Advertisement

INS ವಿಂಧ್ಯಗಿರಿ ಲೋಕಾರ್ಪಣೆ

09:41 PM Aug 17, 2023 | Team Udayavani |

ಭಾರತೀಯ ನೌಕಾಪಡೆಗೆ ಭೀಮ ಬಲ ನೀಡಲಿರುವ ಪ್ರಾಜೆಕ್ಟ್ 17 ಆಲ್ಫಾ ಸರಣಿಯ 6ನೇ ಯುದ್ಧನೌಕೆ “ಐಎನ್‌ಎಸ್‌ ವಿಂಧ್ಯಗಿರಿ”ಯನ್ನು ಗುರುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲೋಕಾರ್ಪಣೆಗೊಳಿಸಿದರು. ಕೋಲ್ಕತ್ತಾದ ಗಾರ್ಡನ್‌ ರೀಚ್‌ ಶಿಪ್‌ ಬಿಲ್ಡರ್ಸ್‌ ಮತ್ತು ಇಂಜಿನಿಯರ್ಸ್‌ ಲಿ.ನಲ್ಲಿ ಈ ನೌಕೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಅಲ್ಲಿಯೇ ಅನಾವರಣ ಸಮಾರಂಭವನ್ನೂ ನೆರವೇರಿಸಲಾಗಿದೆ.

Advertisement

ಕರ್ನಾಟಕದ ಪರ್ವತಶ್ರೇಣಿ ಹೆಸರು
ಪ್ರಾಜೆಕ್ಟ್17 ಆಲ್ಫಾದ ಈ ಹಿಂದಿನ ಐದು ಯುದ್ಧನೌಕೆಗಳಿಗೂ ವಿವಿಧ ಪರ್ವತ ಶ್ರೇಣಿಗಳ ಹೆಸರನ್ನೇ ಇಡಲಾಗಿದ್ದು, ನೀಲಗಿರಿ, ಉದಯಗಿರಿ, ಹಿಮಗಿರಿ, ತಾರಗಿರಿ ಮತ್ತು ದುನಗಿರಿ ಎಂದು ಅವುಗಳನ್ನು ಹೆಸರಿಸಲಾಗಿದೆ. ಈ ಹಿಂದೆ ನೌಕಾಪಡೆಯಲ್ಲಿದ್ದ, 3 ದಶಕಗಳ ಸೇವೆ ಸಲ್ಲಿಸಿದ್ದ ವಿಂಧ್ಯಗಿರಿ ನೌಕೆಗೆ ಗೌರವಾರ್ಥವಾಗಿ ನೂತನ ನೌಕೆಗೆ ಕರ್ನಾಟಕದ ವಿಂಧ್ಯಗಿರಿ ಪರ್ವತದ ಹೆಸರನ್ನು ಇಡಲಾಗಿದೆ.

ಆತ್ಮನಿರ್ಭರ ಸಾಧನೆ
ಅತ್ಯಾಧುನಿಕ ತಂತ್ರಜ್ಞಾನ ವಿನ್ಯಾಸವನ್ನು ಒಳಗೊಂಡಿರುವ ಈ ವಿಂಧ್ಯಗಿರಿಯನ್ನು ದೇಶೀಯವಾಗಿ ನಿರ್ಮಿಸಲಾಗಿದ್ದು, ಅದರಲ್ಲಿ ಬಳಕೆಯಾಗಿರುವ ಶೇ.75ರಷ್ಟು ಬಿಡಿಭಾಗಗಳು ಭಾರತದಲ್ಲೇ ತಯಾರಾದದ್ದು. ಈ ಮೂಲಕ ರಕ್ಷಣಾ ಕ್ಷೇತ್ರವನ್ನು ಆತ್ಮನಿರ್ಭರಗೊಳಿಸುವ ಕೇಂದ್ರ ಸರ್ಕಾರದ ಉದ್ದೇಶಕ್ಕೆ ವೇಗ ಸಿಕ್ಕಿದೆ.

ವೈಶಿಷ್ಟ್ಯ ?
– ಮಾರ್ಗದರ್ಶಿ ಕ್ಷಿಪಣಿ ವ್ಯವಸ್ಥೆ, ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಅಳವಡಿಕೆ
– ಗಾಳಿ, ಭೂಮಿ, ಸಮುದ್ರ ಮೂರು ಆಯಾಮಗಳಲ್ಲೂ ಕಾರ್ಯಾಚರಿಸಬಲ್ಲ ಕ್ಷಿಪಣಿಗಳು
– ನೌಕೆಯ ಉದ್ದ – 149 ಮೀಟರ್‌
– ವಿಂಧ್ಯಗಿರಿಯ ತೂಕ – 6,670 ಟನ್‌
– ವೇಗ – 28 ನಾಟ್‌

Advertisement

Udayavani is now on Telegram. Click here to join our channel and stay updated with the latest news.

Next