Advertisement

ಸಮಾನತೆಗೆ ಶ್ರಮಿಸಿದ ಉಪಾಧ್ಯಾಯರು

01:34 PM Sep 26, 2021 | Team Udayavani |

ಚಾಮರಾಜನಗರ: ದೇಶದಲ್ಲಿದ್ದ ಬಡವರು, ಶೋಷಿತರು ಹಾಗೂ ನಿರ್ಗತಿಕರನ್ನು ಮುಂಚೂಣಿಗೆ ತಂದು ಸಾಮಾಜಿಕ ಸಮಾನತೆಗೆ ಶ್ರಮಿಸಿದವರಲ್ಲಿ ಪಂಡಿತ್‌ ದೀನ ದಯಾಳ್‌ ಉಪಾಧ್ಯಾಯರು ಪ್ರಮುಖರಾಗಿದ್ದಾರೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ್‌ ತಿಳಿಸಿದರು.

Advertisement

ತಾಲೂಕಿನ ಮರಿಯಾಲದ ಮುರುಘ ರಾಜೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ನೆಹರು ಯುವ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮರಿಯಾಲದ ಮುರುಘ ರಾಜೇಂದ್ರ ಪದವಿ ಪೂರ್ವ ಕಾಲೇಜು ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ 75ನೇ ಸ್ವಾತಂತ್ರ್ಯೋತ್ಸವ ಹಾಗೂ ಪಂಡಿತ ದೀನ ದಯಾಳ್‌ ಉಪಾಧ್ಯಾಯ ಜನ್ಮ ದಿನಾಚರಣೆ ಪ್ರಯುಕ್ತ ನಡೆದ ಫಿಟ್‌ ಇಂಡಿಯಾ ಫ್ರೀಡಂ ರನ್‌ಗೆ ಚಾಲನೆ ನೀಡಿ ಮಾತನಾಡಿದರು.

ಯಾವುದೇ ವ್ಯವಸ್ಥೆ ಸೂಸೂತ್ರವಾಗಿ ನಡೆಯಲು ಕಾನೂನಿನ ಅಗತ್ಯವಿದೆ. ಹಿಂದೆ ಬಸವಣ್ಣನವರ ವಚನಗಳು ಅಲಿಖೀತ ಕಾನೂನಾಗಿದ್ದವು, ನಂತರ ಅಂಬೇಡ್ಕರ್‌ ಅವರು ಬರವಣಿಗೆ ಮೂಲಕ ಕಾನೂನಿಗೆ ಒಂದು ರೂಪ ನೀಡಿದರು ಎಂದರು.

ಉಪನ್ಯಾಸಕ ಎನ್‌. ಸುರೇಶ್‌ ಋಗ್ವೇದಿ ಮಾತನಾಡಿ, ತಮ್ಮ ಇಡೀ ಜೀವನವನ್ನು ದೇಶಕ್ಕಾಗಿ ಸಮರ್ಪಿ ಸಿದ ದೀನ್‌ ದಯಾಳ್‌ ಉಪಾಧ್ಯಾಯ ಶ್ರೇಷ್ಠ ಚಿಂತಕರು, ಸಾಮಾಜಿಕ, ಅರ್ಥಿಕ, ರಾಜಕೀಯ ಚಿಂತನೆ ಗಳು ಇಂದಿಗೂ ಪ್ರಸ್ತುತವಾಗಿದೆ. ಅವರು ಭಾರತೀಯ ಸಂಸ್ಕೃತಿಯ ಪ್ರತಿಪಾದಕರಾಗಿದ್ದಾರೆ ಎಂದರು.

ಫಿಟ್‌ ಇಂಡಿಯಾ ಫ್ರೀಡಮ್‌ ರನ್‌ 2.0 ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಪ್ರಾಚಾರ್ಯ ಮಹದೇವಸ್ವಾಮಿ, ನೆಹರು ಯುವ ಕೇಂದ್ರದ ಜಿಲ್ಲಾ ಯುವಜನಾಧಿಕಾರಿ ರಾಜೇಶ್‌ ಕಾರಂತ್‌ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next