ಮೈಸೂರು: ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ರಕ್ತದಾನ ಶಿಬಿರ ಮತ್ತುಅಭಿನಂದನಾ ಸಮಾರಂಭ ಏರ್ಪಡಿಸುವ ಮೂಲಕ ದೀನ್‌ದಯಾಳ್ ಉಪಾಧ್ಯಾಯರ ಜನ್ಮದಿನ ಆಚರಿಸಲಾಯಿತು.
ನಗರ ಬಿಜೆಪಿ ಮಹಿಳಾ ಮೋರ್ಚಾವತಿಯಿಂದ ಬಿಜೆಪಿ ಕಚೇರಿಯಲ್ಲಿ ಪಂಡಿತ್‌ದೀನ್ ದಯಾಳ್ ಉಪಾಧ್ಯಾಯರ ಜನ್ಮಸ್ಮರಣೆ ಅಂಗವಾಗಿ ದೀನದಯಾಳ್ ಉಪಾಧ್ಯಾಯಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮೇಯರ್‌ಸುನಂದಾ ಪಾಲನೇತ್ರ ಅವರನ್ನು ಅಭಿನಂದಿಸಲಾಯಿತು.
ಈ ವೇಳೆ ಶಾಸಕ ಎಲ್.ನಾಗೇಂದ್ರ ಮಾತನಾಡಿ, ದೇಶದ ಚಿತ್ರಣವನ್ನು ದೀನ್‌ದಯಾಳ್ ದಲಿಸಿದರು. ಅವರು ಭಾರತೀಯಜನತಾ ಪಕ್ಷಕ್ಕೆ ಬಂದು ಬಿಜೆಪಿ ಕಟ್ಟಿಲ್ಲದಿದ್ದರೆ ನಮ್ಮಪಕ್ಷದ ಮುಖ್ಯಮಂತ್ರಿಗಳು ಇರುತ್ತಿರಲಿಲ್ಲ.ಅಟಲ್ ಬಿಹಾರಿ ವಾಜಪೇಯಿ ಹಾಗೂನರೇಂದ್ರ ಮೋದಿ ಪ್ರಧಾನಿಯಾಗುತ್ತಿರಲಿಲ್ಲ.ಅಂತಹ ಮಹಾನ್ ವ್ಯಕ್ತಿಯ ಜನ್ಮದಿನವನ್ನು ನಾವಿಂದು ಆಚರಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯೆ ವೇದಾವತಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯ ದರ್ಶಿ ಸಿದ್ದರಾಜು, ಬಿಜೆಪಿ ನಗರ ಅಧ್ಯಕ್ಷಟಿ.ಎಸ್. ಶ್ರೀವತ್ಸ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಹೇಮಾ ನಂದೀಶ್, ಮಹಾನಗರ ನಗರಉಸ್ತುವಾರಿ ಗೋಪಾಲ್‌ರಾಜ್, ಮಹಿಳಾಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಲಕ್ಷ್ಮಿಕಿರಣ್‌ಗೌಡ, ರಾಜ್ಯ ಮಹಿಳಾ ಮೋರ್ಚಾಉಸ್ತುವಾರಿ ವಿಜಯಲಕ್ಷ್ಮಿ, ಬಿಜೆಪಿ ಮಹಿಳಾ ಪ್ರಧಾನ ಕಾರ್ಯದರ್ಶಿ ರೇಣುಕಾರಾಜ್, ನಾಗರತ್ನಗೌಡ ಇನ್ನಿತರರು ಹಾಜರಿದ್ದರು.
70 ಮಂದಿಯಿಂದ ರಕ್ತದಾನ: ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಮೈಸೂರು ನಗರ ಜಿಲ್ಲಾ ಯುವ ಮೋರ್ಚಾವೈದ್ಯಕೀಯ ಪ್ರಕೋಷ್ಠ ಮತ್ತು ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠ ವತಿಯಿಂದ ನಗರದ ಚಾಮುಂಡಿಪುರಂನಲ್ಲಿರುವ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 70ಮಂದಿ ರಕ್ತದಾನ ಮಾಡಿದರು. ಈ ವೇಳೆ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಟಿ.ಎಸ್. ಶ್ರೀವತ್ಸ, ರಕ್ತದಾನದ ಮೂಲಕ ಜನ್ಮ ದಿನ ಆಚರಣೆಗೆ ಪಕ್ಷದ ಯುವ ಸಂಘಟನೆ ಮುಂದಾಗಿರುವುದು ಮಾದರಿಕಾರ್ಯವಾಗಿದೆ. ಮಹನೀಯರನ್ನು ಸ್ಮರಿಸುವ ಜತೆಗ ಸಾಮಾಜಿಕ ಕಾರ್ಯದಲ್ಲೂ ಮುಂಚೂಣೆಯಲ್ಲಿರುವ ಯುವ ಮೋರ್ಚಾದ ಪ್ರಕೋಷ್ಠದ ಸೇವಾ ಕಾರ್ಯ ಹೀಗೆ ಮುಂದುವರಿಯಲಿದೆ ಎಂದು ಹೇಳಿದರು.
ನಗರ ಯುವಮೋರ್ಚಾ ಅಧ್ಯಕ್ಷ ಎಂ.ಜೆ.ಕಿರಣ್‌ಗೌಡ, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಜಯಶಂಕರ್, ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಟ ಸಂಚಾಲಕ ಅಪೂರ್ವ ಸುರೇಶ್, ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಗಿರೀಶ್, ಸಹ ಸಂಚಾಲಕ ಪರಮೇಶ್‌ಗೌಡ, ನಗರ ಪ್ರಧಾನ ಕಾರ್ಯದರ್ಶಿ ಸೋಮಸುಂದರ್, ಗಿರಿಧರ್, ನಗರ ಉಪಾಧ್ಯಕ್ಷ ಟಿ.ರಮೇಶ್, ರಕ್ತದಾನ ಶಿಬಿರದ ಸಂಚಾಲಕ ಹಾಗೂ ಯುವ ಮೋರ್ಚಾ ಉಪಾಧ್ಯಕ್ಷ ಡಿ.ಲೋಹಿತ್, ಜೀವನ್, ನಗರ ಯುವಮೋರ್ಚಾ ಉಪಾಧ್ಯಕ್ಷ ಕಾರ್ತಿಕ್ ಮರಿಯಪ್ಪ, ನಿತಿನ್,ನಿಶಾಂತ್, ಹರ್ಷಿತ್, ನಗರದ ಚಾಮುಂಡೇಶ್ವರಿ ಮಂಡಲ ಯುವಮೋರ್ಚಾ ಅಧ್ಯಕ್ಷ ಮಧು, ಚಾಮರಾಜ ಕ್ಷೇತ್ರದ ಯುವಮೋರ್ಚಾ ಅಧ್ಯಕ್ಷ ಸಚಿನ್, ಕೃಷ್ಣರಾಜ ಕ್ಷೇತ್ರದ ಯುವಮೋರ್ಚಾ ಅಧ್ಯಕ್ಷ ಮನು ಇತರರಿದ್ದರು.