Advertisement

ಜನ್ಮದಿನ ಸಾಮಾಜಿಕ ಕಾರ್ಯಕ್ಕೆ ಮೀಸಲಿಡಿ

12:07 PM Dec 12, 2021 | Team Udayavani |

ಆಳಂದ: ತಾಲೂಕಿನ ದಣ್ಣೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಭೀಮಾಶಂಕರ ಎಸ್‌. ಪಾಟೀಲ ಅವರ 57ನೇ ಜನ್ಮದಿನದ ನಿಮಿತ್ತ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.

Advertisement

ಗ್ರಾಮದ ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಮಾಜಿ ಶಾಸಕ ಬಿ.ಆರ್‌. ಪಾಟೀಲ ಉದ್ಘಾಟಿಸಿ ಮಾತನಾಡಿ, ಜನ್ಮದಿನಗಳಿಗೆ ದುಂದು ವೆಚ್ಚ ಮಾಡದೆ ಜನೋಪಕಾರಿ ಕಾರ್ಯ ಮಾಡುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಭೀಮಾಶಂಕರ ಪಾಟೀಲ ಕೈಗೊಂಡ ರಕ್ತದಾನ ಶಿಬಿರ, ಬಡವರ ಆರೋಗ್ಯ ತಪಾಸಣೆ ಕಾರ್ಯ ಇನ್ನೊಬ್ಬರಿಗೆ ಮಾದರಿ ಯಾಗಲಿದೆ ಎಂದು ಹೇಳಿದರು.

ಕಡಗಂಚಿ ಮಠದ ವೀರಭದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಸಂತೋಷ ಪಾಟೀಲ, ಮಲ್ಲಿನಾಥ ಪಾಟೀಲ ಮದಗುಣಕಿ, ಕೃಷಿಕ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ, ರಾಜಶೇಖರ ಪಾಟೀಲ ಚಿತಲಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಶಾಂತಾಬಾಯಿ ಬಿ. ಶಿಂಗೆ, ವಿಎಸ್‌ಎಸ್‌ಎನ್‌ ಕಾರ್ಯದರ್ಶಿ ವಿಠ‍್ಠಲ ರೆಡ್ಡಿ, ವಿಠ‍್ಠಲ ಬೋಡ್ಲೆ, ಗ್ರಾಪಂ ಸದಸ್ಯ ವಿಜಯಕುಮಾರ ದೊಡ್ಡಮನಿ, ಮಹೇಶ ಪಗಡಿ, ಮಂಜು ಪಾಟೀಲ, ಹಣಮಂತರಾವ್‌ ಖ್ಯಾಮದೆ ಭಾಗ ವಹಿಸಿದ್ದರು.

ಕೃಷಿಕ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ ಸೇರಿ 24 ಮಂದಿ ರಕ್ತದಾನ ಕೈಗೊಂಡರು. ಗ್ರಾಮದಲ್ಲಿನ ನೂರಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ನಡೆಸಲಾಯಿತು. ಕಲಬುರಗಿ ಜಿಮ್ಸ್‌ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಮಮತಾ ಪಾಟೀಲ ನೇತೃತ್ವದಲ್ಲಿ ರಕ್ತದಾನ ಶಿಬಿರ ಪ್ರಕ್ರಿಯೆ ನಡೆಯಿತು. ಆರೋಗ್ಯ ಇಲಾಖೆ ನರೋಣಾ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next