Advertisement

ಸರ್ವೇ ಕಾರ್ಯಕ್ಕೆ ವನ್ಯಜೀವಿ ವಿಭಾಗದ ಸಮ್ಮತಿ: ದಿಡುಪೆ-ಸಂಸೆ ರಸ್ತೆ ನನಸಾಗುವತ್ತ

12:34 AM Sep 16, 2021 | Team Udayavani |

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನವನದ ಮೂಲಕ ಹಾದು ಹೋಗುವ ದಿಡುಪೆ-ಎಳನೀರು-ಸಂಸೆ ನಡುವೆ ರಸ್ತೆ ನಿರ್ಮಿಸುವ ಬಗ್ಗೆ ಸರ್ವೇ ಕಾರ್ಯ ಕೈಗೊಳ್ಳಲು ಕೊನೆಗೂ ಅರಣ್ಯ ಇಲಾಖೆ ವನ್ಯಜೀವಿ ವಿಭಾಗ ಅನುಮತಿಸಿದ್ದು, ತಾಲೂಕಿನ ದಿಡುಪೆ ಭಾಗದ ಜನರ ಬಹುಕಾಲದ ಬೇಡಿಕೆಯೊಂದು ಈಡೇರುವ ಕಾಲ ಸನ್ನಿಹಿತವಾಗಿದೆ.

Advertisement

ಅನೇಕ ವರ್ಷಗಳ ಹೋರಾಟದ ಫಲವಾಗಿ ವನ್ಯಜೀವಿ ವಿಭಾಗವು ರಸ್ತೆಗೆ ಸರ್ವೇ ನಡೆಸುವಂತೆ ಲೋಕೋಪಯೋಗಿ ಇಲಾಖೆಯ ಬೆಳ್ತಂಗಡಿ ಸಹಾಯಕ ಕಾರ್ಯಪಾಲಕ ಅಭಿಯಂತ ಶಿವಪ್ರಸಾದ್‌ ಅವರಿಗೆ ಪತ್ರ ಬರೆದು ಸೂಚನೆ ನೀಡಿದೆ. ಮಳೆ ಪರಿಸ್ಥಿತಿ ಅವಲೋಕಿಸಿ ಸರ್ವೇ ಕಾರ್ಯದ ರೂಪುರೇಖೆ ಸಿದ್ಧವಾಗಲಿದೆ.

ಘಾಟಿ ಕ್ರಮಿಸುವ ವ್ಯಾಪ್ತಿ ಅತೀ ಕಡಿಮೆ:

ಗುಡ್ಡ ಕುಸಿತದಿಂದ ನಲುಗಿರುವ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಕಾಲಕ್ರಮೇಣ ಸಂಚಾರ ಬಾಧಿತವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ದಿಡುಪೆ-ಸಂಸೆ ರಸ್ತೆಯು ಪರ್ಯಾಯವಾಗುವ ಜತೆಗೆ ಕೇವಲ 7 ಕಿ.ಮೀ.ಗಳಷ್ಟೇ ಘಾಟಿ ಪ್ರದೇಶದಲ್ಲಿ ಕ್ರಮಿಸುವ ಅಂತರವಾಗಲಿದೆ. ಉಳಿ

ದಂತೆ ಮಾಳ ಮತ್ತು ಚಾರ್ಮಾಡಿ ಘಾಟಿಗಳಲ್ಲಿ 20 ಕಿ.ಮೀ. ದೂರ ಕ್ರಮಿಸಬೇಕಿದೆ. ನೂತನ ರಸ್ತೆ ನಿರ್ಮಾಣಕ್ಕೆ ದೊಡ್ಡ ಸೇತುವೆಗಳ ಆವಶ್ಯಕತೆಯಿಲ್ಲ. ಮೋರಿಗಳ ಆಗತ್ಯವಷ್ಟೇ ಇದೆ. ಭಾರೀ ಮರಗಳ ತೆರವಿಗೆ ಆಸ್ಪದವಿಲ್ಲ. 4 ಕಿ.ಮೀ. ರಸ್ತೆಯಷ್ಟೇ ವನ್ಯಜೀವಿ ವಲಯಕ್ಕೆ ಸೇರಲಿದ್ದು, ಉಳಿದಂತೆ ಎಳನೀರು ಗಡಿಯಿಂದ ಹಲಸಿನಕಟ್ಟೆವರೆಗಿನ 3.30 ಕಿ.ಮೀ. ಕಂದಾಯ ಭೂಮಿಗೆ ಸೇರಿದ್ದಾಗಿದೆ.

Advertisement

ಪ್ರಮುಖ ಪ್ರಯೋಜನೆ:

ರಾ.ಹೆ. 73ರ ಚಾರ್ಮಾಡಿ ರಸ್ತೆಗೆ ಪರ್ಯಾಯ ರಸ್ತೆಯಾಗುವ ಜತೆಗೆ 4 ಪ್ರಮುಖ ಯಾತ್ರಾಸ್ಥಳಗಳಾದ ಧರ್ಮಸ್ಥಳ, ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡುಗಳನ್ನು ಬಹುಬೇಗನೆ ಸಂದರ್ಶಿಸಲು ಅನಕೂಲವಾಗಲಿದೆ. ಇಲ್ಲವಾದಲ್ಲಿ 150 ಕಿ.ಮೀ. ಸುತ್ತುಬಳಸಿ ಚಾರ್ಮಾಡಿ ಅಥವಾ ಬಜಗೋಳಿಯಾಗಿ ಬಂದು ಹೊರನಾಡಿನಿಂದ ಶೃಂಗೇರಿಗೆ ತೆರಳಬೇಕಾಗಿದೆ. ನೂತನ ರಸ್ತೆಯಾದಲ್ಲಿ 100 ಕಿ.ಮೀ. ಉಳಿತಾಯವಾಗಲಿದೆ.

ಮತ್ತೂಂದೆಡೆ ಎಳನೀರು ಪ್ರದೇಶದಲ್ಲಿ 500ಕ್ಕೂ ಅಧಿಕ ಜನಸಂಖ್ಯೆಯಿದ್ದು, ಆರೋಗ್ಯ, ಶಿಕ್ಷಣ ಇತ್ಯಾದಿಗಳಿಗಾಗಿ ತಾಲೂಕು ಕೇಂದ್ರಕ್ಕೆ ತಲುಪಲು ಅವರ ಜೀವಮಾನದ ಸಂಪರ್ಕ ರಸ್ತೆ ಇದು ಎನಿಸಿಕೊಳ್ಳಲಿದೆ. ಇಲ್ಲವಾದಲ್ಲಿ ಅವರು ಬೆಳ್ತಂಗಡಿಗೆ ತಲುಪಲು ಬಸ್‌ನಲ್ಲಾದರೆ 100 ಕಿ.ಮೀ. ಸುತ್ತಬೇಕು. ಕಾಲ್ನಡಿಗೆಯಲ್ಲಾದರೆ 12 ಕಿ.ಮೀ. ಕ್ರಮಿಸುವ ಅನಿವಾರ್ಯ ಎಳನೀರು ನಿವಾಸಿಗಳದ್ದು.

Advertisement

Udayavani is now on Telegram. Click here to join our channel and stay updated with the latest news.

Next