ಶಿರಸಿ: ದೇಶದ 18 ಜಿಲ್ಲೆಗಳಲ್ಲಿ ಒಂದಾಗಿದ್ದ ಉತ್ತರ ಕನ್ನಡ ಇದೀಗ ಕೋವಿಡ್ ಸೋಂಕು ಶೇ.1.81ಕ್ಕೆ ಕುಸಿದಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.
ಅವರು ಮಂಗಳವಾರ ತಾಲೂಕಿನ ಉಂಚಳ್ಳಿಯಲ್ಲಿ ಹೆಬ್ಟಾರ್ ರೇಶನ್ ಕಿಟ್ ವಿತರಿಸಿ ಮಾತನಾಡಿದರು. 4ರಿಂದ2 ಅಂಕೆಗೆ ಕೋವಿಡ್ ಇಳಿದೆ. ಇದು ಹರ್ಷದ ಸಂಗತಿ. ಆದರೆ ಯಾರೂನಿರ್ಲಕ್ಷ್ಯಮಾಡಬಾರದು ಎಂದ ಅವರು, ಕೋವಿಡ್ ನಿಯಂತ್ರಣಕ್ಕೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇವೆ.ಯೋಗ ದಾನ ನೀಡಿದವರಿಗೆ ಸರಕಾರದಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ. ಅನೇಕ ಜನರಿಗೆ ತೊಂದರೆ ಆಗಿದೆ. ಅಂದು ವಿವಾಹ ನಿರ್ಬಂಧ ಹಾಗೂ ಉಳಿದಕಠಿಣ ಕ್ರಮಕ್ಕೆ ಹಿಂದೇಟು ಹಾಕಿದ್ದರೆ ಇನ್ನೂ ಎರಡು ತಿಂಗಳು ಕೊರೋನಾ ನಿಯಂತ್ರಣಕ್ಕೆ ಕಾಯಬೇಕಿತ್ತು ಎಂದರು.
ಮೂರನೇ ಅಲೆಗೆ ತಡೆಗೆ ಕ್ರಮ ಕೈಗೊಂಡಿದ್ದೇವೆ. 25 ಹೊಸ ಆಂಬ್ಯುಲೆನ್ಸ್ ಜಿಲ್ಲೆಗೆ ಬಂದಿದೆ. 88 ಡಾಕ್ಟರ್ ಬಂದಿದ್ದಾರೆ. ಹೈಟೆಕ್ ಆಸ್ಪತ್ರೆ ಇರದೇ ಇದ್ದರೂ ಎಲ್ಲ ಆಸ್ಪತ್ರೆಹೈಟೆಕ್ ಮಾಡುತ್ತಿದ್ದೇವೆ ಎಂದರು.
ಅಂಗನವಾಡಿ ಕಾರ್ಯಕರ್ತರು, ನರ್ಸಗಳಿಗೂ ಹೆಬ್ಬಾರ್ ಕಿಟ್ ನೀಡುತ್ತೇವೆ. ರಾಜ್ಯ ಕೇಂದ್ರ ಸರಕಾರಗಳು ಆರೋಗ್ಯಕ್ಕೆಮಹತ್ವ ನೀಡಿದೆ. ಆಕ್ಸಿಜನ್ ಪ್ರೊಡಕ್ಷನ್‌ಸೆಂಟರ್‌ಕೂಡ ಶೀಘ್ರ ಆಗಲಿದೆ. ಶಿರಸಿಯಲ್ಲೂಕೋವಿಡ್ ಟೆಸ್ಟ ಲ್ಯಾಬ್ ಬರಲಿದೆ. ಮಾಸದ ಅಂತ್ಯದಲ್ಲಿ ಎರಡೂ ಉದ್ಘಾಟನೆ ಆಗಲಿದೆ.ಈ ಸಲ 35 ಸಾವಿರಜನರಿಗೆ ಹೆಲ್ತ ಕಿಟ್‌ಕೊಡಲಾಯಿತು. ಈಗ ರೇಶನ್ ಕಿಟ್ ನೀಡಲಾಗುತ್ತಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ, ಜನರ ಅಂಗನವಾಡಿ ಕಾರ್ಯಕರ್ತರು,ಪೂರೈಸಲು ಸರಕಾರ, ಪಕ್ಷದ ಜೊತೆಗೆ 63 ಸಾವಿರ ರೇಶನ್ ಕಿಟ್‌ಗಳನ್ನು ಹೆಬ್ಟಾರರುಮತ್ತೂಮ್ಮೆ ಸ್ಪಂದನೆ ನೀಡಿದ್ದಾರೆ. ಒಂದು ಆಪ್ ಬಳಸಿ ಅನುಷ್ಠಾ ಮಾಡುತ್ತಿದ್ದಾರೆ ಎಂದರು.ತಹಶೀಲ್ದಾರ್ ಎಂ.ಆರ್. ಕುಲಕರ್ಣಿ,ಡಿವೈಎಸ್ ಪಿ ರವಿ ನಾಯಕ, ವಿವೇಕ ಹೆಬ್ಟಾರ, ನರಸಿಂಹ ಬಕ್ಕಳ, ದ್ಯಾಮಣ್ಣ ದೊಡ್ಮನಿ, ಉಷಾಹೆಗಡೆ, ಉಂಚಳ್ಳಿ ಗ್ರಾ.ಪಂ. ಅಧ್ಯಕ್ಷ ದೇವೇಂದ್ರ ನಾಯ್ಕ ಇತರರು ಇದ್ದರು.
ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಹೆಬ್ಬಾರ : ಇನ್ನೂ ಎರಡು ವರ್ಷಗಳಕಾಲ ಯಡಿಯೂರಪ್ಪನವರೇಮುಖ್ಯಮಂತ್ರಿಗಳಾಗಿರುತ್ತಾರೆ. ಅವರ ಬದಲಾವಣೆಯ ಪ್ರಶ್ನೆಯೇ ಇಲ್ಲಎಂದು ಸಚಿವ ಶಿವರಾಮ ಹೆಬ್ಟಾರಹೇಳಿದರು. ಸುದ್ದಿಗಾರರ ಪ್ರಶ್ನೆಗೆಪ್ರತಿಕ್ರಿಯಿಸಿದ ಅವರು, ರಮೇಶಜಾರಕಿಹೊಳಿ ಅವರು ರಾಜೀನಾಮೆನೀಡಲ್ಲ. ಅವರು ರಾಜಿನಾಮೆ ಕೊಡಬಾರದೆಂದು ನಾನೂ ಹೇಳುತ್ತೇನೆ ಎಂದರು.