Advertisement

ಎಸ್‌ಬಿಐ ಠೇವಣಿ ಬಡ್ಡಿ ದರ ಇಳಿಕೆ

09:50 AM Nov 11, 2019 | mahesh |

ಮುಂಬಯಿ: ಠೇವಣಿಗಳ ಮೇಲಿನ ಬಡ್ಡಿ ದರವನ್ನು ಭಾರತೀಯ ಸ್ಟೇಟ್‌ ಬ್ಯಾಂಕ್‌(ಎಸ್‌ಬಿಐ) ಇಳಿಕೆ ಮಾಡಿದೆ. ಎಲ್ಲ ವಿಧಗಳ ಠೇವಣಿ ಮೇಲೆ ಶೇ.0.15 ಮತ್ತು ಶೇ.0.75ರಷ್ಟು ಬಡ್ಡಿ ದರ ಇಳಿಕೆ ಮಾಡಲಾಗಿದೆ. ಸತತ ಏಳನೇ ಬಾರಿಗೆ ಇಂಥ ನಿರ್ಧಾರ ಕೈಗೊಳ್ಳಲಾಗಿದೆ. ನ. 10ರಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ.

Advertisement

ಇದೇ ವೇಳೆ ಕನಿಷ್ಠ ವೆಚ್ಚ ಆಧಾರಿತ ಬಡ್ಡಿ ದರ ವಿಧಿಸುವಿಕೆ (ಎಂಸಿಎಲ್‌ಆರ್‌) ಅನ್ವಯ ಸಾಲಗಳ ಬಡ್ಡಿ ದರವನ್ನು ಶೇ.0.5ರಷ್ಟು ಇಳಿಕೆ ಮಾಡಲಾಗಿದೆ. ಹೀಗಾಗಿ ಇದು ಶೇ.8ಕ್ಕೆ ಇಳಿಕೆಯಾದಂತಾಗಿದೆ. ಅವಧಿ ಠೇವಣಿಗಳ ಮೇಲೆ ವಿಧಿಸಲಾಗುತ್ತಿರುವ ಬಡ್ಡಿ ದರ ವನ್ನು ಕೂಡ ಪರಿಷ್ಕರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next