Advertisement

ಶೇಕಡಾವಾರು ಮತದಾನ ಪ್ರಮಾಣ ಇಳಿಕೆ

11:17 AM May 19, 2018 | Team Udayavani |

ಬಜಪೆ: ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಬಜಪೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಎಂಟು ಮತದಾನ ಕಟ್ಟೆಯಲ್ಲಿ ನಿಧನಹೊಂದಿದ ಒಟ್ಟು 165 ಮಂದಿಯ ಹೆಸರನ್ನು ಮತದಾನ ಪಟ್ಟಿಯಿಂದ ತೆಗೆಯದೇ ಇರುವುದರಿಂದ ಶೇಕಡಾವಾರು ಮತದಾನದಲ್ಲಿ ಇಳಿಕೆಯಾಗಿದೆ.

Advertisement

ನಿಧನ ಹೊಂದಿದ ಮತದಾರರ ಹೆಸರನ್ನು ಅವರ ಮನೆಗೆ ಭೇಟಿ ನೀಡಿ ಮಹಜರು ಮಾಡಿಯೇ ತೆಗೆಯಬೇಕಾದ ಕಾರಣ ನಿಧನ ಹೊಂದಿದ ಮತದಾರರ ಹೆಸರನ್ನು ತೆಗೆಯದಿರಲು ಒಂದು ಕಾರಣವಾಗಿದೆ.

ಎರಡು ಕಡೆ ಹೆಸರು
ಅಂತೆಯೇ ಕೆಲವರ ಹೆಸರು ಎರಡು ಕಡೆಗಳಲ್ಲಿ ಮತದಾರ ಪಟ್ಟಿಯಲ್ಲಿದ್ದು ಅವರು ಒಂದು ಕಡೆ ಮತದಾನ ಮಾಡಿದ್ದಾರೆ. ತವರು ಮನೆ ಹಾಗೂ ಗಂಡನ ಮನೆಯಲ್ಲಿ ಎರಡು ಕಡೆಯಲ್ಲಿ ಅವರ ಹೆಸರು ಮತದಾನ ಪಟ್ಟಿಯಲ್ಲಿದೆ ಇದು ಕೂಡ ಶೇಕಡಾವಾರು ಮತದಾನದಲ್ಲಿ ಇಳಿಕೆಯಾಗಲು ಕಾರಣವಾಗಿದೆ.

ಶೇ 66.76 ಮತದಾನ
ಬಜಪೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಒಟ್ಟು 7,792 ಮತದಾರರಿದ್ದಾರೆ. 158, 159, 160, 161, 162, 163, 164 ಮತ್ತು 165 ಒಟ್ಟು ಎಂಟು ಮತದಾನ ಕಟ್ಟೆಗಳು. ಈ ಬಾರಿ ಒಟ್ಟು 5,202 ಮತದಾರರು ಮತ ಚಲಾವಣೆ ಮಾಡಿದ್ದಾರೆ. ಶೇ 66.76 ಮತದಾನವಾಗಿದೆ. ಆದರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 165 ಮಂದಿ ನಿಧನ ಹೊಂದಿದ ಪರಿಣಾಮ ಮತದಾರರ ಹೆಸರು ತೆಗೆದಿದ್ದರೆ ಒಟ್ಟು ಮತದಾರರ ಸಂಖ್ಯೆ 7,627 ಆಗಿ ಶೇ.68.20 ಮತದಾನವಾಗುತ್ತಿತ್ತು.

ಬಜಪೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಮತದಾನವಾದ ಒಟ್ಟು 5,202 ರಲ್ಲಿ ಕಾಂಗ್ರೆಸ್‌ಗೆ 2,828 ಮತ ಅಂದರೆ ಶೇ.54.36 ಮತ ಬಿದ್ದಿದೆ. ಬಿಜೆಪಿಗೆ 2,188 ಮತ ಅಂದರೆ ಶೇ .42.06 ಮತ ಬಿದ್ದಿದೆ.

Advertisement

ಉಳಿದವರಿಗೆ 156 ಮತ. 29 ನೋಟಾ ಮತಗಳು ಬಿದ್ದಿವೆ. ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತಗಟ್ಟೆಯೊಂದರಲ್ಲಿ ಐಎಂಇಪಿಗೆ ಬಿದ್ದ ಮತಗಳ ಸಂಖ್ಯೆಯಲ್ಲಿ ಬಜಪೆ ಗ್ರಾಮ ಪಂಚಾಯತ್‌ ನ ಬಜಪೆ ಅಂಗನವಾಡಿ ಕಟ್ಟಡದ ಮತಗಟ್ಟೆ ಸಂಖ್ಯೆ 163ರಲ್ಲಿ ಅತೀ ಹೆಚ್ಚು ಅಂದರೆ 16 ಮತಗಳು ಬಿದ್ದಿವೆ. 

Advertisement

Udayavani is now on Telegram. Click here to join our channel and stay updated with the latest news.

Next