Advertisement

ಮನೆ ಭಾರ ಇಳಿಸಿ. ಹೊತ್ತೂ ಹೊತ್ತೂ ಸುಸ್ತಾಗದಂತೆ ಮನೇನ ನೋಡ್ಕೊಳ್ಳಿ

03:45 AM Jan 09, 2017 | Harsha Rao |

ಮನೆ ಕಟ್ಟುವಾಗ ಎಲ್ಲ ಮಾಹಿತಿಯೂ ನಮಗೆ  ನಿಖರವಾಗಿ ದೊರಕುವುದಿಲ್ಲ.  ಬಹುತೇಕ ಅಂಶಗಳನ್ನು ನಾವು ಊಹಿಸಿ ಲೆಕ್ಕಾಚಾರ ಮಾಡಬೇಕಾಗುತ್ತದೆ. ಮನೆಯ ಶುರುವಾತಿನಲ್ಲಿ, ಅಂದರೆ ಪಾಯ ಹಾಕುವಾಗಲೇ ಇದರ ಅನುಭವ ನಮಗೆ ಆಗುತ್ತದೆ. ಮಣ್ಣು ವಿವಿಧ ಸಂದರ್ಭದಲ್ಲಿ ಇದೇ ರೀತಿಯಲ್ಲಿ ವರ್ತಿಸುತ್ತದೆ ಎಂದು ಹೇಳಲು ಬರುವುದಿಲ್ಲ. ಒಣಗಿದ್ದಾಗ ಗಟ್ಟಿಮುಟ್ಟಾಗಿದ್ದು, ತೇವವಾದರೆ ಬಹುತೇಕ ಮಣ್ಣು ತನ್ನ ಬಾರಹೊರುವ ಗುಣವನ್ನು ಸ್ವಲ್ಪವಾದರೂ ಕಳೆದುಕೊಳ್ಳುತ್ತದೆ.

Advertisement

ಜೇಡಿಮಣ್ಣು ಅತಿಯಾಗಿ ತನ್ನ ಸಾಮರ್ಥ್ಯವನ್ನು ಕಳೆದುಕೊಂಡರೆ. ನುರುಜು ಕಲ್ಲಿನಿಂದ ಕೂಡಿದ ಗಟ್ಟಿ ಕೆಂಮಣ್ಣು ಹೆಚ್ಚೇನೂ ಮೆದುವಾಗುವುದಿಲ್ಲ. ಸಾಮಾನ್ಯವಾಗಿ ಮಣ್ಣನ್ನು ಪರಿಶೀಲಿಸುವಾಗ, ವಿವಿಧ ಟೆಸ್ಟ್‌ಗಳನ್ನು ಮಾಡಿ. ಆದಷ್ಟೂ ನಿಖರವಾಗಿ ಮಣ್ಣಿನ ಬಾರ ಹೊರುವ ಸಾಮರ್ಥ್ಯ- ಸೇಪ್‌ ಬೇರಿಂಗ್‌ ಕೆಪಾಸಿಟಿ (ಎಸ್‌ ಬಿ ಸಿ) ಎಷ್ಟು ಎಂದು ಗುರಿತಿಸಲಾಗುವುದಾದರೂ ಅದೂ ಕೂಡ ಒಂದು ಅಂದಾಜು ಮಾತ್ರ ಆಗಿರುತ್ತದೆ. ಏಕೆಂದರೆ, ನಿವೇಶನದಲ್ಲಿ ಅಡಿಗೊಂದು ಮಾದರಿಯ ಮಣ್ಣು ಸಿಗಬಹುದು. ಹಾಗಾಗಿ ಒಟ್ಟಾರೆಯಾಗಿ ಸೇಪ್‌- ತೊಂದರೆ ಆಗದ ರೀತಿಯಲ್ಲಿ ಒಂದು ಅಂಕಿಯನ್ನು ನಿರ್ಧರಿಸಿ ಅದರ ಆಧಾರದ ಮೇಲೆ ಮಣ್ಣಿನ ಬಾರಹೊರುವ ಶಕ್ತಿಯನ್ನು ನಿರ್ಧರಿಸಲಾಗುತ್ತದೆ.

ಮಾಮೂಲಿ ಮಣ್ಣು ಮತ್ತದರ ಅಂದಾಜು
 ಭೂಮಿಯ ಮೇಲ್‌ಮೈಯಲ್ಲಿ ಮಳೆ ಬಂದು ತೇವ ಆಗಿ ಕೆಸರಿನಂತಾಗಿದ್ದಾಗ ನಾವು ನಡೆದಾಡಿದರೆ ನಮ್ಮ ಪಾದರಕ್ಷೆಯ ಗುರುತು ಅದರ ಮೇಲೆ ಬೀಳುತ್ತದೆ. ಅದೇ ಸ್ಥಳದಲ್ಲಿ ನೀವು ನಾಲ್ಕೈದು ಅಡಿ ಪಾಯ ಅಗೆದು ಕೆಳಗೆ ಇಳಿದು ನಡೆದಾಡಿದರೂ ಸಾಮಾನ್ಯವಾಗಿ ನಮ್ಮ ಪಾದರಕ್ಷೆಯ ಗುರುತು ಮೂಡುವುದಿಲ್ಲ. ಭೂಮಿಯ ಮೇಲಿನ ಪದರಕ್ಕಿಂತ ಕೆಳಗಿನ ಪದರ ಗಟ್ಟಿಯಿರುವುದೇ ಇದಕ್ಕೆ ಮುಖ್ಯ ಕಾರಣ ಹಾಗೂ ಇದರಿಂದಾಗೇ ನಾವು ನಮ್ಮ ಮನೆ ಹಾಗೂ ಇತರೆ ಕಟ್ಟಡಗಳಿಗೆ ಪಾಯವನ್ನು ಹಾಕುವುದು. ನಾವು ನಡೆದಾಡುವಾಗ ಸುಮಾರು ಮುವತ್ತು ಚದುರ ಸೆಂಟಿಮೀಟರ್‌ ನಷ್ಟು ಅಗಲದ ಪ್ರದೇಶದಲ್ಲಿ ಬಾರ ಹಾಕುವುದರಿಂದ, ದೇಹದ ಬಾರ ಸರಾಸರಿ ಲೆಕ್ಕದಲ್ಲಿ ಸುಮಾರು ಅರವತ್ತು ಕೆಜಿ ಎಂದು ಇಟ್ಟುಕೊಂಡರೆ, ಆಗ ನಾವು ಹಾಕುವ ಬಾರ ಚದುರ ಅಡಿಗೆ ಎರಡು ಟನ್‌ ನಷ್ಟಾಗುತ್ತದೆ.

 ಹೀಗೆ ಅಂದಾಜಾಗಿ ಲೆಕ್ಕಾ ಹಾಕಿದ ಮಣ್ಣಿನ ಬಾರ ಹೊರುವ ಸಾಮರ್ಥ್ಯದ ಹೆಚ್ಚು ನಿಖರವಾದ ಅಳತೆಗೆ ವೈಜಾnನಿಕ ವಿಧಾನಗಳನ್ನು ಬಳಸಿ ಅಳೆಯಲಾಗುವುದು. ಸಣ್ಣ ಪುಟ್ಟ ಮನೆಗಳನ್ನು ಕಟ್ಟುವಾಗ, ಅದರಲ್ಲೂ ನೆಲಮಹಡಿ ಕಟ್ಟುವಾಗ, ಮಣ್ಣಿನ ಪ್ರಾಥಮಿಕ ಪರೀಕ್ಷೆ ಮಾಡಿ ಅದರ ಬಾರಹೊರುವ ಶಕ್ತಿಯನ್ನು ಅಂದಾಜಾಗಿ ಅಳೆದು ಪಾಯವನ್ನು ವಿನ್ಯಾಸ ಮಾಡಬಹುದು. ದೊಡ್ಡ ದೊಡ್ಡ ಮನೆಗಳಿಗೆ, ಅಪಾರ್ಟ್‌ಮೆಂಟ್‌ ಇತ್ಯಾದಿಗಳಿಗೆ, ಸ್ವಲ್ಪ ದುಬಾರಿ ಎಂದೆನಿಸಿದರೂ, ಆರ್ಕಿಟೆಕ್ಟ್ ಎಂಜಿನಿಯರ್‌ಗಳಿಂದ ಮಣ್ಣಿನ ಪರೀಕ್ಷೆ ಮಾಡಿಸಿ ಮುಂದುವರೆಯುವುದು ಉತ್ತಮ.

 ಲೋಡ್‌ ಅಂದಾಜು
 ಮನೆಯ ಒಟ್ಟಾರೆ ಭಾರ ಪಾಯದ ಮೇಲೆ ಬರುವ ಕಾರಣ, ಎಲ್ಲೆಲ್ಲಿ ಎಷ್ಟೆಷ್ಟು ಭಾರ ಬರುತ್ತಿದೆ ಎಂಬುದನ್ನು ಅಂದಾಜಿಸಿ, ಅದಕ್ಕೆ ಅನುಗುಣವಾಗಿ ಪಾಯಹಾಕುವುದು ಉತ್ತಮ. ಮುಖ್ಯವಾಗಿ ನಿಮ್ಮ ಮನೆಗೆ ಕಾಲಂ ಭೀಮ್‌ ಹಾಕುವ ಹಾಗಿದ್ದರೆ, ಆಯಾ ಕಂಬಕ್ಕೆ ಎಷ್ಟೆಷ್ಟು ಹೊರೆ ಬೀಳುತ್ತದೆ ಎಂದು ಅಂದಾಜಿಸಿ ಪಾಯದ ವಿಸ್ತೀರ್ಣವನ್ನು ನಿರ್ಧರಿಸಬೇಕಾಗುತ್ತದೆ. 

Advertisement

ಮೂಲೆ ಕಾಲಂ ಲೆಕ್ಕಾಚಾರ
ಸಾಮಾನ್ಯವಾಗಿ ಇಡಿ ಮನೆಯಲ್ಲಿ ಅತಿ ಕಡಿಮೆ ಬಾರ ಹೊರುವ ಕಂಬ ಎಂದರೆ ಅದು ಮೂಲೆಯವೇ ಆಗಿರುತ್ತವೆ. ಏಕೆಂದರೆ ಈ ಕಾಲಂನ ಹಿಂದೆ ಮತ್ತು ಅಕ್ಕದಲ್ಲಿಂದ ಭಾರಬರುವುದಿಲ್ಲ. ಮುಂದೆ ಮಾತ್ರ ಬರುತ್ತದೆ. ಹಾಗಾಗಿ ಮಧ್ಯ ಬರುವ ಕಾಲಂಗೆ ಹೋಲಿಸಿದರೆ, ಕಾಲುಭಾಗದಷ್ಟು ಭಾರ ಮಾತ್ರ ಹೊರಬೇಕಾಗುತ್ತದೆ. ಆದರೆ ಕೆಲವೊಮ್ಮೆ ಮಧ್ಯ ಬರುವ ಕಾಲಂಗಳು ಗೋಡೆಯ ಭಾರ ಹೊರುವುದಿಲ್ಲ. ದೊಡ್ಡದೊಂದ ಹಾಲ್‌ ಇದ್ದರೆ, ಅದರ ಮಧ್ಯದ ಕಾಲಂ ಬಳಿ ಗೋಡೆಗಳು ಇರುವುದಿಲ್ಲ. ಆದರೆ ಮಧ್ಯದ ಕಾಲಂ ನಾಲ್ಕೂ ಕಡೆಯಿಂದ ಬರುವ ಫ್ಲೋರ್‌ ಭಾರವನ್ನು ಹೊರಬೇಕಾಗುತ್ತದೆ. ಹಾಗೆಯೇ ನಾವು ಹಾಲಿನಲ್ಲಿ ಮುಂದೆ ವಿಭಜನೆಗಳನ್ನು ಮಾಡಲಾಗದು ಎಂದು ಹೇಳಲಾಗುವುದಿಲ್ಲ. ಈ ಕಾರಣದಿಂದಾಗಿ, ಈಗ ಸಧ್ಯಕ್ಕೆ ಗೋಡೆಯ ಬಾರ ಫ್ಲೋರ್‌ ಮೇಲೆ ಬರದಿದ್ದರೂ, ಮುಂದೆ ಬರಬಹುದು ಎಂದು ಅಂದಾಜಿಸಿ, ಇದರ ಮೇಲೆ ಬರಬಹುದಾದ ಗೋಡೆಯ ಭಾರವನ್ನೂ ಊಹಿಸಿ ಕಾಲಂ ಪಾಯ ವಿನ್ಯಾಸ ಮಾಡುವುದು ಉತ್ತಮ.  ನಿಮ್ಮ ಮನೆಯ ಕಾಲಂ ಪೊಸಿಷನ್‌ ಸುಮಾರು ಹತ್ತರಿಂದ ಹದಿನಾಲ್ಕು ಅಡಿ ದೂರದಲ್ಲಿದ್ದರೆ, ಮೂಲೆ ಕಾಲಂಗಳ ಮೇಲೆ ಪ್ರತಿ ಫ್ಲೋರಿಗೂ ಇಟ್ಟಿಗೆ ಗೋಡೆಯಾದರೆ ಸುಮಾರು ಹತ್ತು ಟನ್‌ ನಷ್ಟು ಭಾರ ಬೀಳುತ್ತದೆ!

ಮಧ್ಯದ ಕಾಲಂ
 ಇಡೀ ಮನೆಯಲ್ಲಿ ಸಾಮಾನ್ಯವಾಗಿ ಅತಿ ಹೆಚ್ಚು ಭಾರಹೊರುವ ಕಾಲಂಗಳು ಮನೆಯ ಮಧ್ಯದವೇ ಆಗಿದ್ದು, ಇವು ಸುಮಾರು ಇಪ್ಪತ್ತು ಟನ್‌ ನಷ್ಟು ಪ್ರತಿ ಫ್ಲೋರ್‌ನಿಂದ ಹೊರಬೇಕಾಗುತ್ತದೆ. ನಿಮ್ಮ ಮನೆಯಲ್ಲಿ ಮೂರು ಮಹಡಿ ಇದ್ದರೆ, ಮಧ್ಯದ ಕಾಲಂ ಮೇಲೆ ಸುಮಾರು ಅರವತ್ತು ಟನ್‌ನಷ್ಟು ಭಾರ ಬೀಳುತ್ತದೆ!

ಬದಿಯ ಕಾಲಂ
ಮೂಲೆ ಕಾಲಂಗಿಂತ ಹೆಚ್ಚು ಹಾಗೂ ಮಧ್ಯದ ಕಾಲಂಗಿಂತ ಕಡಿಮೆ ಭಾರವನ್ನು ಎರಡೂ ಮೂಲೆಗಳ ಮಧ್ಯದಲ್ಲಿ ಬರುವ ಕಂಬಗಳು ಹೊರುತ್ತವೆ. ಇವು ಸಾಮಾಮ್ಯವಾಗಿ ಎರಡೂ ಬದಿಯಿಂದ ಬರುವ ಭೀಮುಗಳ ಜೊತೆಗೆ ಮುಂದಿನಿಂದ ಬರುವುದರ ಭಾರವನ್ನೂ ಹೊರಬೇಕಾಗುತ್ತದೆ. ಈ ಇಂಟರ್‌ಮೀಡಿಯೇಟ್‌ ಕಾಲಂಗಳು ಸುಮಾರು ಹದಿನೈದು ಟನ್‌ ಬಾರ ಹೊರುತ್ತಿದ್ದು, ಮೂರು ಮಹಡಿಗೆ ನಲವತ್ತೆ„ದು ಟನ್‌ ಹೊರಬೇಕಾಗುತ್ತದೆ. 

ಕಾಲಂಗಳ ಮೇಲೆ ಬರುವ ಭಾರ ಅದರ ಸ್ಪೇಸಿಂಗ್‌ ಅಂದರೆ ಯಾವ ಅಂತರದಲ್ಲಿ ಕಂಬಗಳನ್ನು ಇರಿಸಲಾಗಿದೆ ಎಂಬುದನ್ನು ಆಧರಿಸಿರುತ್ತದೆ. ಕೆಲವೊಮ್ಮೆ ಸಣ್ಣ ನಿವೇಶನದಲ್ಲೂ ದೂರದೂರದಲ್ಲಿ ಇದ್ದರೆ, ಅಂದರೆ ಹತ್ತು- ಹದಿನಾಲ್ಕು ಅಡಿಗಳಿಗಿಂತ ಹೆಚ್ಚಿಗಿದ್ದರೆ ಕಾಲಂಗಳ ಮೇಲೆ ಬರುವ ಭಾರ ಸಹಜವಾಗೇ ಹೆಚ್ಚುತ್ತದೆ. ಇಲ್ಲಿ ಅಂಕಿಅಂಶಗಳನ್ನು ಕೊಟ್ಟಿರುವ ಮೂಲ ಉದ್ಧೇಶ ಮನೆಯ ಕಾಲಂಗಳ ಮೇಲೆ ಹೇಗೆ ವಿವಿಧೆಡೆ ಬದಲಾಗುತ್ತದೆ ಹಾಗೂ ಅದಕ್ಕೆ ಏನು ಕಾರಣ ಎಂಬುದರ ವಿವರಣೆಗೆ.

ಮಣ್ಣಿನ ಬಾರ ಹೊರುವ ಶಕ್ತಿ
ಮೇಲಿನಿಂದ ಏನೇ ಭಾರ ಬಂದರೂ ಕಡೆಗೆ ಎಲ್ಲವನ್ನೂ ಹೊರುವುದು ¸‌ೂಮಿಯೇ ತಾನೆ, ನಾವು ಪಾಯವನ್ನು ವಿನ್ಯಾಸ ಮಡುವಾಗ ಮೇಲಿನಿಂದ ಬರುವ ಭಾರ ಹಾಗೂ ಅದನ್ನು ಭೂಮಿ ಹೇಗೆ ತಾಳುತ್ತದೆ ಎಂಬುದನ್ನು ಆಧರಿಸಿ ಮಾಡುತ್ತೇವೆ. ನುರುಜು ಕಲ್ಲಿನಿಂದ ಕೂಡಿದ ಕೆಂಪು ಮಣ್ಣಿನ ಎಸ್‌ಬಿಸಿ ಸಾಮಾನ್ಯವಾಗಿ ಎರಡು ಟನ್‌ ಪ್ರತಿ ಚದುರ ಅಡಿಗೆ ಇದ್ದು, ನಿಮ್ಮ ಮನೆಯ ಮಧ್ಯದ ಕಾಲಂ ಅರವತ್ತು ಟನ್‌ ನಷ್ಟು ಭಾರ ಹೊರುತ್ತಿದ್ದರೆ, ಅದಕ್ಕೆ ಕೆಳಗೆ ಆಧಾರವಾಗಿ ಮೂವತ್ತು ಚದುರ ಅಡಿಗಳಷ್ಟು ವಿಸ್ತೀರ್ಣದ ಪಾಯ ಅಂದರೆ ಸುಮಾರು ಆರು ಅಡಿಗೆ ಐದು ಅಡಿಗಳಷ್ಟು ಗಾತ್ರದ ಪಾಯವನ್ನು ಹಾಕಬೇಕಾಗುತ್ತದೆ.

ಅನೇಕ ಅಂಶಗಳು ಅಂದಾಜಿನಿಂದಲೇ ನಡೆಯುತ್ತಿದ್ದರೂ ಅದರಲ್ಲೂ ಲೆಕ್ಕಾಚಾರ ಇದ್ದೇ ಇರುತ್ತದೆ. ಮನೆ ಕಟ್ಟುವಾಗ ಪಾಯ ಅತಿಮುಖ್ಯವಾದ ಕಾರಣ, ಅಂದಾಜುಗಳನ್ನು ಆದಷ್ಟೂ ಪ್ರಾಕ್ಟಿಕಲ್‌ ಆಗಿ ನಿಖರವಾಗಿ ಮಾಡುವುದು ಉತ್ತಮ.

-„ ಆರ್ಕಿಟೆಕ್ಟ್ ಕೆ. ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next