ಕಾನೂನಾತ್ಮಕ ಅಂಶಗಳು ಒಂದೆಡೆ ಯಾದರೆ ಪ.ಅರಣ್ಯ ಗುರುತಿಸಿರುವ ಪ್ರದೇಶಗಳನ್ನು ಸರ್ವೇ ಮಾಡಿ ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು. ಹೀಗಾಗಿ ಇದು ಬಗೆಹರಿಯುತ್ತಿಲ್ಲ.
Advertisement
ರಾಜ್ಯದ 9.94 ಲಕ್ಷ ಹೆಕ್ಟೇರ್ ಪರಿಭಾವಿತ ಅರಣ್ಯದಲ್ಲಿ 6.64 ಲಕ್ಷ ಹೆಕ್ಟೇರ್ ಭಾಗವನ್ನು ಹೊರಗಿಟ್ಟು 3,30,186.93 ಹೆ. ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಆಗಿಸಿ ಸರಕಾರ 2022ರ ಮೇ 5ರಂದು ಅಧಿಸೂಚಿಸಿದೆ. ಡೀಮ್ಡ್ ಫಾರೆಸ್ಟ್‌ಗೆ ಸಂಬಂಧಿಸಿದ ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿದ್ದು, ಸರಕಾರ ಈ ಅಧಿಸೂಚನೆ ಬಗ್ಗೆ ಸಲ್ಲಿಸಿರುವ ಅಫಿದವಿತ್ ಮೇಲೆ ನ್ಯಾಯಾಲಯ ತನ್ನ ನಿರ್ಧಾರ ಪ್ರಕಟಿಸಬೇಕಿದೆ. ಡೀಮ್ಡ್ ಫಾರೆಸ್ಟ್ ನಿಂದ ಕೈಬಿಡಲು ನಿರ್ಧರಿಸಿರುವ ಪ್ರದೇಶಗಳು ಕೋರ್ಟ್ ನಲ್ಲಿ ಇತ್ಯರ್ಥ ಗೊಳ್ಳಬೇಕಿದೆ.
1995ರಲ್ಲಿ ಕೇರಳದ ವ್ಯಕ್ತಿಯೊಬ್ಬರು ಅರಣ್ಯ ವಿಷಯಕ್ಕೆR ಸಂಬಂಧಿಸಿ ದಾಖಲಿಸಿದ್ದ ಅರ್ಜಿ ಹಿನ್ನೆಲೆಯಲ್ಲಿ ತಜ್ಞರ ಸಮಿತಿ -1ರ ವರದಿಯಲ್ಲಿ 9,94,881.11 ಹೆಕ್ಟೇರ್ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಎಂದು ಗುರುತಿಸಿ ಸು.ಕೋ.ಗೆ ಅರಣ್ಯ ಇಲಾಖೆ ಪ್ರಮಾಣಪತ್ರ ಸಲ್ಲಿಸಿತ್ತು.
Related Articles
Advertisement
ಈ ಸಮಿತಿಯು ರಾಜ್ಯ ಸರಕಾರ ಈ ಹಿಂದೆ ರಚಿಸಿದ್ದ ತಜ್ಞರ ಸಮಿತಿ -1ರ ವರದಿಯಲ್ಲಿ ಕೂಡುವಿಕೆಯಲ್ಲಿ ಮತ್ತು ಪರಿವರ್ತನೆಯಲ್ಲಿ ದೋಷಗಳು, ಸರ್ವೇ ನಂಬರ್‌ಗಳ ಪುನರಾವರ್ತನೆ, ಸರ್ವೇ ನಂಬರ್ ಲಭ್ಯವಿಲ್ಲದ ಸರಕಾರದ ಪ್ರದೇಶಗಳು, ಖಾಸಗಿ ಪಟ್ಟಾ, ಸರ್ವೇ ನಂಬರ್ ಅಸ್ತಿತ್ವದಲ್ಲಿಲ್ಲದ/ ನಮೂನೆ -50 ಮತ್ತು 53ರಡಿ ಸಾರ್ವಜನಿಕ ಉದ್ದೇಶಕ್ಕಾಗಿ ಮಂಜೂರಾದ ಪ್ರದೇಶಗಳು, ಪುನರ್ವಸತಿ ಪ್ರದೇಶಗಳು, ಮೀಸಲು ಅರಣ್ಯ ಪ್ರದೇಶ, ಕೆರೆ ತೀರ, ಸಾಂಸ್ಥಿಕ, ಶಾಲಾ ನೆಡುತೋಪುಗಳು, ಸ್ಟ್ರೀಪ್-ಕಾಲುವೆ ನಡುತೋಪುಗಳು ಮತ್ತು ರಸ್ತೆಬದಿ ನೆಡುತೋಪುಗಳು 2 ಹೆಕ್ಟೇರ್‌ಗಿಂತ ಕಡಿಮೆ ಪ್ರದೇಶ, ಪ್ರತೀ ಹೆಕ್ಟೇರಿಗೆ 50ಕ್ಕಿಂತ ಕಡಿಮೆ ಮರಗಳಿರುವ ಪ್ರದೇಶ, ಇತರ ಇಲಾಖೆ, ವಿಭಾಗಗಳಿಗೆ ವರ್ಗಾಯಿಸಲಾದ ಪ್ರದೇಶಗಳು, ವಿವಿಧ ಶಾಸನಬದ್ಧ ಅರಣ್ಯ ಪ್ರದೇಶಗಳು ಸಹಿತ ಒಟ್ಟು 7,73,326 ಹೆಕ್ಟೇರ್ ಪ್ರದೇಶಗಳನ್ನು ಹೊರತುಪಡಿಸಿ ಒಟ್ಟು 2,21,554.20 ಹೆ.ಪ್ರದೇಶಗಳನ್ನು ಪರಿಭಾವಿತ ಅರಣ್ಯ ಎಂದು ಗುರುತಿಸಿತ್ತು.
ಇದಲ್ಲದೆ ಮಾನದಂಡಗಳಿಗೆ ಅನುಗುಣವಾಗಿರುವ ಆದರೆ ಪುನರ್ರಚಿತ ತಜ್ಞರ ಸಮಿತಿ-1ರಲ್ಲಿ ಸೇರ್ಪಡೆಯಾಗದ 1,08,632.73 ಹೆ. ಪ್ರದೇಶಗಳನ್ನು ಹೆಚ್ಚುವರಿಯಾಗಿ ಗುರುತಿಸಿ ಒಟ್ಟು 3,30,186.93 ಹೆ.ಪ್ರದೇಶ ಪರಿಭಾವಿತ ಅರಣ್ಯ ಪ್ರದೇಶಗಳೆಂದು ಅಧಿಸೂಚಿಸಿತ್ತು. ಸಮಿತಿ ಗುರುತಿಸಿರುವ ಪರಿಭಾವಿತ ಅರಣ್ಯ ಪ್ರದೇಶವನ್ನು ಅಳತೆ ಮಾಡಿ ಅರಣ್ಯ ಇಲಾಖೆಗೆ ನೀಡುವಂತೆ ಕಂದಾಯ ಇಲಾಖೆಯನ್ನು ಕೋರಲಾಗಿತ್ತು. ಇದರ ನಡುವೆ ಈಗ ಅ. 28ರಂದು ಹೊರಡಿಸಿರುವ ಆದೇಶ ಗೊಂದಲ ನಿರ್ಮಿಸಿದೆ.
ಉಡುಪಿ 34,918.29 ಹೆ. ದ.ಕ. 32,867 ಹೆ. ಹೊರಕ್ಕೆ
ದ.ಕ. ಜಿಲ್ಲೆಯಲ್ಲಿ ಪುನರ್ರಚಿತ ತಜ್ಞರ ಸಮಿತಿ ಗುರುತಿಸಿದ್ದ 43,848.41 ಹೆ. ಪರಿಭಾವಿತ ಅರಣ್ಯ ಪ್ರದೇಶದಲ್ಲಿ 32,867 ಹೆಕ್ಟೇರ್ ಪರಿಭಾವಿತ ಅರಣ್ಯ ಪಟ್ಟಿಯಿಂದ ಕೈಬಿಡಲು ಯೋಗ್ಯವಿರುವ ಪ್ರದೇಶಗಳಾಗಿವೆ. ಒಟ್ಟು 11,986.32 ಹೆ.ಪ್ರದೇಶವನ್ನು ಪರಿಭಾವಿತ ಅರಣ್ಯವಾಗಿ ಉಳಿಸಿಕೊಳ್ಳಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 68,794.76 ಹೆ.ಡೀಮ್ಡ್ ಪ್ರದೇಶದಲ್ಲಿ 34,918.29 ಹೆ.ಪ್ರದೇಶವನ್ನು ಹೊರಗಿಡಲು ಯೋಗ್ಯವಾಗಿದ್ದು 33,877.92 ಹೆ.ಪ್ರದೇಶ ಡೀಮ್ಡ್ ಫಾರಸ್ಟ್‌ಗೆ ಲಭ್ಯವಾಗುವ ಪ್ರದೇಶಗಳಾಗಿವೆ ಎಂದು ಅಧಿಸೂಚಿಸಿ ಆದೇಶಿಸಲಾಗಿದೆ. ಪರಿಭಾವಿತ ಅರಣ್ಯ ಪ್ರದೇಶದಿಂದ ಕೈಬಿಟ್ಟ ಹಾಗೂ ಉಳಿಸಿದ ಪ್ರದೇಶ ಗಳ ಪಟ್ಟಿ ರಾಜ್ಯ ಸರಕಾರದಿಂದ ಬಂದಿದೆ. ಮುಂದಿನ ಪ್ರಕ್ರಿಯೆ ಕುರಿತಂತೆ ಆದೇಶ ಬಂದ ಮೇಲೆ ಕ್ರಮ ಕೈಗೊಳ್ಳಲಾ ಗುತ್ತದೆ.
– ದಿನೇಶ್ ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು ವಿಭಾಗ -ಕೇಶವ ಕುಂದರ್