್‌ಕಾರ್ಡ್, ಚುನಾವಣ ಗುರುತಿನ ಚೀಟಿ, ಪಡಿತರ ಚೀಟಿ ಪಡೆದುಕೊಂಡು ಸರಕಾರಿ ಸೌಲಭ್ಯಗಳ ಫಲಾನುಭವಿಗಳಾಗಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಸುಮಾರು 5 ಸಾವಿರ ಮಂದಿ ರೊಹಿಂಗ್ಯಾ ಸಮುದಾಯದವರು ಅಕ್ರಮವಾಗಿ ನೆಲೆಸಿದ್ದಾರೆ ಎಂದು ಗುಪ್ತಚರ ಮೂಲಗಳು ಹೇಳಿವೆ.
Related Articles
ಪೊಲೀಸ್ ಮೂಲಗಳ ಪ್ರಕಾರ ಆಳ ದೋಣಿ ಮೀನುಗಾರಿಕೆ ಮತ್ತು ಸಾಮಾನ್ಯ ಮೀನು ಗಾರಿಕೆ (ನಿತ್ಯ ಹೋಗಿ ಬರುವುದು) ಹಾಗೂ ಬಂದರು ಪ್ರದೇಶಗಳಲ್ಲಿನ ಕೆಲಸ ಕಾರ್ಯಗಳಲ್ಲಿ ರೊಹಿಂಗ್ಯಾ ದವರೇ ಅಧಿಕವಾಗಿದ್ದಾರೆ. ಏಕೆಂದರೆ, ಲಕ್ಷಾಂತರ ರೂ.ಗೆ ಟೆಂಡರ್ ಪಡೆಯುವ ಗುತ್ತಿಗೆ ದಾರರು ಕಡಿಮೆ ಖರ್ಚಿನಲ್ಲಿ ತಮ್ಮ ಕೆಲಸ ಮುಗಿಸಿಕೊಳ್ಳಲು ಇವರನ್ನು ಬಳಸುತ್ತಿದ್ದಾರೆ. ಹೀಗಾಗಿ ಅತೀ ಕಡಿಮೆ ದಿನಗೂಲಿಗೆ ಸಿಗುವ ರೊಹಿಂಗ್ಯಾದವರನ್ನು ಕೇವಲ 300-400 ರೂ. ಕೊಟ್ಟು ನಿಯೋ ಜಿಸಿ ಕೊಳ್ಳುತ್ತಿದ್ದಾರೆ ಎಂದು ಗುಪ್ತಚರ ವರದಿ ತಿಳಿಸಿದೆ. ಈ ಸಂಬಂಧ ನಿರಂತರವಾಗಿ ಕಾರ್ಯಾ ಚರಣೆ ನಡೆಯುತ್ತಿದೆ. ಜತೆಗೆ ಕರಾವಳಿ ಕಾರ್ಯ ಪಡೆಗಳ ಅಭಿವೃದ್ಧಿಗೆ ಸರಕಾರ 20 ಕೋಟಿ ರೂ. ಬಿಡುಗಡೆ ಮಾಡಿದ್ದು, ಬೋಟ್, ಶಸ್ತ್ರಾಸ್ತ್ರ ಹಾಗೂ ಇತರ ಉಪಕರಣ ಗಳ ಖರೀದಿಗೆ ಸೂಚಿಸಿದೆ.
Advertisement
ಚಿಂದಿ ಆಯಲು ಬಂದು ಕಂಟಕವಾದರು2014ರಲ್ಲಿ ನಡೆದ ಬುದ್ವಾನ್ ಸ್ಫೋಟದ ಬಳಿಕ ಸಾವಿರಾರು ಮಂದಿ ರೊಹಿಂಗ್ಯ ಮತ್ತು ಬಾಂಗ್ಲಾದೇಶಿಯರು ಕರ್ನಾಟಕ, ಪಶ್ಚಿಮ ಬಂಗಾಲ ಮತ್ತು ಮುಂಬಯಿಗೆ ಪ್ರವೇಶಿಸಿದ್ದಾರೆ. ಕರ್ನಾಟಕದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಉತ್ತರ ಕರ್ನಾಟಕ, ಚಿಕ್ಕಮಗಳೂರು, ದ.ಕ., ಉಡುಪಿ ಕರಾವಳಿ ಭಾಗದಲ್ಲಿ ಅಕ್ರಮ ನಿವಾಸಿಗಳಾಗಿದ್ದಾರೆ. ಕರಾವಳಿ ಭಾಗದಲ್ಲಿ ಮೀನುಗಾರಿಕೆ, ಚಿಕ್ಕಮಗಳೂರು, ಕೊಡಗು ಮತ್ತು ಮಲೆನಾಡು ಭಾಗಗಳಲ್ಲಿ ಕಾಫಿ, ಅಡಿಕೆ ತೋಟಗಳಲ್ಲಿ ಜೀವನ ಕಟ್ಟಿಕೊಂಡಿದ್ದಾರೆ. ಭದ್ರತೆಗೆ ಕಂಟಕ
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ ಸೇರಿ ಬೆಂಗಳೂರು ಸುತ್ತಮುತ್ತ ವಾಸವಾಗಿರುವ ಅವರು ಭದ್ರತೆಗೆ ದೊಡ್ಡ ಕಂಟಕವಾಗಿದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ ಬಂಧನಕ್ಕೊಳಗಾದ ಜಮಾತ್ ಉಲ್-ಮುಜಾಹಿದ್ದೀನ್ (ಜೆಎಂಬಿ) ಸಂಘಟನೆಯ ಉಗ್ರರಿಂದ ರಾಜ್ಯದಲ್ಲಿರುವ ಅಕ್ರಮ ಬಾಂಗ್ಲಾದೇಶಿಯರ ಬಗ್ಗೆ ಕೆಲವೊಂದು ಸ್ಫೋಟಕ ಮಾಹಿತಿ ದೊರಕಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಸುಮಾರು 5 ಸಾವಿರ ಮಂದಿ ಬಾಂಗ್ಲಾದೇಶಿಯರು ಅಥವಾ ರೊಹಿಂಗ್ಯರು ಇರಬಹುದು ಎಂದು ಶಂಕಿಸಲಾಗಿದೆ. ಕೆಲವು ಎನ್‌ಜಿಒಗಳ ಪ್ರಕಾರ 1 ಲಕ್ಷ ಮೀರಿದೆ. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಸಿಎಬಿ-ಎನ್‌ಆರ್‌ಸಿಯಿಂದ ಉಪಯೋಗ?
ಕೇಂದ್ರ ಸರಕಾರದ ಎನ್‌ಆರ್‌ಸಿ (ನಾಗರಿಕರ ರಾಷ್ಟ್ರೀಯ ನೋಂದಣಿ) ಕಾಯ್ದೆ ಜಾರಿಗೆ ಬರುತ್ತಿರುವುದು ಅಕ್ರಮ ವಲಸಿಗರ ಪತ್ತೆಗೆ ಸಾಕಷ್ಟು ಸಹಾಯವಾಗಲಿದೆ. ಇದಷ್ಟೇ ಅಲ್ಲ, ಹಾಲಿ ಚರ್ಚೆಗೆ ಗ್ರಾಸವಾಗಿರುವ ಪೌರತ್ವ ತಿದ್ದುಪಡಿ ಮಸೂದೆ (ಸಿಎಬಿ) ಕಾಯ್ದೆಯಾಗಿ ಜಾರಿಗೆ ಬಂದರೆ, ರಾಜ್ಯದಲ್ಲಿ ವಾಸಿಸುತ್ತಿರುವ ರೊಹಿಂಗ್ಯಾಗಳನ್ನು ಗುರುತಿಸಿ ಹೊರಹಾಕಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಬಹಳಷ್ಟು ಅಕ್ರಮ ನಿವಾಸಿಗಳು ಈಗಾಗಲೇ ಆಧಾರ್ ಸಹಿತ ಸ್ಥಳೀಯ ವಿಳಾಸ ದೃಢೀಕರಣ ಪತ್ರ ಪಡೆದಿರುವುದರಿಂದ ಇವರನ್ನು ಗುರುತಿಸುವುದು ಕಷ್ಟ ಎಂದೇ ಹೇಳಲಾಗುತ್ತಿದೆ. – ಮೋಹನ್ ಭದ್ರಾವತಿ