Advertisement
ಕಾರ್ಕಳದ ಖಾಸಗಿ ಕಾಲೇಜಿನ ಮೊದಲ ವರ್ಷದ ಎಂಬಿಎ ವಿದ್ಯಾರ್ಥಿನಿಯಾಗಿರುವ ಈಕೆಯ ಮೇಲೆ ಸ್ನೇಹಿತ, ಶಕ್ತಿನಗರ ನಿವಾಸಿ ಸುಶಾಂತ್ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದ. ಸುಮಾರು 25 ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದು ಈಗ ಚೇತರಿಸಿಕೊಂಡಿದ್ದಾಳೆ.
ದೀಕ್ಷಾಳಿಗೆ ಆಸ್ಪತ್ರೆಯ ವಿವಿಧ ವಿಭಾಗಗಳ ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡಿತ್ತು. ಈಕೆಯ ಎಲ್ಲ ವೈದ್ಯಕೀಯ ವೆಚ್ಚವನ್ನು ಭರಿಸುವ ಮೂಲಕ ಕೆ.ಎಸ್.ಹೆಗ್ಡೆ ಆಸ್ಪತ್ರೆ ಮಾನವೀಯತೆ ಮೆರೆದಿದೆ.
Related Articles
ಚೂರಿ ಇರಿತದ ಘಟನೆ ಆಸ್ಪತ್ರೆಯ ಹಿಂಬದಿಯ ರಸ್ತೆಯಲ್ಲಿ ನಡೆದಿದ್ದು ಈ ಸಂದರ್ಭ ಕರ್ತವ್ಯದಲ್ಲಿದ್ದ ದಾದಿ, ಕೇರಳದ ಮೂಲದ ನಿಮ್ಮಿ ಅವರು ಆ್ಯಂಬುಲೆನ್ಸ್ ಚಾಲಕ ಪ್ರವೀಣ್ ಅವರ ಸಹಕಾರದೊಂದಿಗೆ ಘಟನಾ ಸ್ಥಳಕ್ಕೆ ತಲುಪಿದ್ದು, ದಿಟ್ಟತನದಿಂದ ದೀಕ್ಷಾಳನ್ನು ರಕ್ಷಿಸಿದ್ದರು. ಈ ಹಿನ್ನೆಲೆಯಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯದಿಂದ ನಗದು ಬಹುಮಾನ ನೀಡಿ ಗೌರವಿಸಲಾಗಿತ್ತು. ಈಗ ಅವರು ದಾದಿಯರಿಗೆ ನೀಡಲ್ಪಡುವ ನ್ಯಾಷನಲ್ ಫ್ಲೋರೆನ್ಸ್ ನೈಟಿಂಗೇಲ್ ನರ್ಸಸ್ ಅವಾರ್ಡ್ 2019ಕ್ಕೆ ಆಯ್ಕೆಯಾಗಿದ್ದಾರೆ.
Advertisement