Advertisement

ರಾಜ್ಯದಲ್ಲಿ 3.50 ಲಕ್ಷ ಮತದಾರರ ಸಂಖ್ಯೆ ಕಡಿತ

08:06 AM Oct 13, 2018 | Team Udayavani |

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅದರಂತೆ ಮತದಾರರ ಸಂಖ್ಯೆ 5.03 ಕೋಟಿ ಆಗಿದ್ದು, ಕಳೆದ ಚುನಾವಣೆಗೆ ಹೋಲಿಸಿದರೆ ಒಟ್ಟು ಮತದಾರರ ಸಂಖ್ಯೆ 3.50 ಲಕ್ಷ ಕಡಿಮೆ (ಡಿಲಿಷನ್‌) ಆಗಿದೆ.
ಆದರೆ, ಉಪ ಚುನಾವಣೆ ನಡೆಯಲಿರುವ ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ 24 ವಿಧಾನಸಭಾ ಕ್ಷೇತ್ರಗಳು ಹಾಗೂ ಉಪ ಚುನಾವಣೆ ನಡೆಯಲಿರುವ 2 ವಿಧಾನಸಭಾ ಕ್ಷೇತ್ರಗಳು ಸೇರಿ ಒಟ್ಟು 26 ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ 198 ಕ್ಷೇತ್ರಗಳ ಕರಡು
ಮತದಾರರ ಪಟ್ಟಿ ಮಾತ್ರ ಈಗ ಪರಿಗಣಿಸಲ್ಪ ಡಲಿದ್ದು, ಅದರಲ್ಲಿ 4.48 ಕೋಟಿ ಮತದಾರರು ಇದ್ದಾರೆ. ಅಂತಿಮ ಪಟ್ಟಿ ಪ್ರಕಟಗೊಳ್ಳುವಾಗ ಸ್ವಲ್ಪ ವ್ಯತ್ಯಾಸವಾಗಲಿದೆ.

Advertisement

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮುಖ್ಯ ಚುನಾವ ಣಾಧಿಕಾರಿ ಸಂಜೀವಕುಮಾರ್‌ ಕರಡು ಮತದಾರರ ಪಟ್ಟಿಯ ವಿವರಗಳನ್ನು ಬಿಡುಗಡೆಗೊಳಿಸಿದರು. ಆಕ್ಷೇಪಣೆಗಳನ್ನು ಸಲ್ಲಿಸಲು ಅ.10ರಿಂದ ನ.20ರವರೆಗೆ ಕಾಲಾವಕಾಶವಿದ್ದು, 2019ರ ಜ.4ರಂದು ಮತದಾರರ ಅಂತಿಮ ಪಟ್ಟಿ
ಪ್ರಕಟಿಸಲಾಗುವುದು ಎಂದು ತಿಳಿಸಿದರು. ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯ ಬಹಳ ಬಿಗುವಿನಿಂದ ನಡೆದ ಕಾರಣಕ್ಕಾಗಿ ಮರಣ ಹೊಂದಿದ,
ನಕಲಿ ಮತದಾರರ ಹೆಸರುಗಳನ್ನು ತೆಗೆದು ಹಾಕುವ ಕೆಲಸ ಯೋಜನಾಬದಟಛಿವಾಗಿ ನಡೆದಿದೆ. ಅದರಿಂದಾಗಿ 2018ರ ಮೇ ನಲ್ಲಿ 5.06 ಕೋಟಿ ಮತದಾರರು ಇದ್ದರು. ಈಗ ಮತದಾರರ ಸಂಖ್ಯೆ 5.03 ಕೋಟಿ ಆಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದರು.

ಕಳೆದ ವಿಧಾನಸಭಾ ಚುನಾವಣೆ ಬಳಿಕ 2019ನೇ ಸಾಲಿನ ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯ 2018ರ ಜುಲೈ 15ರಿಂದ ಆರಂಭಗೊಂಡಿತು. ಜುಲೈ 16ರಿಂದ ಆಗಸ್ಟ್‌ 10ರವರೆಗೆ ಮತಗಟ್ಟೆ ಅಧಿಕಾರಿಗಳು ಮನೆ-ಮನೆ ಸಮೀಕ್ಷೆ ನಡೆಸಿದ್ದಾರೆ. ಆ.27ರಿಂದ ಸೆ.15ರವರೆಗೆ ಆಯ್ದ ಮತಗಟ್ಟೆಗಳ ಸ್ಥಳ ಪರಿಶೀಲನೆ ಕಾರ್ಯ ನಡೆದಿದೆ. ಸೆ.17ರಿಂದ ಅ.10ರವರೆಗೆ ಕರಡು ಮತದಾರರ ಪಟ್ಟಿ ತಯಾರಿಕೆ ಮತ್ತು ಮುದ್ರಣ ಕಾರ್ಯ ನಡೆದಿದೆ. ಈಗ (ಅ.10) ರಂದು ಮತದಾರರ ಕರಡು ಪಟ್ಟಿ ಪ್ರಕಟಿಸಲಾ ಗಿದ್ದು, ಅದಕ್ಕೆ ಆಕ್ಷೇಪಣೆ ಸಲ್ಲಿಸಲು ನ.20ರವರೆಗೆ ಕಾಲಾವಕಾಶವಿದೆ. ಡಿ.20ರೊಳಗೆ ಎಲ್ಲ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲಾಗುವುದು. ಜ.3ರೊಳಗೆ ದತ್ತಾಂಶ ಕ್ರೋಢೀಕರಿಸಿ, ಜ.4ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದರು.

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ವೇಳೆ ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ಸೇರ್ಪಡೆಗೆ (ಫಾರಂ-6) ಒಟ್ಟು 1.96 ಲಕ್ಷ ಅರ್ಜಿಗಳು ಸ್ವೀಕರಿಸಲಾಗಿದ್ದು, ಅದರಲ್ಲಿ 1.82 ಲಕ್ಷ ಅರ್ಜಿಗಳನ್ನು ಅಂಗೀಕರಿಸಿ 13 ಸಾವಿರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಅದೇ ರೀತಿ ಹೆಸರು ತೆಗೆದು ಹಾಕಲು (ಫಾರಂ-7) 5.49 ಲಕ್ಷ ಆರ್ಜಿಗಳು ಬಂದಿದ್ದು, ಆ ಪೈಕಿ 5.45 ಲಕ್ಷ ಅರ್ಜಿಗಳನ್ನು ಅಂಗೀಕರಿಸಿ 4 ಸಾವಿರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ತಿದ್ದುಪಡಿಗೆ (ಫಾರಂ-8) 1.35 ಲಕ್ಷ ಅರ್ಜಿಗಳು ಸ್ವೀಕರಿಸಲಾಗಿದ್ದು, 1.33 ಲಕ್ಷ ಅರ್ಜಿಗಳನ್ನು ಅಂಗೀಕರಿಸಿ 1,200 ಅರ್ಜಿಗಳನ್ನು
ತಿರಸ್ಕರಿಸಲಾಯಿತು ಎಂದು ಮಾಹಿತಿ ನೀಡಿದರು.

ಮತದಾರರ ಗಾತ್ರ
ಕರಡು ಮತದಾರರ ಪಟ್ಟಿಯಲ್ಲಿರುವ 5.03 ಕೋಟಿ ಮತದಾರರ ಪೈಕಿ 2.54 ಕೋಟಿ ಪುರುಷರು, 2.48 ಕೋಟಿ ಮಹಿಳೆಯರು ಹಾಗೂ 4,178 ತೃತೀಯ ಲಿಂಗಿಗಳು ಇದ್ದಾರೆ. ಒಟ್ಟು ಮತದಾರರಲ್ಲಿ 18ರಿಂದ 19 ವರ್ಷದ 4.65 ಲಕ್ಷ ಮತದಾರರು ಇದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 89,57,064 ಮತದಾರರಿದ್ದು, ಈ ಪೈಕಿ 18ರಿಂದ 19 ವರ್ಷ ವಯಸ್ಸಿನ 49,920 ಮತದಾರರಿದ್ದಾರೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ದಕ್ಷಿಣದಲ್ಲಿ ಅತಿ ಹೆಚ್ಚು 5,97,904 ಹಾಗೂ ಶೃಂಗೇರಿ ಕ್ಷೇತ್ರದಲ್ಲಿ ಅತಿ ಕಡಿಮೆ 1.65 ಲಕ್ಷ ಮತದಾರರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next